Monthly Archives: ಏಪ್ರಿಲ್ 2014
ಯಾರ ಪ್ರಣಾಳಿಕೆಯಲ್ಲೇನಿದೆ? – ಸಿ.ಪಿ.ಐ(ಎಂ)
– ಅನ್ನದಾನೇಶ್ ಸಿ ಪಿ ಐ ( ಎಂ ) ಪಕ್ಷ 2014 ಲೋಕಸಬೆ ಚುನಾವಣೆಯ ಪ್ರಣಾಳಿಕೆ ಬಿಡುಗಡೆ ಮಾಡಿದೆ. ಸದಾ ಎಡಪಂಥೀಯ ತತ್ವವನ್ನು ಪ್ರತಿಪಾದಿಸುವ ಸಿ ಪಿ ಐ, ಒಟ್ಟು 35 ಪುಟಗಳ ತನ್ನ ಪ್ರಣಾಳಿಕೆಯಲ್ಲಿ ಕೇವಲ ಎಡ ಪಂಥೀಯ ವಿಚಾರಗಳಲ್ಲದೆ ಒಕ್ಕೂಟ ವ್ಯವಸ್ಥೆ ಸರಿಪಡಿಸುವತ್ತ ಕೆಲವು ಅಂಶಗಳನ್ನು ಸೇರಿಸಿರುವುದು ಸ್ವಾಗತಾರ್ಹ. ಅವರು ಹೇಳಿರುವಂತ … ಓದನ್ನು ಮುಂದುವರೆಸಿ
ಯಾರ ಪ್ರಣಾಳಿಕೆಯಲ್ಲಿ ಏನಿದೆ? – ಜೆಡಿ(ಯು)
– ಹರಿಪ್ರಸಾದ್ ಹೊಳ್ಳ ಜಂಗಲ್ ರಾಜ್ ಎಂದೇ ಖ್ಯಾತಿ ಗಳಿಸಿದ್ದ ಬಿಹಾರ್ ರಾಜ್ಯವನ್ನು ಮರಳಿ ಅಭಿವೃದ್ದಿಯ ಪಥಕ್ಕೆ ತಂದ ಖ್ಯಾತಿ ಅಲ್ಲಿನ ಮುಖ್ಯಮಂತ್ರಿ ನಿತೀಶ್ ಕುಮಾರ್ ರದ್ದು. ಅವರ ಜೆಡಿಯು ಪಕ್ಷ ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಜೊತೆಗಿನ ಮೈತ್ರಿ ತೊರೆದು ಒಬ್ಬಂಟಿಯಾಗಿ ನಿಂತಿದೆ. ಅವರ ಪ್ರಣಾಳಿಕೆಯ ಮೇಲೆ ಕಣ್ಣಾಡಿಸಿದಾಗ ಅವರ ಗಮನ ಬಿಹಾರ್ ರಾಜ್ಯದತ್ತಲೇ … ಓದನ್ನು ಮುಂದುವರೆಸಿ
ಯಾರ ಪ್ರಣಾಳಿಕೆಯಲ್ಲೇನಿದೆ? – ತೃಣಮೂಲ ಕಾಂಗ್ರೆಸ್
– ಅನ್ನದಾನೇಶ್ ಪಶ್ಚಿಮ ಬಂಗಾಳದಲ್ಲಿ ಎಡ ಪಕ್ಷಗಳ ದಶಕಗಳ ಪ್ರಾಬಲ್ಯ ಮುರಿದು ಅಧಿಕಾರಕ್ಕೆ ಬಂದ ತೃಣಮೂಲ ಕಾಂಗ್ರೆಸಿನ ನಾಯಕಿ ಮಮತಾ ಬ್ಯಾನರ್ಜಿ ತಮ್ಮ ಪ್ರಣಾಳಿಕೆಯಲ್ಲಿ ಒಕ್ಕೂಟ ವ್ಯವಸ್ಥೆ ಮತ್ತು ಬೆಂಗಾಲಿಗಳ ಹಿತದ ಬಗ್ಗೆಯೂ ದನಿ ಎತ್ತಿದ್ದಾರೆ. ತೃಣಮೂಲ ಕಾಂಗ್ರೆಸ್ ಪಕ್ಷದ 2014 ರ ಲೋಕಸಭೆ ಚುನಾವಣೆ ಪ್ರಣಾಳಿಕೆಯಲ್ಲಿ ಒಟ್ಟು 62 ಅಂಶಗಳಿವೆ. ರಾಜ್ಯಗಳ ಹಿತ, ಒಕ್ಕೂಟ … ಓದನ್ನು ಮುಂದುವರೆಸಿ
ಯಾರ ಪ್ರಣಾಳಿಕೆಯಲ್ಲೇನಿದೆ? – ಬಿಜೆಪಿ
– ಪ್ರಿಯಾಂಕ್ ಕತ್ತಲಗಿರಿ ಲೋಕಸಭೆ 2014ರ ಚುನಾವಣೆಗಾಗಿ ಬಿಜೆಪಿಯು ಹೊರತಂದಿರುವ ಪ್ರಣಾಳಿಕೆಯನ್ನು ಕರ್ನಾಟಕಕ್ಕೆ ಒಳಿತೋ ಕೆಡುಕೋ ಎಂದು ನೋಡುವ ಬರಹ ಇದಾಗಿದೆ. ಆಸಕ್ತರು ಪ್ರಣಾಳಿಕೆಯನ್ನು ಈ ಕೊಂಡಿಯಲ್ಲಿ ನೋಡಬಹುದಾಗಿದ್ದು, ಪ್ರಣಾಳಿಕೆಯು ಇಂಗ್ಲೀಶ್ ಮತ್ತು ಹಿಂದಿಯಲ್ಲಿ ಮಾತ್ರಾ ಸಿಗುತ್ತಿದೆ. ಕರ್ನಾಟಕದಲ್ಲಿ ಚುನಾವಣೆ ನಡೆಯಲು ಇನ್ನು ಕೆಲವೇ ದಿನಗಳು ಬಾಕಿ ಇದ್ದರೂ, ಕನ್ನಡದಲ್ಲಿ ಬಿಜೆಪಿಯ ಪ್ರಣಾಳಿಕೆಯನ್ನು ಅಚ್ಚುಹಾಕಿಸಿಲ್ಲ. ಒಕ್ಕೂಟ … ಓದನ್ನು ಮುಂದುವರೆಸಿ
ಯಾರ ಪ್ರಣಾಳಿಕೆಯಲ್ಲೇನಿದೆ? – ಕಾಂಗ್ರೆಸ್ ಪಕ್ಷ
– ವಲ್ಲೀಶ ಕುಮಾರ್ ಪ್ರಜಾಪ್ರಭುತ್ವದಲ್ಲಿ ಆಡಳಿತವು ಜನರಿಗೆ ಹತ್ತಿರವಿರಬೇಕು. ಆಡಳಿತವನ್ನು ಜನರಿಗೆ ಹೆಚ್ಚು ಹತ್ತಿರವಾಗಿಸುವ ದೃಷ್ಟಿಯಿಂದ ರಾಜ್ಯಗಳಿಗೆ ಹೆಚ್ಚಿನ ಸ್ವಾಯತ್ತತೆ ಕೊಡಬೇಕು. ಆಗಲೇ ಆಡಳಿತ ಹೆಚ್ಚು ಪರಿಣಾಮಕಾರಿಯಾಗಲು ಸಾಧ್ಯ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ 2014ರ ಚುನಾವಣೆಯ ಪ್ರಣಾಳಿಕೆ ನೋಡಿದರೆ ಈ ಸತ್ಯ ಕಾಂಗ್ರೆಸ್ ಪಕ್ಷಕ್ಕೆ ಇನ್ನೂ ಅರಿವಾದಂತೆ ಕಾಣುತ್ತಿಲ್ಲ. ಅಥವಾ ಹೆಚ್ಚಿನ ಅಧಿಕಾರ ದೆಹಲಿಯಲ್ಲೇ ಇಟ್ಟುಕೊಂಡು ರಾಜ್ಯಗಳ ಮೇಲೆ ದರ್ಬಾರ್ ನಡೆಸುವ ಧೋರಣೆಯೇ ಎನ್ನಬಹುದು. … ಓದನ್ನು ಮುಂದುವರೆಸಿ
ಯಾರ ಪ್ರಣಾಳಿಕೆಯಲ್ಲೇನಿದೆ? – ಆಮ್ ಆದ್ಮಿ ಪಕ್ಷ
– ಪ್ರಿಯಾಂಕ್ ಕತ್ತಲಗಿರಿ ಇತ್ತೀಚೆಗೆ ಸುದ್ದಿಯಲ್ಲಿರುವ ಆಮ್ ಆದ್ಮಿ ಪಾರ್ಟಿಯ ಪ್ರಣಾಳಿಕೆಯನ್ನು, ಕರ್ನಾಟಕಕ್ಕೆ ಒಳಿತೇ ಕೆಡುಕೇ ಎಂಬ ಕಣ್ಣಿನಿಂದ ನೋಡಿ, ಬರೆಯಲಾಗಿರುವ ವಿಶ್ಲೇಷಣೆಯಿದು. ಆಸಕ್ತಿ ಇರುವವರು ಪ್ರಣಾಳಿಕೆಯನ್ನು ಈ ಕೊಂಡಿಯಲ್ಲಿ ನೋಡಬಹುದು. ಪ್ರಣಾಳಿಕೆಯು ಸದ್ಯಕ್ಕೆ ಇಂಗ್ಲೀಶಿನಲ್ಲಿ ಮಾತ್ರ ಸಿಗುತ್ತಿದ್ದು, ಕರ್ನಾಟಕದಲ್ಲಿನ ಚುನಾವಣೆಗೆ ಇನ್ನು ಹತ್ತೇ ದಿನಗಳು ಉಳಿದಿದ್ದರೂ ಕನ್ನಡದಲ್ಲಿ ಆಮ್ ಆದ್ಮಿ ಪಾರ್ಟಿಯ ಪ್ರಣಾಳಿಕೆ ಹೊರಬಂದಿಲ್ಲ. … ಓದನ್ನು ಮುಂದುವರೆಸಿ
ಯಾರ ಪ್ರಣಾಳಿಕೆಯಲ್ಲಿ ಏನಿದೆ? – ಡಿ.ಎಮ್.ಕೆ
ಲೋಕಸಬೆ ಚುನಾವಣೆ ಹತ್ತಿರ ಬಂದಂತೆಯೇ ಮರೆಯದೇ ಮತದಾನ ಮಾಡಿ, ಅದು ನಿಮ್ಮ ಕರ್ತವ್ಯ ಅನ್ನುವ ಮನವೊಲಿಸುವ ಮಾತುಗಳು ಎಲ್ಲೆಡೆ ಕೇಳುತ್ತಿವೆ. ಮತ ಹಾಕಬೇಕು ಅನ್ನುವುದೆನೋ ಸರಿ, ಆದರೆ ಯಾವ ಪಕ್ಷಕ್ಕೆ? ಅನ್ನುವ ಪ್ರಶ್ನೆಗೆ ಉತ್ತರ “ನಿಮ್ಮ ಆಶೋತ್ತರಗಳಿಗೆ ಯಾವ ಪಕ್ಷ ಸ್ಪಂದಿಸುತ್ತೋ ಆ ಪಕ್ಷಕ್ಕೆ” ಅನ್ನಬಹುದು. ಹಾಗಿದ್ದರೆ ಪಕ್ಷವೊಂದು ನಿಮ್ಮ ಆಶೋತ್ತರಕ್ಕೆ ಸ್ಪಂದಿಸುತ್ತೆ ಅನ್ನುವುದನ್ನು ತಿಳಿಯಲು … ಓದನ್ನು ಮುಂದುವರೆಸಿ
ಭಾಷಾವಾರು ಪ್ರಾಂತ್ಯಗಳು ಗಟ್ಟಿಯಾಗಿರುವಂತೆ ಸಂವಿಧಾನ ತಿದ್ದುಪಡಿಯಾಗಲಿ
ಕರ್ನಾಟಕದಲ್ಲಿನ ಎಲ್ಲ ವಾಣಿಜ್ಯ ಸಂಸ್ಥೆಗಳು ನಾಮಫಲಕಗಳಲ್ಲಿ ಕನ್ನಡ ಬಳಸಬೇಕು ಅನ್ನುವ ರಾಜ್ಯ ಸರ್ಕಾರದ ನಿಯಮವನ್ನು ಹೈಕೋರ್ಟ್ ತಳ್ಳಿ ಹಾಕಿರುವ ಸುದ್ದಿ ಹೊರ ಬಂದಿದೆ. ಕನ್ನಡದಲ್ಲಿ ವಾಹನಗಳ ಸಂಖ್ಯೆ ಬರೆಸುವುದು ತಪ್ಪು, ಕನ್ನಡ ಬಾವುಟ ಸರ್ಕಾರ ಹಾರಿಸುವುದು ತಪ್ಪು,ಕರ್ನಾಟಕದಲ್ಲಿ ಹುಟ್ಟುವ ಉದ್ಯೋಗವಕಾಶಗಳಲ್ಲಿ ನೆಲದ ಮಕ್ಕಳಿಗೆ ಆದ್ಯತೆ ಕೊಡಿ ಅನ್ನುವುದು ತಪ್ಪು, ಕರ್ನಾಟಕದ ಹೈಕೋರ್ಟಿನಲ್ಲಿ ಕನ್ನಡ ಬಳಸಿ ಅನ್ನುವ … ಓದನ್ನು ಮುಂದುವರೆಸಿ