ಕನ್ನಡಗರೇಕೆ ಉದ್ಯಮಿಗಳಾಗಿಲ್ಲ?

“ಅಯ್ಯೋ, ಕನ್ನಡಿಗರು ಅಲ್ಪ ತೃಪ್ತರು, ಅವರಿಗೆ ಮುನ್ನುಗ್ಗೋ ಗುಣವಿಲ್ಲ, ವ್ಯಾಪಾರ-ವಹಿವಾಟುಗಳಲ್ಲಿ ದೊಡ್ಡದನ್ನು ಸಾಧಿಸುವ ಕನಸಾಗಲಿ, ಛಲವಾಗಲಿ ಅವರಲ್ಲಿಲ್ಲ.” ಇವು ಕನ್ನಡಿಗರ ಬಗ್ಗೆ ಸರ್ವೇಸಾಮಾನ್ಯವಾಗಿ ಕೇಳಿ ಬರುವ ಮಾತುಗಳು. ಇದರಲ್ಲಿ ಒಂದಿಷ್ಟು ನಿಜವಿದೆ. ಆದರೆ ಇವು ಕೇವಲ ನಮ್ಮ ಸಮಸ್ಯೆಯೇ? ಇದನ್ನು ಎಂದಿಗೂ ಬದಲಿಸಲಾಗದೇ? ಈ ಸಮಸ್ಯೆ ಇತರೆ ಭಾಷಿಕರಲ್ಲಿಲ್ಲವೇ? ಅವರಲ್ಲಿ ಉದ್ಯಮಶೀಲತೆಯ ಗುಣವಿದೆಯೇ? ಇದ್ದರೆ ಅದು ಮೊದಲೇ ಇತ್ತೇ, ಅಥವಾ ಇತ್ತೀಚಿನ ದಿನಗಳಲ್ಲಿ ಬಂತೇ? ಇಂತಹ ಪ್ರಶ್ನೆಗಳನ್ನಿಟ್ಟುಕೊಂಡು ಹೊರಟವರಿಗೆ ಸಾಕಷ್ಟು ಉತ್ತರ ಪತ್ರಕರ್ತ ಹರೀಶ್ ದಾಮೋದರನ್ ಅವರ “ಇಂಡಿಯಾಸ್ ನ್ಯೂ ಕ್ಯಾಪಿಟಲಿಸ್ಟ್ಸ್” ಅನ್ನುವ ಇಂಗ್ಲಿಷ್ ಹೊತ್ತಗೆಯಲ್ಲಿ ಸಿಗುತ್ತೆ.

ಏನಿದೆ ಹೊತ್ತಗೆಯಲ್ಲಿ?

ಭಾರತದ ವ್ಯಾಪಾರಿ ಜಾತಿ-ಸಮುದಾಯಗಳಾವುವು, ಅವುಗಳ ಯಶಸ್ಸಿನಲ್ಲಿ ಅವರ ಜಾತಿಯ-ಸಮುದಾಯದ ಪಾತ್ರವೇನು? ಅವು ಸ್ವಾತಂತ್ರ್ಯಕ್ಕೆ ಮುಂಚೆ ಮತ್ತು ನಂತರದ ದಿನಗಳಲ್ಲಿ ಭಾರತದಲ್ಲಿ ಖಾಸಗಿ ವಲಯದಲ್ಲಿ ಉದ್ಯಮಶೀಲತೆಯನ್ನು ಹೇಗೆ ಪ್ರಭಾವಿಸಿದವು ಅನ್ನುವ ಹುಡುಕಾಟದಲ್ಲಿ ಹರೀಶ್ ಬರೆಯುವ ಈ ಹೊತ್ತಗೆ ಸಾಕಷ್ಟು ಒಳನೋಟಗಳನ್ನು ಹೊಂದಿದೆ. ಜಾತಿಯ ಮುಚ್ಚಿದ ಗುಂಪಿನಲ್ಲಿ ಏರ್ಪಡುತ್ತಿದ್ದ, ನಂಬಿಕೆಯ ತಳಹದಿಯ ಮೇಲೆ ಹುಂಡಿ ಪದ್ದತಿಯಡಿ ಹಣವರ್ಗಾವಣೆ ಮಾಡುತ್ತ, ಬ್ರಿಟಿಷರ ವ್ಯಾಪಾರಕ್ಕೂ ಎಲ್ಲ ಬೆಂಬಲ ಕೊಡುತ್ತ ಸಂಪತ್ತು ಒಟ್ಟುಮಾಡಿಕೊಂಡ ಮಾರ್ವಾಡಿಗಳು, ಉತ್ತರ ಭಾರತದ ಬ್ರಾಹ್ಮಣ-ಕ್ಷತ್ರೀಯ ಸಮುದಾಯಗಳಿರಬಹುದು, ಪಶ್ಚಿಮ ಏಷ್ಯಾ ಮೂಲದಿಂದ ಬಂದು ಚೈನಾದ ಜೊತೆ ಅಫೀಮು ವ್ಯಾಪಾರ ಮಾಡುತ್ತ, ಎರಡು ವಿಶ್ವಯುದ್ಧದಲ್ಲಿ ಬ್ರಿಟಿಷರಿಗೆ ಸರಕು ಪೂರೈಸುತ್ತ ಭಾರತದಲ್ಲಿ ನೆಲೆ ನಿಂತ ಪಾರ್ಸಿಗಳಿರಬಹುದು, ಭೂ ಒಡೆತನವನ್ನೇ ಬಂಡವಾಳವಾಗಿಸಿಕೊಂಡು ಸಾಗುವಳಿ ಬಂಡವಾಳದಾರರಿಂದ ಔದ್ಯಮಿಕ ಬಂಡವಾಳದಾರರಾಗಿ ಬದಲಾದ ತೆಲುಗಿನ ಕಮ್ಮ, ರೆಡ್ಡಿ, ರಾಜುಗಳಿರಬಹುದು, ತಮಿಳಿನ ಕೊಂಗುನಾಡ್ ನಾಯ್ಡು, ಗೌಂಡರ್, ಮಲೆಯಾಳಿಗಳಾದ ನಾಡಾರಗಳಿರಬಹುದು, ಇಲ್ಲವೇ ಹಾಲು-ಸಕ್ಕರೆ ಸಹಕಾರಿ ಸಂಘಗಳ ಮೂಲಕ ಉದ್ಯಮಿಗಳಾದ ಪತಿದಾರ್ ಮತ್ತು ಮರಾಠಾ ಸಮುದಾಯದ ಕತೆಯಿರಬಹುದು, ಹರೀಶ್ ತೆರೆದಿಡುವ ವಿವರಗಳು ಇಂದಿನ ಭಾರತದಲ್ಲಿ ಬಂಡವಾಳ ಯಾರ ಕೈಯಲ್ಲಿದೆ ಮತ್ತು ಅವರ ಕೈಗೆ ಹೇಗೆ ಸೇರಿತು ಅನ್ನುವುದನ್ನು ಎಳೆ ಎಳೆಯಾಗಿ ಓದುಗರ ಮುಂದಿಡುತ್ತದೆ.

ತೆಲುಗರು ಉದ್ಯಮಿಗಳಾದ ಕತೆ

ಹೊತ್ತಗೆಯಲ್ಲಿ ತೆಲುಗರು ಸಾಗುವಳಿಯಿಂದ ಉದ್ಯಮದತ್ತ ಸಾಗಿದ ಕತೆಯೊಂದಿದೆ. ತೆಲುಗರು ಇಂದು ಆಹಾರ ಸಂಸ್ಕರಣೆ, ಫಾರ್ಮಾಸ್ಯೂಟಿಕಲ್ಸ್, ಐಟಿ, ರಿಯಲ್ ಎಸ್ಟೇಟ್ ಮುಂತಾದ ಉದ್ಯಮದಲ್ಲಿ ಬಹಳ ಮುಂದಿದ್ದಾರೆ. ಆದರೆ ಈ ಬದಲಾವಣೆ ಆಗಿದ್ದು ಕಳೆದ ಎರಡು ಶತಕದಲ್ಲಿ ಅನ್ನುವುದು ಹೆಚ್ಚಿನ ಜನರಿಗೆ ತಿಳಿದಿರಲಿಕ್ಕಿಲ್ಲ. ಬರೀ 160 ವರ್ಷದ ಹಿಂದೆ ಗೋದಾವರಿ ಮತ್ತು ಕೃಷ್ಣಾ ನದಿ ಪಾತ್ರದ ಜನ ಒಂದೋ ಬರಗಾಲ, ಇಲ್ಲವೇ ನೆರೆ ಹಾವಳಿಯಿಂದ ತತ್ತರಿಸಿದ್ದರು. ಬ್ರಿಟಿಷ್ ಆಡಳಿತದ ಮದ್ರಾಸ್ ಪ್ರೆಸಿಡೆನ್ಸಿಯಡಿ ಇದ್ದ ಈ ಭಾಗಗಳಿಂದ ಆದಾಯ ಹೆಚ್ಚಿಸಿಕೊಳ್ಳಬೇಕು ಅನ್ನುವ ಆಲೋಚನೆಯಲ್ಲಿ ಅರ್ಥರ್ ಕಾಟನ್ ಅನ್ನುವ ಬ್ರಿಟಿಷ್ ಅಧಿಕಾರಿ ಈ ಎರಡೂ ನದಿಗಳಿಗೆ ಒಂದೊಂದು ಆಣೆಕಟ್ಟು ಕಟ್ಟಲು ಮುಂದಾಗುತ್ತಾನೆ. “ಥೇಮ್ಸ್ ನದಿಯಲ್ಲಿ ಒಂದು ವರ್ಷ ಹರಿಯುವ ನೀರು, ಪ್ರವಾಹದ ದಿನಗಳಲ್ಲಿ ಗೋದಾವರಿಯಲ್ಲಿ ಒಂದು ದಿನಕ್ಕೆ ಹರಿಯುತ್ತೆ, ಅದನ್ನು ಪೋಲಾಗದಂತೆ ತಡೆದರೆ ಇಲ್ಲಿ ಬಂಗಾರ ಬೆಳೆಯಬಹುದು, ಲಂಡನ್ನಿಗೆ ಹೆಚ್ಚು ಆದಾಯ ಕಳಿಸಬಹುದು” ಎಂದು ತನ್ನ ಮೇಲಧಿಕಾರಿಗಳನ್ನು ಒಪ್ಪಿಸಿ 1852 ಮತ್ತು 1855ರಲ್ಲಿ ಎರಡು ಆಣೆಕಟ್ಟು ನಿರ್ಮಿಸುತ್ತಾನೆ. ಇದಾದ ಎರಡೇ ದಶಕದಲ್ಲಿ ಈ ಭಾಗವೆಲ್ಲವೂ ಭತ್ತದ ಕಣಜವಾಗಿ ಬದಲಾಗಿ ಭೂ ಒಡೆತನ ಹೊಂದಿದ್ದ ಕಮ್ಮ, ರಾಜು, ನಾಯ್ಡು ಸಮುದಾಯದ ಬಳಿ ಅಪಾರ ಸಂಪತ್ತು ಒಟ್ಟಾಗುತ್ತೆ. ಇದೇ ಬಂಡವಾಳ ಮುಂದೆ ಈ ಸಮುದಾಯಗಳ ಸಾಗುವಳಿಯಿಂದ ಉದ್ಯಮದತ್ತಲಿನ ನಡಿಗೆಗೆ ಬಳಕೆಯಾಗುತ್ತೆ.

ಕನ್ನಡಿಗರ ಕತೆ

ಯಾವುದೇ ಸಮಾಜದಲ್ಲಿ ಬಂಡವಾಳವಿಲ್ಲದೇ ಏನು ಸಾಧಿಸಲು ಸಾಧ್ಯ? ಬಂಡವಾಳ ಕೂಡಿಕೆಯಾಗುವುದು ಮತ್ತದು ಒಂದು ನಾಡಿನ ಆರ್ಥಿಕ, ಸಾಮಾಜಿಕ ಏಳಿಗೆಗೆ ಬಳಕೆಯಾಗುವುದು ಅತ್ಯಂತ ಮುಖ್ಯ. ಈ ಹಿನ್ನೆಲೆಯಲ್ಲಿ “ಕನ್ನಡಿಗ ಬಂಡವಾಳ (Kannadiga Capital)” ಅನ್ನುವ ಕಣ್ಣಿನಲ್ಲಿ ಕಳೆದ ಇನ್ನೂರು ವರ್ಷಗಳ ನಮ್ಮ ಇತಿಹಾಸ ಕಂಡಾಗ ಏನು ಕಾಣುತ್ತೆ? ಒಂದೆಡೆ ಉತ್ತರದ ಭಾಗದಲ್ಲಿ ಮರಾಠಿ ಪೇಶ್ವೆಗಳು ಮತ್ತು ನಿಜಾಮರ ದುರಾಡಳಿತದಲ್ಲಿ ನಲುಗಿದ್ದ ಕನ್ನಡಿಗರಿಗೆ ತೆಲುಗರಿಗೆ, ತಮಿಳರಿಗೆ ಬ್ರಿಟಿಷರಡಿ ಸಿಕ್ಕ ಯಾವ ಅನುಕೂಲವೂ ಸಿಗಲಿಲ್ಲ ಮತ್ತು ಸಹಜವಾಗಿಯೇ ಅಲ್ಲಿ ಬಂಡವಾಳವೂ ಜಮೆಯಾಗಲಿಲ್ಲ. ಇನ್ನೊಂದೆಡೆ ಮೈಸೂರಿನ ಪ್ರಗತಿಪರ ಮಹಾರಾಜರ ಕೈಯಲ್ಲಿ ಸಾಕಷ್ಟು ಒಳ್ಳೆಯ ಪ್ರಗತಿಯಾಗಿದ್ದು ನಿಜ. ಆದರೆ ಉದ್ಯಮಶೀಲತೆಯ ವಿಷಯಕ್ಕೆ ಬಂದರೆ ಆ ಕಾಲದಲ್ಲಿ ಕಾಣೋದು ಕೇವಲ ಮೈಸೂರು ಅರಸೊತ್ತಿಗೆಯೇ ಮುಂದೆ ನಿಂತು ಕಟ್ಟಿದ ಉದ್ಯಮಗಳು. ಇವೆಲ್ಲವೂ ಸ್ವಾತಂತ್ರ್ಯ ಬರುವವರೆಗೆ ಒಂದು ಮಟ್ಟದಲ್ಲಿ ಕನ್ನಡಿಗರ ಉದ್ಯಮಶೀಲತೆಗೆ ಸಾಕ್ಷಿಯಾಗಿದ್ದರೂ, ಸ್ವಾತಂತ್ರ್ಯ ಬಂದ ನಂತರ ಮೈಸೂರಿನ ಹೆಚ್ಚಿನ ಉದ್ದಿಮೆಗಳು ಕೇಂದ್ರ ಸರ್ಕಾರದ ಹಿಡಿತಕ್ಕೆ ಸಿಲುಕಿದವು. ಅದರೊಂದಿಗೆ ಬಂಡವಾಳದ ಮೇಲಿನ ಹಿಡಿತವೂ ಕನ್ನಡಿಗರ ಕೈ ತಪ್ಪಿತು. ಸಾಲು ಸಾಲು ಕರಾವಳಿಯ ಬ್ಯಾಂಕುಗಳು ರಾಷ್ಟ್ರೀಕರಣಗೊಂಡಾಗಲೂ ಆಗಿದ್ದು ಇದೇ. ಇದಾದ ನಂತರ ಕನ್ನಡಿಗರ ಉದ್ಯಮಶೀಲತೆ ಚಿಗುರೊಡೆಯಲೇ ಇಲ್ಲ. ಜಾಗತೀಕರಣದ ನಂತರ ಜ್ಞಾನಾಧಾರಿತ ಮುಕ್ತ ಮಾರುಕಟ್ಟೆಯ ಅರ್ಥ ವ್ಯವಸ್ಥೆಯ ಫಲವಾಗಿ ಹೆಚ್ಚು ಬಂಡವಾಳದ ಬಲವಿಲ್ಲದೇ ಇನ್-ಫೋಸಿಸ್ ತರದ ಕನ್ನಡಿಗರೇ ಕಟ್ಟಿದ ಕೆಲ ಸಂಸ್ಥೆಗಳು ಬಂದಿರಬಹುದು, ಕರಾವಳಿ ಮೂಲದವರು ಹೊಟೇಲ್, ಟ್ರಾವೆಲ್ ಉದ್ಯಮಗಳಲ್ಲಿ ಒಂದಿಷ್ಟು ಗೆಲುವು ಕಂಡಿರಬಹುದು, ಆದರೆ ಇದು ಆರು ಕೋಟಿ ಕನ್ನಡಿಗರ ಎಣಿಕೆಯಲ್ಲಿ ಅತ್ಯಲ್ಪ ಸಾಧನೆ. ಉದ್ಯಮಿಗಳಾಗಿ ಯಶಸ್ಸು ಪಡೆದ ಕನ್ನಡಿಗರೂ ತಮ್ಮನ್ನು ತಾವು ಕನ್ನಡಿಗರು ಎಂದು ಗುರುತಿಸಿಕೊಳ್ಳಲು ಹಿಂಜರಿಯುವುದೂ ನಮ್ಮಲ್ಲಿನ ಉದ್ಯಮಶೀಲತೆಯ ಬೆಳವಣಿಗೆಗೆ ಒಂದು ಅಡ್ಡಿ ಎಂದೇ ಕರೆಯಬಹುದು. ಒಟ್ಟಾರೆಯಾಗಿ, ಭಾರತದ ಉದ್ಯಮರಂಗದ ಕಳೆದು ಇನ್ನೂರು ವರ್ಷಗಳ ಬದಲಾವಣೆಯನ್ನು ಹಿಮ್ಮುಖವಾಗಿ ನೋಡಿದಾಗ ಒಂದು ಅಂಶ ಸ್ಪಷ್ಟವಾಗುವುದೆನೆಂದರೆ ಈ ಬದಲಾವಣೆಯ ಹೆಚ್ಚಿನ ಲಾಭ ಉತ್ತರ ಮತ್ತು ಪಶ್ಚಿಮ ಭಾರತದ ವ್ಯಾಪಾರಿಗಳಿಗೆ ದಕ್ಕಿದೆ. ದಕ್ಷಿಣ ಭಾರತದಲ್ಲಿ, ಅದರಲ್ಲೂ ಕರ್ನಾಟಕದಲ್ಲಿ ಒಂದು ರೀತಿಯ Vaishya Vacuum (ವೈಶ್ಯರ ಕೊರತೆ – ವ್ಯಾಪಾರಿ ಗುಣದ ಕೊರತೆ) ಇದೆ. ಯಾರ ಬಳಿ ಬಂಡವಾಳ ಇರುತ್ತೋ ಅವರಿಗೆ ದೇಶದ ರಾಜಕೀಯ ಮತ್ತು ಆರ್ಥಿಕ ದಿಕ್ಕುದೆಸೆಯ ಮೇಲೆ ನಿಯಂತ್ರಣ ಸಾಧ್ಯವಾಗುವುದರಿಂದ ಬಂಡವಾಳದ ಈ ಪಂದ್ಯದಲ್ಲಿ ಹಿಂದಿರುವ ದಕ್ಷಿಣ ಭಾರತ, ವಿಶೇಷವಾಗಿ ಕರ್ನಾಟಕ ಕೇವಲ ಈ ಬಂಡವಾಳದಾರರ ಕೈಕೆಳಗೆ ಕೆಲಸ ಮಾಡಿಕೊಂಡೋ, ಇವರ ವ್ಯಾಪಾರಕ್ಕೆ ಗಿರಾಕಿಗಳಾಗೋ ಉಳಿಯುವ ಸ್ಥಿತಿ ಇಂದಿದೆ.

ಮುಂದೇನು?

ಸರ್ಕಾರ ಉದ್ಯಮದ ಪರವಾಗಿದ್ದರೆ ಸಾಲದು. ಕರ್ನಾಟಕಕ್ಕೆ ಬರುವ ಉದ್ದಿಮೆಗಳಲ್ಲಿ ಕನ್ನಡಿಗರಿಗೆ ಕೆಲಸ ಕೊಡಿ ಎಂದರೆ ಸಾಲದು. ಇವತ್ತು ನಿಜಕ್ಕೂ ಸರ್ಕಾರ ತುರ್ತು ಗಮನ ಕೊಡಬೇಕಾಗಿರುವುದು ಕನ್ನಡಿಗ ಉದ್ಯಮಿಗಳನ್ನು ಬೆಳೆಸುವತ್ತ. ಕೈಗಾರಿಕೆ ಬೆಳೆಸುವತ್ತ ಸರ್ಕಾರ ಏನೇ ನಿರ್ಣಯ ಕೈಗೊಂಡರೂ ಅದರ ಮೂಲದಲ್ಲಿ ಇದು ಕನ್ನಡಿಗರಲ್ಲಿ ಉದ್ಯಮಶೀಲತೆಯನ್ನು ಬೆಳೆಸಲು ಸಹಾಯ ಮಾಡುವಂತಿದೆಯೇ ಎಂಬ ಮೂಲಭೂತವಾದ ಪ್ರಶ್ನೆಯನ್ನು ಕೇಳಿಕೊಳ್ಳಬೇಕಿದೆ. ಈ ರೀತಿ ನಮ್ಮ ಆಲೋಚನೆಯನ್ನು ಬದಲಿಸಿಕೊಳ್ಳದೇ ಹೋದರೆ ನಮ್ಮ ಜುಟ್ಟು ಯಾವತ್ತು ಹೊರಗಿನವರ ಕೈಯಲ್ಲಿರುತ್ತೆ.

 

 

 

This entry was posted in ಕರ್ನಾಟಕ, Capital. Bookmark the permalink.

2 Responses to ಕನ್ನಡಗರೇಕೆ ಉದ್ಯಮಿಗಳಾಗಿಲ್ಲ?

 1. N Shravan ಹೇಳುತ್ತಾರೆ:

  Sir,

  We should not discount the fast food and leisure industry (sagars, darshinis, Adiga’s, MTR’s Maiya’s and CCD) and also the travels and transport industry (like VRL etc.). I agree it is sad that we have lost a lot of the banks to the centre owing to nationalisation.

  On the other hand, when it comes to wealth creation from sectors other than agriculture/mining I agree that there has been a great push from the governments or kings at the time. All sectors like sericulture, silk, Channapattana toys, sandalwood and even now IT/BT have enjoyed patronage from the government.

  Regards,

  N Shravan

 2. N Shravan ಹೇಳುತ್ತಾರೆ:

  I agree to the point of lack of capital. Also, post independence socialist mentality in general has forced us to look to the state to be enterprising and start industries. On the other hand, enterprises starting from our costal districts have done so without any widely known source of large capital. banks, and hotels from Udupi and Mangaluru region have started small and made it big. Even the private education and hospitals (Manipal) have started from there.

  There are some other points that I would like to make.

  One of them is the philosophy followed by the people of the land also matters in this regard. Almost every renowned philosopher thinker of our land has not spoken highly about wealth creation. They have spoken about giving and sharing what we have and have not attached too much importance to wealth.

  Another point I would like to make is that the enterprises should primarily work for the people out of whom the enterprise started in the first place. That is when the people feel a part of the enterprise which is a key to success in the long run. You can see that the costal banks largely employed and still employ a lot of Tulu/Konkani/Kannada speaking people. Similarly, the hotels largely catered to Karnataka tastes. This makes the people feel a part of the enterprise. Once that stops, enterprises seem to wither away. t is one thing to say “international standard”, “go global”, “best practices” etc. but what is important is to stay relevant. If people can’t get credit from the banks or does not employ local people, then they start losing relevance locally. If hotels do not give you south Indian meals at night when you are tired after a day’s work, or if a Sunday breakfast with the family turns out expensive, then you start losing relevance.

  About the vysya vaccum, your I understand your point but it may not be technically correct. If vysyas are about trading then they can only buy and sell what is available. Producing something is a different matter. So, as far as trading is concerned, I’d say we’re not bad. Bengaluru itself was established as a trading up full of pete s. Now we have franchises of most major brands buying and selling the produce/service that is available.

  The second point I believe is the key. If we get that right, then we can be proud of many more successful entrepreneurs and industrialists.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s