Monthly Archives: ನವೆಂಬರ್ 2014
ಇಂಗ್ಲಿಷ್ ಎಫ್.ಎಮ್ ಗಳು ಕನ್ನಡಕ್ಕೆ ಬದಲಾಗಿದ್ದು ಏಕೆ ಗೊತ್ತೆ?
ಜಾಗತೀಕರಣಕ್ಕೆ ಭಾರತ ತೆರೆದುಕೊಂಡ ನಂತರ ಹುಟ್ಟಿಕೊಂಡ ಒಂದು ದೊಡ್ಡ ಮಾಧ್ಯಮವೆಂದರೆ ಖಾಸಗಿ ಒಡೆತನದ ಬಾನುಲಿ ಕೇಂದ್ರಗಳು. ಇಂದು ಭಾರತದ ಯಾವುದೇ ದೊಡ್ಡ ಊರಿಗೆ ಹೋದರೂ ಅಲ್ಲಿ ಎಫ್.ಎಮ್ ವಾಹಿನಿಯ ಕಲರವ ಕೇಳಿಸದೇ ಇರದು. ಬೆಂಗಳೂರಿನಲ್ಲಿ ಇಂದು ಒಂಬತ್ತು ಎಫ್.ಎಮ್ ವಾಹಿನಿಗಳಿವೆ ಮತ್ತು ಬೆಂಗಳೂರಿನ 75 ಪ್ರತಿಶತಕ್ಕೂ ಹೆಚ್ಚಿನ ಜನರು ಕೇಳುವ ವಾಹಿನಿಗಳು ಕನ್ನಡ ವಾಹಿನಿಗಳೇ ಆಗಿವೆ. … ಓದನ್ನು ಮುಂದುವರೆಸಿ
ಹಿಂದಿ ಕಲಿತು ಸುಸಂಸ್ಕೃತರಾಗಿ : ಇದೆಂತಹ ಹುಚ್ಚು ವಾದ !
ಇತ್ತೀಚೆಗೆ ಮಕ್ಕಳ ದಿನಾಚರಣೆಯ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಕರ್ನಾಟಕದ ರಾಜ್ಯಪಾಲರು ಮಕ್ಕಳು ಹಿಂದಿ ಕಲಿತು ಸುಸಂಸ್ಕೃತರಾಗಬೇಕು ಎಂಬರ್ಥದ ಮಾತುಗಳನ್ನು ಆಡಿದ್ದು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಕರ್ನಾಟಕಕ್ಕೆ ರಾಜ್ಯಪಾಲರಾಗಿ ಇತ್ತೀಚಿನ ದಿನದಲ್ಲಿ ಬಂದ ಪ್ರತಿಯೊಬ್ಬರೂ ಹಿಂದಿ ಪ್ರಚಾರಕ್ಕೆ ಟೊಂಕ ಕಟ್ಟಿ ನಿಂತಂತೆ ಕಾಣುವುದು ಹಳೆಯ ವಿಚಾರ. ಆದರೆ ಇಂತಹ ಹೇಳಿಕೆಯ ಹಿಂದಿರುವ ಮನಸ್ಥಿತಿಯು ಭಾರತದ ಭಾಷಾ ವೈವಿಧ್ಯತೆಯನ್ನು ಹೇಗೆ ನೋಡುತ್ತಿದೆ … ಓದನ್ನು ಮುಂದುವರೆಸಿ
ಒಡೆದು ಎರಡಾದ ಕೋರಿಯಾದ ಕತೆ ಹೇಳುತ್ತಿದೆ: ಒಗ್ಗಟ್ಟಲ್ಲೇ ಬಲವಿದೆ.
ಎರಡನೆಯ ವಿಶ್ವಯುದ್ಧ ಮುಗಿದಾಗ ಅಮೇರಿಕ ಮತ್ತು ರಷ್ಯಾದ ನಡುವಿನ ತಿಕ್ಕಾಟಕ್ಕೆ ಬಲಿಯಾಗಿ ಎರಡು ಪಾಲಾದ ಇನ್ನೊಂದು ನಾಡು ಕೋರಿಯಾ. ಸಾವಿರ ವರ್ಷಗಳ ಕಾಲ ನಿರಂತರವಾಗಿ ಒಂದಾಗಿದ್ದ ನಾಡು 60 ವರ್ಷದ ಹಿಂದೆ ಒಡೆದು ದಕ್ಷಿಣ ಮತ್ತು ಉತ್ತರವೆಂದು ಬೇರೆಯಾಯಿತು. ನಾಯಕರೆನಿಸಿಕೊಂಡವರ ಸ್ವಪ್ರತಿಷ್ಟೆ ಮತ್ತು ಅಹಂ ಕೋರಿಯನ್ನರನ್ನು ಒಂದಾಗದಂತೆ ತಡೆದಿದ್ದರೂ ಇಂದಲ್ಲ ನಾಳೆ ಒಂದಾಗಲೇಬೇಕು ಅನ್ನುವ ಅನಿಸಿಕೆ … ಓದನ್ನು ಮುಂದುವರೆಸಿ
ಬರ್ಲಿನ್ ಗೋಡೆ ಒಡೆದು ಜರ್ಮನ್ನರು ಒಂದಾದ ಸಾಹಸದ ಕತೆಯಲ್ಲಿದೆ ನಮಗೊಂದು ಪಾಠ!
ನಾಡಿದು ಭಾನುವಾರ ನವೆಂಬರ್ 9 ಇತಿಹಾಸದಲ್ಲಿ ಒಂದು ನೆನಪಿಡಬೇಕಾದ ದಿನ. ಒಂದೇ ಭಾಷೆಯಾಡುವ ಜರ್ಮನ್ನರನ್ನು ಬೇರಾಗಿಸಿದ್ದ ಬರ್ಲಿನ್ನಿನ ಗೋಡೆ ನೆಲಕ್ಕುರಿಳಿದ್ದು ಇದೇ ದಿನ. ಸಾಮಾನ್ಯ ಜರ್ಮನ್ನರ, ಒಂದಾಗಬೇಕು ಅನ್ನುವ ಹಂಬಲದ, ಶಕ್ತಿಯ ಮುಂದೆ ಒಡೆದು ಆಳುವ ಕುತಂತ್ರಗಳೆಲ್ಲವೂ ಸೋತು ಮಂಡಿಯೂರಿದ್ದು ಇದೇ ದಿನ. ಇಂದಿನ ಜರ್ಮನಿಯ ಏಳಿಗೆಯಲ್ಲಿ 25 ವರ್ಷದ ಹಿಂದೆ ನಡೆದ ಈ ಘಟನೆಯ … ಓದನ್ನು ಮುಂದುವರೆಸಿ