ಕರ್ನಾಟಕ, ಕನ್ನಡಿಗ ಮತ್ತು ಕನ್ನಡ ಎದುರಿಸುತ್ತಿರುವ ಸವಾಲುಗಳ ಬಗ್ಗೆ ಪರಿಹಾರ ಕಂಡುಕೊಳ್ಳುವಲ್ಲಿ ಬಹಳ ಮುಖ್ಯವಾದ ಹೆಜ್ಜೆಯೆಂದರೆ ಆ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳುವುದು. ಹಾಗೆ ಅರ್ಥ ಮಾಡಿಕೊಳ್ಳಲು ಮಾಹಿತಿ, ಅಂಕಿಅಂಶಗಳು, ಸಂಶೋಧನೆ ಮತ್ತು ಅವುಗಳ ಆಧಾರದ ಮೇಲೆ ನಡೆಸುವ ವಿಶ್ಲೇಷಣೆಗೆ ಮಹತ್ವವಿದೆ. ಇದನ್ನು ವಸ್ತು ನಿಷ್ಟವಾಗಿ ಕೇವಲ ಕರ್ನಾಟಕ ಕೇಂದ್ರಿತವಾಗಿ ಮಾಡಬೇಕಾದ ತುರ್ತು ಅಗತ್ಯವಿದೆ. ಇಂದಿನ ದಿನದ ಸಮಸ್ಯೆಗಳನ್ನು ಅರಿತುಕೊಳ್ಳುವ ಪ್ರಯತ್ನ ಮಾಡಿ, ಅದನ್ನು ಹೊಸತೊಂದು ನೋಟದ ರೂಪದಲ್ಲಿ ಕನ್ನಡಿಗರ ಮುಂದೆ ಕೊಡುವ ಪ್ರಯತ್ನವೇ ಮುನ್ನೋಟ ಬ್ಲಾಗ್. ಸಮಸ್ಯೆಗಳ ಬಗ್ಗೆ ಹಲವರ ಲೋಕದೃಷ್ಟಿ ಹಲವು ರೀತಿಯಲ್ಲಿರಬಹುದು, ಆ ಪಟ್ಟಿಗೆ ಹೊಸತೊಂದು ಸೇರ್ಪಡೆ ಕರ್ನಾಟಕ ಕೇಂದ್ರಿತವಾದ ಈ ಪ್ರಯತ್ನ ಅನ್ನಬಹುದು.
ಮುನ್ನೋಟ ಹಲವು ಕನ್ನಡದ ಯುವ ಬರಹಗಾರರ ಒಟ್ಟು ಪ್ರಯತ್ನದಲ್ಲಿ ಮೂಡಿ ಬರಲಿದೆ. ಇದರ ಸಮನ್ವಯವನ್ನು ನಾನು ಅಂದರೆ ವಸಂತ ಶೆಟ್ಟಿ ನೋಡಿಕೊಳ್ಳಲಿದ್ದೇನೆ.
ಓದಿ, ನಿಮ್ಮ ಅನಿಸಿಕೆ ಅಭಿಪ್ರಾಯ ತಿಳಿಸಿ. ತಿಳಿಯುವ, ತಿಳಿಸುವ ಈ ಪಯಣದಲ್ಲಿ ಜೊತೆಯಾಗಿ.