Monthly Archives: ಜನವರಿ 2014
ಬದುಕುಳಿಯುತ್ತಿರುವ ಮೊಹಾವಿ ನುಡಿ ಕನ್ನಡಕ್ಕೆ ಹೇಳುತ್ತಿರುವ ಪಾಠವೇನು ಗೊತ್ತೇ?
ಅಮೇರಿಕದ ಇವತ್ತಿನ ನುಡಿ ಇಂಗ್ಲಿಷ್ ಆಗಿರಬಹುದು, ಆದರೆ ಅಲ್ಲಿನ ಮೂಲನಿವಾಸಿಗಳ ನುಡಿ ಇಂಗ್ಲಿಷ್ ಅಲ್ಲ. ಕಾಡು ಮೇಡಿನಲ್ಲಿದ್ದ ಬುಡಕಟ್ಟಿನ ಮೂಲ ನಿವಾಸಿಗಳು ಇಷ್ಟ ಪಟ್ಟೋ, ಒತ್ತಾಯದಿಂದಲೋ ಕಾಡು ತೊರೆದು ನಾಡು ಸೇರುತ್ತ ಅವರ ನುಡಿಗಳು ಹಂತ ಹಂತವಾಗಿ ಕಣ್ಮರೆಯಾಗುವ ಪ್ರಸಂಗ ಅಮೇರಿಕದಲ್ಲೂ ನಡೆಯುತ್ತಿದೆ. ಒಂದು ನುಡಿಯ ಸಾವಿನೊಂದಿಗೆ ಸಾವಿರಾರು ವರ್ಷಗಳ ಅವಧಿಯಲ್ಲಿ ಆ ನುಡಿಯಲ್ಲಿ ಹುಟ್ಟಿಕೊಂಡಿದ್ದ … ಓದನ್ನು ಮುಂದುವರೆಸಿ
ಕನ್ನಡ ಬರೀ ಪಡೆಯುವ ಭಾಷೆಯಿಂದ ಕೊಡುವ ಭಾಷೆಯಾಗುವುದು ಯಾವಾಗ ಅಂದರೆ…
ಹೊಸ ತಂತ್ರಜ್ಞಾನ ಬಂದಾಗಲೆಲ್ಲ ಭಾಷೆ ಬದಲಾಗುತ್ತದೆಯೇ? ಹೌದು ಅನ್ನುವುದಾದರೆ ಯಾವ ಸ್ವರೂಪದಲ್ಲಿ? ಇಂಗ್ಲಿಷ್ ಭಾಷೆ ಹಿಂದಿನಿಂದಲೂ ತಂತ್ರಜ್ಞಾನವನ್ನು ಒಗ್ಗಿಸಿಕೊಳ್ಳುವಲ್ಲಿ ಗೆಲುವು ಕಂಡ ನುಡಿಯಾಗಿದ್ದು ಹೇಗೆ? ಅನ್ನುವ ಬಗ್ಗೆ ಬ್ರಿಟಿನ್ನಿನ ಇಂಗ್ಲಿಷ್ ಭಾಷಾ ವಿಜ್ಞಾನಿ ಮತ್ತು ಲೇಖಕ ಡೇವಿಡ್ ಕ್ರಿಸ್ಟಲ್ ಸಾಕಷ್ಟು ಸಂಶೋಧನೆಗಳನ್ನು ಮಾಡಿದವರು. ಇತಿಹಾಸದುದ್ದಕ್ಕೂ ಹೊಸ ತಂತ್ರಜ್ಞಾನ ಇಂಗ್ಲಿಷ್ ಸಮಾಜವನ್ನು ತಟ್ಟಿದಾಗ ಅದು ಬಹಳ ಒಳ್ಳೆಯ … ಓದನ್ನು ಮುಂದುವರೆಸಿ
ಸಿಸಿಐ ಸಂಸ್ಥೆ ಜನ ಪರವಾದ ಸಂಸ್ಥೆ ಹೌದೋ ಅಲ್ಲವೋ?
ಕನ್ನಡದಲ್ಲಿ ಡಬ್ಬಿಂಗ್ ಮೇಲೆ ಹೇರಿರುವ ತಡೆಯಿಂದಾಗಿ ಜ್ಞಾನ, ಮನರಂಜನೆಯ ಒಳ್ಳೆಯ ಕಾರ್ಯಕ್ರಮಗಳನ್ನು ಕನ್ನಡದಲ್ಲಿ ನೋಡುವುದರಿಂದಾಗಿ ಕನ್ನಡಿಗರು ವಂಚಿತರಾಗಿದ್ದು, ಸಾರಾಸಗಟು ನಿಷೇಧ ಬೇಡ ಅನ್ನುವ ಜನಾಂದೋಲನ ನಡೆಯುತ್ತಿರುವುದು ಎಲ್ಲರಿಗೂ ತಿಳಿದಿರುವಂತದ್ದು. ಈ ಬಗ್ಗೆ ಕಾಂಪಿಟೇಶನ್ ಕಮಿಶನ್ ಆಫ್ ಇಂಡಿಯಾ (ಸಿ.ಸಿ.ಐ) ಅನ್ನುವ ಸಂಸ್ಥೆಗೆ ದೂರು ದಾಖಲಾಗಿ, ಅದರ ಬಗ್ಗೆ ತನಿಖೆ ನಡೆಯುತ್ತಿರುವುದು ಮತ್ತು ತನಿಖೆಯ ವರದಿ ಕನ್ನಡ … ಓದನ್ನು ಮುಂದುವರೆಸಿ
ಘಟನೆ ನಾಲ್ಕು ಆದರೆ ಸಮಸ್ಯೆ ಒಂದೇ.. ಭಾರತಕ್ಕೆ ಬೇಕು ಹೊಸ ಭಾಷಾ ನೀತಿ
ಘಟನೆ ಒಂದು: ಅದು ದಕ್ಷಿಣ ಬೆಂಗಳೂರಿನ ಕೆಳ ಮಧ್ಯಮ ವರ್ಗದವರೇ ಹೆಚ್ಚಿರುವ ಭಾಗದಲ್ಲಿನ ಸರ್ಕಾರಿ ಬ್ಯಾಂಕೊಂದರ ಶಾಖೆ. ಅಲ್ಲಿ ಆಧಾರ್ ಕಾರ್ಡ್ ಬಳಸಿ ಮನೆ ಬಳಸುವ ಗ್ಯಾಸ್ ಮೇಲಿನ ಸಬ್ಸಿಡಿ ಹಣ ಪಡೆಯುವ ವಿವರ ಸರಿಯಾಗಿ ತಿಳಿಯದೇ ಬ್ಯಾಂಕ್ ಸಿಬ್ಬಂದಿಗೆ ಮನವಿ ಮಾಡುತ್ತಿದ್ದ ನಾಲ್ಕಾರು ಪೆಚ್ಚುಮೊರೆಯ ಹೆಂಗಳೆಯರು. ಬ್ಯಾಂಕ್ ಮ್ಯಾನೆಜರ್ ಅನ್ನು ವಿಚಾರಿಸಿದಾಗ ಅವರು ತಿಳಿಸಿದ್ದು: … ಓದನ್ನು ಮುಂದುವರೆಸಿ
ಸಂಸದರ ನಿಧಿ ಬಳಕೆ – 15ನೇ ಲೋಕಸಭೆಯಲ್ಲಿ ಕರ್ನಾಟಕದ ಸಂಸದರ ಸಾಧನೆ
MPLAD (Member of Parliament Local Area Development) Fund ಸಂಸದರ ನಿಧಿ ಹೆಸರಿನಲ್ಲಿ ಪ್ರತಿಯೊಬ್ಬ ರಾಜ್ಯಸಭೆ ಮತ್ತು ಲೋಕಸಭೆ ಸಂಸದರಿಗೆ ತಲಾ ಐದು ಕೋಟಿಯಷ್ಟು ಹಣವನ್ನು ದೆಹಲಿಯ ಫೆಡರಲ್ ಸರ್ಕಾರ ನೀಡುತ್ತೆ. ತಮ್ಮ ಕ್ಷೇತ್ರದ ಡಿಸಿ ಅವರನ್ನು ಬಳಸಿಕೊಂಡು ಈ ಹಣವನ್ನು ಕೆಳಗಿನ ಕೆಲಸಗಳಿಗೆ ಖರ್ಚು ಮಾಡುವ ಆಯ್ಕೆ ಸಂಸದರಿಗಿದೆ: ಕುಡಿಯುವ ನೀರಿನ ಸೌಲಭ್ಯ, … ಓದನ್ನು ಮುಂದುವರೆಸಿ
ನಗರಗಳ ಬೆಳವಣಿಗೆ ಮತ್ತು ಕನ್ನಡಿಗರ ಏಳಿಗೆ
ಭಾರತ ಹಳ್ಳಿಗಳಲ್ಲಿದೆ ಅನ್ನುವ ಮಾತನ್ನು ಗಾಂಧಿ ಹೇಳಿದ್ದರು. ಸ್ವಾತಂತ್ರ್ಯ ಬಂದ 65 ವರ್ಷದ ನಂತರ ಇದೇ ಮಾತನ್ನು ಹೇಳಲು ಕಷ್ಟವಾಗಬಹುದು. ಇಂದು ಜಗತ್ತಿನ ಇತರ ಏಳಿಗೆ ಹೊಂದಿದ/ಹೊಂದುತ್ತಿರುವ ದೇಶಗಳಂತೆ ಭಾರತ ಒಕ್ಕೂಟವೂ ನಗರಗಳತ್ತ ವಾಲುತ್ತಿದೆ. ನಗರವಾಸಿ ಜನರ ಎಣಿಕೆ ಜನಗಣತಿಯಿಂದ ಜನಗಣತಿಗೆ ಏರು ಮುಖದಲ್ಲಿದೆ. ಕರ್ನಾಟಕವೂ ಇದಕ್ಕೆ ಹೊರತಾಗಿಲ್ಲ. ಸಾಗುವಳಿ ಆಧಾರಿತ ಅರ್ಥ ವ್ಯವಸ್ಥೆಯಿಂದ ಸೇವೆ … ಓದನ್ನು ಮುಂದುವರೆಸಿ