ಪಶ್ಚಿಮ ಬಂಗಾಳದಲ್ಲಿ ಎಡ ಪಕ್ಷಗಳ ದಶಕಗಳ ಪ್ರಾಬಲ್ಯ ಮುರಿದು ಅಧಿಕಾರಕ್ಕೆ ಬಂದ ತೃಣಮೂಲ ಕಾಂಗ್ರೆಸಿನ ನಾಯಕಿ ಮಮತಾ ಬ್ಯಾನರ್ಜಿ ತಮ್ಮ ಪ್ರಣಾಳಿಕೆಯಲ್ಲಿ ಒಕ್ಕೂಟ ವ್ಯವಸ್ಥೆ ಮತ್ತು ಬೆಂಗಾಲಿಗಳ ಹಿತದ ಬಗ್ಗೆಯೂ ದನಿ ಎತ್ತಿದ್ದಾರೆ. ತೃಣಮೂಲ ಕಾಂಗ್ರೆಸ್ ಪಕ್ಷದ 2014 ರ ಲೋಕಸಭೆ ಚುನಾವಣೆ ಪ್ರಣಾಳಿಕೆಯಲ್ಲಿ ಒಟ್ಟು 62 ಅಂಶಗಳಿವೆ. ರಾಜ್ಯಗಳ ಹಿತ, ಒಕ್ಕೂಟ ವ್ಯವಸ್ಥೆ,ಭಾರತದ ಎಲ್ಲ ಭಾಷೆಗಳ ಸಮಾನತೆಯ ಸುತ್ತ ಹಲವು ಅಂಶಗಳಿವೆ.
ಪ್ರಣಾಳಿಕೆಯ ಮೊದಲ ಅಂಶದಲ್ಲೇ ದೇಶದ ವೈವಿಧ್ಯತೆಯನ್ನು ಶಾಪದಂತೆ ಕಾಣದೇ ವರದಂತೆ ಕಂಡು ಕಾಪಾಡುವ ಬಗ್ಗೆ ತಮ್ಮ ಕಾಳಜಿಯನ್ನು ಮಮತಾ ವ್ಯಕ್ತಪಡಿಸುತ್ತಾರೆ.
We believe in a united India characterized by it’s unique diversities. It’s time a new model is unveiled in which the Unity of India is strengthened while the diversity of India is fully protected.
ವಿವರಣೆ: ಭಾರತದ ನುಡಿಯ ಹಲತನವನ್ನು ಹಲವರು ಭಾರತದ ಒಗ್ಗಟ್ಟಿಗೆ ಇರುವ ತೊಂದರೆಯೆಂದೇ ನೋಡುವ ಮನಸ್ಥಿತಿ ಹೊಂದಿದ್ದಾರೆ. ಆದರೆ ಇದು ತಪ್ಪು. ಈ ಹಲತನ ಅತ್ಯಂತ ಸಹಜವಾದದ್ದು. ಅದನ್ನು ಮುರಿದು “ಒಂದು ದೇಶ, ಒಂದು ಧರ್ಮ, ಒಂದು ನುಡಿ, ಒಂದು ಮಾರುಕಟ್ಟೆ” ಅನ್ನುವ ತಪ್ಪು ಕಲ್ಪನೆಯಲ್ಲಿ ಒಗ್ಗಟ್ಟು ಕಟ್ಟುತ್ತೇನೆ ಅಂತ ಹೊರಟರೆ ಭಾರತವೂ ಯು.ಎಸ್.ಎಸ್.ಆರ್ ನಂತೆ ಒಡಕಿನತ್ತ ಸಾಗಬಹುದು ಅನ್ನುವ ಕಾಳಜಿ ಅವರ ಮಾತಿನಲ್ಲಿದೆ.
ಪ್ರಣಾಳಿಕೆಯ ಮೂರನೆಯ ಅಂಶದಲ್ಲಿ ಭಾರತವೆಂಬ ಭಾಶಾವಾರು ಪ್ರಾಂತ್ಯಗಳ ಒಕ್ಕೂಟ ವ್ಯವಸ್ಥೆಯಲ್ಲಿ ಒಕ್ಕೂಟ ವ್ಯವಸ್ಥೆಯ ಆಚರಣೆ ನಿಜವಾದ ಅರ್ಥದಲ್ಲಿ ಜಾರಿಗೆ ಬಂದಿಲ್ಲ ಮತ್ತು ಅದನ್ನು ಸರಿಪಡಿಸಲು ತಾವು ಬದ್ದರಿದ್ದೇವೆ ಅನ್ನುವ ಮಾತನ್ನು ಅವರು ಹೇಳುತ್ತಾರೆ. ಅವರ ಮಾತು ಇಂತಿದೆ:
The commitment to federalism in our constitution has not carried out in spirit or in practice. Therefore, after 66 years of independence, the time has come for us to empower the states while the Center concentrates on it’s appropriate domain (like foreign policy, defense, etc. for the genuine)
ವಿವರಣೆ : ಈ ಅಂಶವು ಟಿ ಎಂ ಸಿ ಗೆ ಪ್ರಾದೇಶಿಕ ನುಡಿಗಳ ಬಗ್ಗೆ ಇರುವ ಕಾಳಜಿ ತೋರಿಸುತ್ತಾದರೂ ಒಕ್ಕೂಟ ವ್ಯವಸ್ಥೆ ದೃಷ್ಟಿಯಿಂದ ನೋಡಿದಾಗ ಕೇವಲ ‘ಕಾಳಜಿ’ ಮಾತ್ರ ಸಾಕಾಗದು. ಸಂವಿಧಾನದ ಎಂಟನೆ ಪರಿಚ್ಛೇದವು ಹಲವಾರು ಪ್ರಾದೇಶಿಕ ನುಡಿಗಳನ್ನು ಗುರುತಿಸಿದ್ದರೂ, ಹಿಂದಿ ಎಂಬ ಒಂದು ಪ್ರಾದೇಶಿಕ ನುಡಿಗೆ ಮಾತ್ರ ಕೇಂದ್ರ ಸರ್ಕಾರದ ಅಧಿಕೃತ ಭಾಷೆ ಪಟ್ಟವನ್ನು ನೀಡಲಾಗಿದೆ. ಭಾರತ ಸರ್ಕಾರ, ಎಂಟನೆ ಪರಿಚ್ಛೇದದ 22 ನುಡಿಗಳನ್ನು ಬೆಳೆಸುವ ಜವಾಬ್ದಾರಿ ಹೊಂದಿದೆಯಾದರೂ ಕೇವಲ ಒಂದು ನುಡಿಗೆ (ಹಿಂದಿ) ಮಾತ್ರ ಹೆಚ್ಚಿನ ಪ್ರೋತ್ಸಾಹ ನೀಡಿ ಬೆಳೆಸುತ್ತಿದೆ. ಸರಿಯಾದ ಒಕ್ಕೂಟ ವ್ಯವಸ್ಥೆಯಲ್ಲಿ ಎಲ್ಲ ನುಡಿಗಳಿಗೆ ಕೇಂದ್ರದ ಅಧಿಕೃತ ನುಡಿ ಸ್ಥಾನಮಾನ ಸಿಗಬೇಕು. ಈ ನಿಟ್ಟಿನಲ್ಲಿ ಪ್ರಾದೇಶಿಕ ನುಡಿಗಳಿಗೆ ವಿಶೇಷ ಒತ್ತು ಕೊಡುವ ಬದಲು, ಸಂವಿಧಾನ ಆರ್ಟಿಕಲ್ ಗಳಿಗೆ ತಿದ್ದುಪಡಿ ಮಾಡುವುದರತ್ತ ಗಮನವಹಿಸಬೇಕು