Monthly Archives: ಜನವರಿ 2015

ಸಾಹಿತ್ಯ ಪರಿಷತ್ತು – ಬಂದಿದೆ ಹೊಸ ಆಲೋಚನೆಗಳಿಗೆ ತೆರೆದುಕೊಳ್ಳುವ ಹೊತ್ತು

ಮತ್ತೊಂದು ಕನ್ನಡ ಸಾಹಿತ್ಯ ಸಮ್ಮೇಳನ ನಮ್ಮ ಮುಂದಿದೆ. 1915ರಲ್ಲಿ ಹುಟ್ಟಿದ ಸಾಹಿತ್ಯ ಪರಿಷತ್ತಿಗೆ ಈಗ ನೂರು ವರುಶದ ಸಂಭ್ರಮ. ಸಾಹಿತ್ಯದ ಪಸರಿಸುವಿಕೆಗೆಂದು ಹುಟ್ಟಿದ ಪರಿಷತ್ತು ಮುಂದೆ ಕರ್ನಾಟಕದ ಏಕೀಕರಣದಲ್ಲೂ ಮುಖ್ಯ ಪಾತ್ರ ವಹಿಸಿತು. ಏಕೀಕರಣದ ನಂತರ ಕನ್ನಡಿಗರೆಲ್ಲರ ಪ್ರತಿನಿಧಿ ಸಂಸ್ಥೆಯೆಂದೇ ಮನ್ನಣೆ ಪಡೆಯಿತು. ಅಂತೆಯೇ ಪರಿಷತ್ತು ಹಮ್ಮಿಕೊಳ್ಳುವ ಸಾಹಿತ್ಯ ಸಮ್ಮೇಳನವನ್ನು ಕನ್ನಡ ಸಮಾಜ, ಕನ್ನಡದ ಸರ್ಕಾರ … ಓದನ್ನು ಮುಂದುವರೆಸಿ

Posted in ಕನ್ನಡ | ನಿಮ್ಮ ಟಿಪ್ಪಣಿ ಬರೆಯಿರಿ

ಹಿಂದಿ ಹೇರಿಕೆ ವಿರೋಧಿ ಚಳುವಳಿಗೆ ಐವತ್ತು ವರುಶ – ಬದಲಾಗಲಿ ಭಾಷಾ ನೀತಿ

ನಾಡಿದು ಭಾನುವಾರ ಜನವರಿ 25ಕ್ಕೆ ತಮಿಳುನಾಡಿನಲ್ಲಿ ಹಿಂದಿ ಹೇರಿಕೆಯನ್ನು ವಿರೋಧಿಸಿ ನಡೆದ ಚಳುವಳಿಗೆ ಐವತ್ತು ವರ್ಷಗಳಾಗುತ್ತಿದೆ. ಸ್ವತಂತ್ರ ಭಾರತದ ಇತಿಹಾಸದಲ್ಲಿ ಭಾಷಾ ಸಮಾನತೆಗಾಗಿ ನಡೆದ ಅತಿ ದೊಡ್ಡ ಚಳುವಳಿಯಿದು. ಅನೇಕ ವಿದ್ಯಾರ್ಥಿಗಳು ತಮ್ಮ ಪ್ರಾಣ ಕೊಟ್ಟ ಚಳುವಳಿಯೆಂದು ಇದು ಇತಿಹಾಸದಲ್ಲಿ ದಾಖಲಾಗಿದೆ. ಭಾರತಕ್ಕೊಂದು ಭಾಷೆ ಬೇಕು, ಮತ್ತದು ಹಿಂದಿಯೇ ಆಗಬೇಕು ಅನ್ನುವ ಹಿಂದಿವಾದಿಗಳ ಭಾಷಾಂಧ ನಿಲುವು … ಓದನ್ನು ಮುಂದುವರೆಸಿ

Posted in ಹಿಂದಿ ಹೇರಿಕೆ | ನಿಮ್ಮ ಟಿಪ್ಪಣಿ ಬರೆಯಿರಿ

ಕನ್ನಡ ನಾಳೆಯ ನುಡಿಯಾಗಬೇಕೆಂದರೆ ಅಂತರ್ಜಾಲವನ್ನು ಕನ್ನಡಕ್ಕೆ ಒಗ್ಗಿಸಿಕೊಳ್ಳದೇ ದಾರಿಯಿಲ್ಲ

ಆ ನಿನ್ನ ದೇವರು ಎಲ್ಲಿದ್ದಾನೆ ಎಂದು ಕೇಳಿದ ಹಿರಣ್ಯಕಶಿಪುವಿಗೆ ಭಕ್ತ ಪ್ರಹ್ಲಾದ “ಎಲ್ಲೆಲ್ಲೂ ಇದ್ದಾನೆ” ಎಂದು ಉತ್ತರಿಸಿದನಂತೆ. ಇಂದೆನಾದರೂ ಈ ಪ್ರಶ್ನೆ ಕೇಳುವುದಿದ್ದರೆ ದೇವರ ಜಾಗದಲ್ಲಿ ಅಂತರ್ಜಾಲ ಬಂದು ಕೂರಬಹುದು. ಅಂತಹದೊಂದು ವ್ಯಾಪ್ತಿ ಅದಕ್ಕೆ ಇಂದು ದಕ್ಕುತ್ತಿದೆ. ಅಮೇರಿಕದ ಮಿಲಿಟರಿ ತನ್ನ ಬಳಕೆಗೆಂದು ಕಟ್ಟಿಕೊಂಡ ಚಿಕ್ಕದೊಂದು ವ್ಯವಸ್ಥೆ ಇಂದು ಅಂತರ್ಜಾಲದ ರೂಪದಲ್ಲಿ ಇಡೀ ಜಗತ್ತನ್ನೇ ತನ್ನ … ಓದನ್ನು ಮುಂದುವರೆಸಿ

Posted in ಕನ್ನಡ, ಜಾಗತೀಕರಣ | ನಿಮ್ಮ ಟಿಪ್ಪಣಿ ಬರೆಯಿರಿ

ಕನ್ನಡಗರೇಕೆ ಉದ್ಯಮಿಗಳಾಗಿಲ್ಲ?

“ಅಯ್ಯೋ, ಕನ್ನಡಿಗರು ಅಲ್ಪ ತೃಪ್ತರು, ಅವರಿಗೆ ಮುನ್ನುಗ್ಗೋ ಗುಣವಿಲ್ಲ, ವ್ಯಾಪಾರ-ವಹಿವಾಟುಗಳಲ್ಲಿ ದೊಡ್ಡದನ್ನು ಸಾಧಿಸುವ ಕನಸಾಗಲಿ, ಛಲವಾಗಲಿ ಅವರಲ್ಲಿಲ್ಲ.” ಇವು ಕನ್ನಡಿಗರ ಬಗ್ಗೆ ಸರ್ವೇಸಾಮಾನ್ಯವಾಗಿ ಕೇಳಿ ಬರುವ ಮಾತುಗಳು. ಇದರಲ್ಲಿ ಒಂದಿಷ್ಟು ನಿಜವಿದೆ. ಆದರೆ ಇವು ಕೇವಲ ನಮ್ಮ ಸಮಸ್ಯೆಯೇ? ಇದನ್ನು ಎಂದಿಗೂ ಬದಲಿಸಲಾಗದೇ? ಈ ಸಮಸ್ಯೆ ಇತರೆ ಭಾಷಿಕರಲ್ಲಿಲ್ಲವೇ? ಅವರಲ್ಲಿ ಉದ್ಯಮಶೀಲತೆಯ ಗುಣವಿದೆಯೇ? ಇದ್ದರೆ ಅದು … ಓದನ್ನು ಮುಂದುವರೆಸಿ

Posted in ಕರ್ನಾಟಕ, Capital | 2 ಟಿಪ್ಪಣಿಗಳು

ಅನಿಯಂತ್ರಿತ ವಲಸೆ ಕನ್ನಡ ನಾಡಿಗೆ ತರಲಿದೆ ಆಪತ್ತು

ಬೆಂಗಳೂರಿನಲ್ಲಿ ಮತ್ತೆ ಉಗ್ರರು ರಕ್ತ ಚೆಲ್ಲಿದ್ದಾರೆ. ಎರಡು ವಾರದ ಹಿಂದೆ ಬೆಂಗಳೂರಿನಲ್ಲಿ ಕುಳಿತು ಐಸಿಸ್ ಅನ್ನುವ ಮನುಷ್ಯ ವಿರೋಧಿ ಉಗ್ರ ಸಂಘಟನೆಯನ್ನು ಬೆಂಬಲಿಸಿ ಅಂತರ್ಜಾಲದ ಸಾಮಾಜಿಕ ತಾಣ ಟ್ವಿಟರಿನಲ್ಲಿ ಅಮಾಯಕ ಯುವಕರ ಮೆದುಳು ತೊಳೆಯುತ್ತಿದ್ದ ಮೆಹ್ದಿ ಮಸ್ರೂರ್ ಬಿಸ್ವಾಸ್ ಅನ್ನುವ ಸುಶಿಕ್ಷಿತ ವ್ಯಕ್ತಿಯನ್ನು ಪೋಲಿಸರು ಬಂಧಿಸಿದ್ದು ವರದಿಯಾಯ್ತು. ಎರಡೂ ಪ್ರಕರಣಗಳು ನಮ್ಮ ಪೋಲಿಸರ ಭದ್ರತಾ ವೈಫಲ್ಯಕ್ಕೆ … ಓದನ್ನು ಮುಂದುವರೆಸಿ

Posted in ಒಕ್ಕೂಟ ವ್ಯವಸ್ಥೆ, ಕರ್ನಾಟಕ | ನಿಮ್ಮ ಟಿಪ್ಪಣಿ ಬರೆಯಿರಿ