Monthly Archives: ಡಿಸೆಂಬರ್ 2014
ಎಲ್ಲ ಭಾಷೆಗಳನ್ನು ಕೇಂದ್ರದ ಅಧಿಕೃತ ನುಡಿ ಯಾಕೆ ಮಾಡಬೇಕು? – ಓಲ್ಗಾ ಕೊಸ್ಮಿಡೊ ಹೇಳ್ತಾರೆ ಕೇಳಿ
ಸಂವಿಧಾನದ ಎಂಟನೆಯ ಪರಿಚ್ಛೇದದಲ್ಲಿರುವ ಎಲ್ಲ ಭಾಷೆಗಳನ್ನು ಕೇಂದ್ರ ಸರ್ಕಾರದ ಆಡಳಿತ ನುಡಿಗಳನ್ನಾಗಿಸಿ, ಆಯಾ ರಾಜ್ಯದಲ್ಲಿ ಕೇಂದ್ರ ಸರ್ಕಾರ ಅಲ್ಲಿನ ನುಡಿಗಳಲ್ಲೇ ತನ್ನೆಲ್ಲ ನಾಗರೀಕ ಸೇವೆಗಳನ್ನು ಕೊಡಬೇಕು ಮತ್ತು ಆ ಮೂಲಕ ಸಾಮಾನ್ಯ ಜನರಿಗೆ ಅನುಕೂಲ ಕಲ್ಪಿಸಬೇಕು ಅನ್ನುವುದು ಸ್ವಾತಂತ್ರ್ಯ ಬಂದಾಗಿನಿಂದಲೂ ಇರುವ ಜೀವಂತ ಬೇಡಿಕೆ. ಈ ಬಗ್ಗೆ ಕಳೆದ ವಾರ ರಾಜ್ಯಸಭೆಯಲ್ಲಿ ತಮಿಳುನಾಡಿನ ಕಾಂಗ್ರೆಸ್ ಸದಸ್ಯ … ಓದನ್ನು ಮುಂದುವರೆಸಿ
ಗಂಗ್ನಮ್ ಸ್ಟೈಲ್ ಅನ್ನುವ ಕೊರಿಯನ್ ಹಾಡಿನ ಗೆಲುವಿನ ಹಿಂದಿನ ಕತೆ ಗೊತ್ತೇ?
ಜಗತ್ತಿನಾದ್ಯಂತ ಹುಚ್ಚೆಬ್ಬಿಸಿದ್ದ ಕೊರಿಯನ್ ಹಾಡು ‘ಗಂಗ್ನಮ್ ಸ್ಟೈಲ್’ ಆನ್ ಲೈನ್ ವಿಡಿಯೋ ತಾಣ ಯುಟ್ಯೂಬಿನಲ್ಲಿ 214 ಕೋಟಿ ಹಿಟ್ಸ್ ಪಡೆದಿದ್ದು, ಅದರ ಹೆಚ್ಚುತ್ತಿರುವ ನೋಡುಗರ ಎಣಿಕೆಯನ್ನು ಎಣಿಸಲು ಸೋತು ಯುಟ್ಯೂಬ್ ತನ್ನ ವಿಡಿಯೋ ಎಣಿಕೆ ಸಾಮರ್ಥ್ಯವನ್ನೇ ಹೆಚ್ಚಿಸಿಕೊಂಡ ಸುದ್ದಿ ಇತ್ತೀಚೆಗೆ ಪತ್ರಿಕೆಗಳಲ್ಲಿ ಓದಿದ್ದೆವು. ಇಂಗ್ಲಿಷ್ ಅಲ್ಲದ ಭಾಷೆಯಲ್ಲಿರುವ ಹಾಡೊಂದು ಜಗತ್ತಿನ ಅತ್ಯಂತ ಜನಪ್ರಿಯ ಹಾಡಿನ ಪಟ್ಟಿಗೆ … ಓದನ್ನು ಮುಂದುವರೆಸಿ
ಯೋಜನಾ ಆಯೋಗ ರದ್ದಾಗಲಿ, ಅದರ ಕೈಯಲ್ಲಿನ ಅಧಿಕಾರ ರಾಜ್ಯಗಳಿಗೆ ದಕ್ಕಲಿ
ಯೋಜನಾ ಆಯೋಗ ಅನ್ನುವ ಒಕ್ಕೂಟ ವಿರೋಧಿ ವ್ಯವಸ್ಥೆಯನ್ನು ರದ್ದುಗೊಳಿಸಿ ಸಹಕಾರ ತತ್ವ ಆಧರಿಸಿದ ಒಕ್ಕೂಟ ವ್ಯವಸ್ಥೆಯನ್ನು ಬಲಪಡಿಸುವತ್ತ ಹೊಸ ಸಂಸ್ಥೆಯೊಂದನ್ನು ಹುಟ್ಟು ಹಾಕುವ ಬಗ್ಗೆ ಗಮನಹರಿಸುವುದಾಗಿ ಸ್ವಾತಂತ್ರ ದಿನದ ಭಾಷಣದಲ್ಲಿ ಪ್ರಧಾನಿ ಮೋದಿಯವರು ಘೋಷಿಸಿದ್ದರು. ಅದರಂತೆ ಈ ವಾರ ದೆಹಲಿಯಲ್ಲಿ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆದು ಇದರ ಮುಂದಿನ ಹೆಜ್ಜೆ ಯಾವ ರೀತಿ ಇರಬೇಕು … ಓದನ್ನು ಮುಂದುವರೆಸಿ
ಇಲ್ಲಿನ ಶಾಲೆಗಳಲ್ಲಿ ಜರ್ಮನ್ ಕಲಿಸುವ ಬಗ್ಗೆ ಅದ್ಯಾಕೆ ಜರ್ಮನ್ನರು ಇಷ್ಟು ತಲೆ ಕೆಡಿಸಿಕೊಂಡಿದ್ದಾರೆ?
ಕೇಂದ್ರಿಯ ವಿದ್ಯಾಲಯಗಳಲ್ಲಿ ಮೂರನೆಯ ವಿಷಯವಾಗಿ ಕಲಿಸಲಾಗುತ್ತಿದ್ದ ಜರ್ಮನ್ ಅನ್ನು ಕೈ ಬಿಡುವ ಕೇಂದ್ರ ಸರ್ಕಾರದ ನಿಲುವು ಜರ್ಮನಿಯಲ್ಲಿ ಸಾಕಷ್ಟು ಚರ್ಚೆಯನ್ನೇ ಹುಟ್ಟು ಹಾಕಿತು. ಜರ್ಮನ್ನ ಚಾನ್ಸೆಲರ್ ಅಂಜೆಲಾ ಮರ್ಕೆಲ್ ಭಾರತದ ಪ್ರಧಾನಿ ಮೋದಿಯವರ ಬಳಿಯೇ ಈ ವಿಷಯ ಪ್ರಸ್ತಾಪಿಸುವ ಹಂತಕ್ಕೂ ಇದು ಹೋಯಿತು. ಇಡೀ ಭಾರತದಲ್ಲಿ ಇರುವ 1053 ಕೇಂದ್ರಿಯ ವಿದ್ಯಾಲಯಗಳಲ್ಲಿ (ಸುಮ್ಮನೆ ಹೋಲಿಕೆ ಮಾಡಿ … ಓದನ್ನು ಮುಂದುವರೆಸಿ