ಯಾರ ಪ್ರಣಾಳಿಕೆಯಲ್ಲೇನಿದೆ? – ಕಾಂಗ್ರೆಸ್ ಪಕ್ಷ

ಪ್ರಜಾಪ್ರಭುತ್ವದಲ್ಲಿ ಆಡಳಿತವು ಜನರಿಗೆ ಹತ್ತಿರವಿರಬೇಕು. ಆಡಳಿತವನ್ನು ಜನರಿಗೆ ಹೆಚ್ಚು ಹತ್ತಿರವಾಗಿಸುವ ದೃಷ್ಟಿಯಿಂದ ರಾಜ್ಯಗಳಿಗೆ ಹೆಚ್ಚಿನ ಸ್ವಾಯತ್ತತೆ ಕೊಡಬೇಕು. ಆಗಲೇ ಆಡಳಿತ ಹೆಚ್ಚು ಪರಿಣಾಮಕಾರಿಯಾಗಲು ಸಾಧ್ಯ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ 2014ರ ಚುನಾವಣೆಯ ಪ್ರಣಾಳಿಕೆ ನೋಡಿದರೆ ಈ ಸತ್ಯ ಕಾಂಗ್ರೆಸ್ ಪಕ್ಷಕ್ಕೆ ಇನ್ನೂ ಅರಿವಾದಂತೆ ಕಾಣುತ್ತಿಲ್ಲ. ಅಥವಾ ಹೆಚ್ಚಿನ ಅಧಿಕಾರ ದೆಹಲಿಯಲ್ಲೇ ಇಟ್ಟುಕೊಂಡು ರಾಜ್ಯಗಳ ಮೇಲೆ ದರ್ಬಾರ್ ನಡೆಸುವ ಧೋರಣೆಯೇ ಎನ್ನಬಹುದು. ಪ್ರತಿಯೊಂದು ರಾಜ್ಯದ ಬೆಳವಣಿಗೆಗೆ ಕುರಿತಂತೆ ಒಂದೊಂದು ಪ್ರಣಾಳಿಕೆ ಇರಬೇಕಾದ್ದು ಸರಿಯಾದ ಪದ್ಧತಿ. ಅದಿಲ್ಲದಿದ್ದರೂ ಕೊನೆ ಪಕ್ಷ ರಾಜ್ಯಗಳಿಗೆ ಕೆಡುಕಾಗುವ ಅಂಶಗಳು ಇದ್ದರೆ ಅದನ್ನು ನಾವು ತಿಳಿದು, ನಮಗೆ ಕೆಡುಕು ಮಾಡದ ಪಕ್ಷವನ್ನು/ಅಭ್ಯರ್ಥಿಯನ್ನು ಗುರುತಿಸಿ ಮತದಾನ ಮಾಡಿದಾಗ ಪ್ರಜಾಪ್ರಭುತ್ವ ಹೆಚ್ಚು ಪರಿಣಾಮಕಾರಿಯಾಗಬಲ್ಲದು. ಕಾಂಗ್ರೆಸ್ ಪ್ರಣಾಳಿಕೆಯಲ್ಲಿರುವ ಅನೇಕ ವಿಷಯಗಳನ್ನು ಕರ್ನಾಟಕದ ಹಿತ ದೃಷ್ಟಿಯಿಂದ ನೋಡಿದಾಗ ಕಂಡ ಕೆಲ ಅಂಶಗಳು ಹೀಗಿವೆ.
ಮೊದಲಿಗೆ ಅವರ ಪ್ರಣಾಳಿಕೆಯಲ್ಲಿ ಹೀಗೆ ಹೇಳುತ್ತಾರೆ : 
 
“Our central values resonate the very idea of India, that has come to us over the centuries, an India that rejoices in and celebrates its many diversities, and builds on these diversities to strengthen the bonds of unity through secularism, pluralism, inclusion and social justice.” 
 
ಸಾರಾಂಶ – “ನಮ್ಮ ಸಿದ್ಧಾಂತವು ನೂರಾರು ವರ್ಷಗಳಿಂದ ಸಾಗಿ ಬಂದಿರುವ ವೈವಿಧ್ಯತೆಯಿಂದ ಕೂಡಿದ, ವೈವಿಧ್ಯತೆಯನ್ನು ಕೊಂಡಾಡುವ ಮತ್ತು ವೈವಿಧ್ಯತೆಯ ಮೂಲಕ ಸಮಾನತೆ ಮತ್ತು ಸಾಮಾಜಿಕ ನ್ಯಾಯವನ್ನು ರೂಪಿಸಿಕೊಂಡ ‘ಭಾರತ‘ ಕೇಂದ್ರಿತವಾಗಿದೆ.”
 
incಆದರೆ ಅವರ ಪ್ರಣಾಳಿಕೆಯ ಯಾವುದೇ ಭಾಗವೂ ಇದಕ್ಕೆ ಪೂರಕವಾಗಿಲ್ಲ. ಇಲ್ಲಿ ಕೆಲವು ಉದಾಹರಣೆಗಳನ್ನು ನೀಡಿದ್ದೇನೆ :

1. “We will endeavour to  create  a  stable  and  predictable business  environment.  We  will  ensure that  the  interface  between  government and industry is simplified and will usher in comprehensive regulatory changes in this regard. This will include optimising the  use  of  electronic  platforms  and minimising  human  interface  wherever possible. Redundant procedures will be weeded out and the E-biz Project will be implemented  across the  country, which will  ensure  ‘single  window  electronic clearances’  platform  for  all  investors, embracing  in  its  fold  all  regulatory approvals  of  the  Central  and  State governments.”

ಇಲ್ಲಿ ಉದ್ದಿಮೆಗಳ ತೆರೆಯುವವರಿಗೆ ರಾಜ್ಯ ಮತ್ತು ಕೇಂದ್ರದ ಒಪ್ಪಿಗೆಗಳಿಗೆ ಒಂದೇ ಮಿಮ್ಬಲೆಯ ಮೂಲಕ ಎಲ್ಲ ಒಪ್ಪಿಗೆಗಳೂ ಸಿಗುವ (Single window electronic clearance) ವ್ಯವಸ್ತೆ ಮಾಡುವ ಬಗ್ಗೆ ತಿಳಿಸಲಾಗಿದೆ. ಮೊದಲಾಗಿ ಉದ್ದಿಮೆಗಳಿಗೆ ಒಪ್ಪಿಗೆ ಕೊಡುವುದು ರಾಜ್ಯದ ಕೈಯ್ಯಲ್ಲಿರಬೇಕು. ಏಕೆಂದರೆ ಉದ್ದಿಮೆಯೊಂದು ನೆಲವೂರುವುದು ರಾಜ್ಯದ ನೆಲದಲ್ಲಿ. ಅದಕ್ಕೆ ಬೇಕಾಗುವ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ರಾಜ್ಯ ಸರ್ಕಾರವೇ. ನಮ್ಮ ಸಂವಿಧಾನದಲ್ಲಿ ಉದ್ದಿಮೆಗಳಿಗೆ ಸಂಬಂಧಿಸಿದಂತೆ ಸಂವಿಧಾನದಲ್ಲಿ ಈ ರೀತಿ ಹೇಳಲಾಗಿದೆ:

State list includes “Industries” subject to the provisions of Entries 7 and 52 of List I.

  • Entry 7 ನಲ್ಲಿ ಈ ರೀತಿ ಹೇಳಲಾಗಿದೆ  – “Industries declared by Parliament by law to be necessary for the purpose of defence or for the prosecution of war.”
  • Entry 52 ನಲ್ಲಿ ಈ ರೀತಿ ಹೇಳಲಾಗಿದೆ  – “Industries, the control of which by the Union is declared by Parliament by law to be expedient in the public interest.”

ಸಾರಾಂಶ – “ಸಾರ್ವಜನಿಕ ಕಾಳಜಿಯಿಂದ ಕೇಂದ್ರ ಸರ್ಕಾರ ತನ್ನ ತೆಕ್ಕೆಗೆ ಹಾಕಿಕೊಳ್ಳುವ ಮತ್ತು ರಕ್ಷಣಾಲಯಕ್ಕೆ (defence) ಸಂಬಂದಪಟ್ಟ ಉದ್ದಿಮೆಗಳನ್ನು ಬಿಟ್ಟು ಉಳಿದೆಲ್ಲವೂ ರಾಜ್ಯ ಪಟ್ಟಿಗೆಸೇರುತ್ತವೆ.”

ಹೀಗಿರುವಾಗ Single window electronic clearance ಯಾವ ಅರ್ಥವನ್ನು ಪಡೆಯುತ್ತದೆ? ಇದು ರಾಜ್ಯ ಪಟ್ಟಿಯ ಮೇಲೆ ಕೇಂದ್ರದ ಅತಿಕ್ರಮಣವೇ ಅಲ್ಲವೇ? ಒಂದು ರಾಜ್ಯದಲ್ಲಿ ನೆಲೆಯೂರುವ ಉದ್ದಿಮೆಗೆ ಒಪ್ಪಿಗೆಯನ್ನು ಹೇಗೆ ಸೂಚಿಸಬೇಕು, ಯಾವ ಯಾವ ನಿರ್ಬಂಧವಿರಬೇಕು ಎನ್ನುವ ಆಣತಿ ಬರಬೇಕಾದ್ದು ರಾಜ್ಯ ಸರ್ಕಾರದಿಂದ ಅಲ್ಲವೇ?

2. “The Indian National Congress will ensure that Mayors and Municipal Chairpersons have fully functional powers, so that they can operate as Chief Executives Officers of cities with executive powers and responsibilities and not just ceremonial positions. We will also increase the tenure of Mayors.”

ಸಂವಿಧಾನದ ಪ್ರಕಾರ ಮುನಿಸಿಪಲ್ ಆಡಳಿತ ಸಂಪೂರ್ಣವಾಗಿ ರಾಜ್ಯಗಳಿಗೆ ಸೇರಿದ್ದು. ಹೀಗಿರುವಾಗ ಮೇಯರ್ ಗಳಿಗೆ ಹೆಚ್ಚಿನ ಅಧಿಕಾರ ಕೊಡುವುದು ಮತ್ತು ಮುನಿಸಿಪಾಲ್ಟಿ ಆಡಳಿತಕ್ಕೆ ಬದಲಾವಣೆಗಳನ್ನು ತರುವುದು ಕೇಂದ್ರ ಸರ್ಕಾರದಿಂದ ಹೇಗೆ ಸಾಧ್ಯ ? ರಾಜ್ಯ ಸರ್ಕಾರಗಳ ಕೆಲಸಗಲ್ಲಿ ಮೂಗು ತೂರಿಸುವ ಕೆಲಸ ಕೇಂದ್ರ ಸರ್ಕಾರ ಏಕೆ ಮಾಡಬೇಕು?

3. “Sharing responsibility between States and Centre: States have the fiscal space to bear a reasonable proportion of the financial costs of implementing flagship programmes and must willingly do so, so that the Central government can allocate more resources for subjects such as defence, railways, national highways and telecommunications that are its exclusive responsibility.”

ಇಲ್ಲಿ ನೋಡಿ, ಹೊಣೆಗಾರಿಕೆಯ ಹಂಚಿಕೆ ಕೇಂದ್ರದಿಂದಲೇ ನಡೆಸುವಂತಿದೆ ಇವರ ಇಂಗಿತ. ಮೇಲಾಗಿ, ಕೇಂದ್ರ ಸರ್ಕಾರದ ಖಜಾನೆಯಲ್ಲಿರುವ ಹಣ ಯಾವುದು? ರಾಜ್ಯದ ಜನರು ತೆರಿಗೆಯ ರೂಪದಲ್ಲಿ ಕಟ್ಟಿರುವ ಹಣವೇ ಅಲ್ಲವೇ? ಕೇಂದ್ರ ರೂಪಿಸುವ ದೊಡ್ಡ ಮಟ್ಟದ ಯೋಜನೆಗಳಲ್ಲಿ ರಾಜ್ಯ ಸರ್ಕಾರವೇ ಹೆಚ್ಚಿನ ಹಣಕಾಸಿನ ಹೊರೆ ಹೊರಬೇಕಾದರೆ ನಾವು ಕೇಂದ್ರಕ್ಕೆ ಏಕೆ ದುಡ್ಡು ಕಟ್ಟಬೇಕು?

4. With a strong focus on education and vocational skills, we will endeavour to establish one Navodaya Vidyalaya type of school of high standards for weaker sections, in every Block of the country.

ನವೋದಯ, ಕೇಂದ್ರಿಯ ವಿದ್ಯಾಲಯದಂತಹ ಶಾಲೆಗಳು ಒಂದು ರೀತಿಯಲ್ಲಿ ಹಿಂದಿ ಹೇರಿಕೆಯ ಆಯುಧಗಳಾಗಿವೆ. ಶಿಕ್ಶಣವನ್ನು ಸಂವಿಧಾನದ ರಾಜ್ಯದ ಪಟ್ಟಿಗೆ ಸೇರಿಸುವ ಬದಲು ಕೇಂದ್ರದ ಮೂಲಕ ಅದನ್ನು ನಿಯಂತ್ರಿಸುವ ಕಾಂಗ್ರೆಸ್ ಯೋಚನೆ ಒಕ್ಕೂಟ ವ್ಯವಸ್ತೆಯ ಬಗ್ಗೆ ಅದಕ್ಕೆ ಎಳ್ಳಷ್ಟು ಬದ್ಧತೆಯಿಲ್ಲ ಅನ್ನುವುದನ್ನು ತೋರಿಸುತ್ತೆ.

ಇನ್ನುಳಿದಂತೆ ರಾಜ್ಯಗಳ ತೆರಿಗೆ ಸಂಗ್ರಹದ ಮೇಲೆ ಪರಿಣಾಮ ಬೀರುವ ಜಿ.ಎಸ್.ಟಿ ಮಸೂದೆ ಜಾರಿಗೆ ತರುವ ಬಗ್ಗೆ ಮಾತನಾಡುವ ಕಾಂಗ್ರೆಸ್ ಈ ಬಗ್ಗೆ ರಾಜ್ಯಗಳಿಗಿರುವ ಕಳವಳಗಳನ್ನು ಬಗೆಹರಿಸುವ ಬಗ್ಗೆ ಏನೂ ಮಾತನಾಡಿಲ್ಲ. ರಾಜ್ಯಗಳು ಹಲವು ಕಾಲದಿಂದ ಬೇಡುತ್ತಿರುವ ಬೇಡಿಕೆಯಾದ ಕಾರ್ಮಿಕ (ಲೇಬರ್) ವಿಷಯವನ್ನು ಸಂವಿಧಾನದ ಜಂಟಿ ಪಟ್ಟಿಯಿಂದ ರಾಜ್ಯದ ಪಟ್ಟಿಗೆ ಸೇರಿಸುವ ಬಗ್ಗೆಯೂ ಪ್ರಣಾಳಿಕೆ ಏನೂ ಹೇಳಲ್ಲ. ರಾಜ್ಯಗಳ ಕಾನೂನು ಸುವ್ಯವಸ್ತೆಯ ಮೇಲಿನ ಹಕ್ಕಿಗೆ ಧಕ್ಕೆ ತರುವ ಕೋಮು ಸೌಹಾರ್ದ ಮಸೂದೆಯನ್ನು ಜಾರಿಗೆ ತರುತ್ತೇವೆ ಅನ್ನುವ ಮೂಲಕ ಕಾಂಗ್ರೆಸ್ ತನ್ನ ಎಂದಿನ ದೆಹಲಿಯ ಮಾತು ದೇಶ ಕೇಳಬೇಕು ಅನ್ನುವ ಧೋರಣೆಯನ್ನು ತೋರಿಸಿದೆ.  ಒಟ್ಟಾರೆ ಕಾಂಗ್ರೆಸ್ ಪ್ರಣಾಳಿಕೆ ಕಾಂಗ್ರೆಸ್ ಪಕ್ಷಕ್ಕಿರುವ “ಈ ದೇಶಕ್ಕೆ ಕಾಂಗ್ರೆಸ್ ಒಂದೇ ಪರಿಹಾರ, ದೆಹಲಿಯಿಂದ ಆಳುತ್ತಾ ತಾವು ರೂಪಿಸುವ ನೀತಿ ನಿಯಮಗಳೊಂದೇ ಈ ದೇಶಕ್ಕೆ ದಾರಿ” ಅನ್ನುವ ಕಾಂಗ್ರೆಸ್ಸಿನ ಮನಸ್ಥಿತಿಗೆ ಕನ್ನಡಿ ಹಿಡಿಯುವಂತಿದೆ. ದೇಶ ಬದಲಾಗಿದೆ ಅನ್ನುವುದು ಅದಕ್ಕೆ ತಿಳಿದಂತಿಲ್ಲ.

This entry was posted in ಒಕ್ಕೂಟ ವ್ಯವಸ್ಥೆ, ಲೋಕಸಭೆ. Bookmark the permalink.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s