Monthly Archives: ಏಪ್ರಿಲ್ 2015
ಕನ್ನಡಕ್ಕೆ ತನ್ನತನವಿದೆ – ಇದು ಸಂಶೋಧನೆ: “ಭಾರತ ಭಂಜನ”ದ ಹುನ್ನಾರವಲ್ಲ!
“ಹಳಗನ್ನಡ” ಎನ್ನುವ ಒಂದು ಹೊತ್ತಗೆಯನ್ನು ಕನ್ನಡದ ಖ್ಯಾತ ಸಂಶೋಧಕರು, ಬರಹಗಾರರು ಆದ ಪ್ರೊ. ಷಟ್ಟರ್ ಬರೆದಿದ್ದಾರೆ. ಈ ಹೊತ್ತಗೆ ಕನ್ನಡದ ಹಳಮೆಯ ಬಗ್ಗೆ ಬಹಳ ಆಳವಾದ ನೋಟವನ್ನು ಹೊಂದಿದೆ. ಕನ್ನಡದ ಬೇರುಗಳ ಬಗ್ಗೆ ತಪ್ಪು ಕಲ್ಪನೆಗಳನ್ನು ಹರಡುವ ಪ್ರಯತ್ನಗಳಾಗುತ್ತಿರುವಾಗ ಕನ್ನಡದ ಬೇರ್ಮೆಯನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಲು ಓದಬೇಕಿರುವ ಒಂದು ಅಪರೂಪದ ಹೊತ್ತಗೆ ಇದಾಗಿದೆ. ಇದನ್ನು ಓದಿ, … ಓದನ್ನು ಮುಂದುವರೆಸಿ
ಭಾರತ ಭಂಜನ (Breaking of India): ಒಡಕಿನ ಭೀತಿಯಿಂದ ವೈವಿಧ್ಯತೆಯ ಅಲ್ಲಗಳೆತ!
“ಭಾರತ ಭಂಜನ” ಅನ್ನುವ ಹೊತ್ತಗೆ ಇತ್ತೀಚೆಗೆ ಕನ್ನಡದಲ್ಲಿ ಬಿಡುಗಡೆಯಾಯಿತು. ಈ ಪುಸ್ತಕದಲ್ಲಿನ ವಾದಗಳಲ್ಲಿರುವ ಹುಳುಕುಗಳೇನು? ಭಾರತದ ಭಾಷಾ ವೈವಿಧ್ಯತೆಯನ್ನು ಅರ್ಥ ಮಾಡಿಕೊಂಡಿರುವ ರೀತಿಯಲ್ಲಿರುವ ತೊಂದರೆಗಳೇನು? ಇಂತಹ ಆಲೋಚನೆಗಳಿಂದ ಆಗಬಹುದಾದ ಅನಾಹುತಗಳೇನು ಅನ್ನುವ ಬಗ್ಗೆ ಹೊತ್ತಗೆಯನ್ನು ಓದಿ, ವಿವರವಾದ ವಿಮರ್ಶೆಯನ್ನು ಬರೆದ ಕನ್ನಡ ಪರ ಚಿಂತಕ ಆನಂದ ಜಿ ಅವರ ಬರಹವನ್ನು ಅವರ ಅನುಮತಿಯೊಂದಿಗೆ ಮುನ್ನೋಟದಲ್ಲಿ ಪ್ರಕಟಿಸಲಾಗಿದೆ. … ಓದನ್ನು ಮುಂದುವರೆಸಿ
ಆರತಿಗೂ ಕೀರುತಿಗೂ ಒಂದೇ ಸಾಕು ಅನ್ನುವ ನಿಲುವು ಯಾಕೆ ತಪ್ಪು ಗೊತ್ತಾ?
ಇತ್ತೀಚೆಗೆ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಆರತಿಗೊಬ್ಬ ಮಗಳು, ಕೀರ್ತಿಗೊಬ್ಬ ಮಗ ಎಂಬ ಮನೋಭಾವ ಬಿಟ್ಟು ಆರತಿಗೂ, ಕೀರ್ತಿಗೂ ಒಂದೇ ಮಗು ಸಾಕು ಅನ್ನುವ ಮನೋಭಾವನೆ ಬೆಳೆಸಿಕೊಳ್ಳುವಂತೆ ನೀಡಿದ ಹೇಳಿಕೆ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಹೀಗೊಂದು ಹೇಳಿಕೆ ಕೊಡುವಾಗ ಅವರ ಮನದಲ್ಲಿ ಜನಸಂಖ್ಯಾ ಸ್ಪೋಟದ ಗುಮ್ಮ ಕಾಡಿರಬಹುದು, ಆದರೆ ಕರ್ನಾಟಕಕ್ಕೆ ಇಂದು ಜನಸಂಖ್ಯೆ ಹೆಚ್ಚಳದ ಯಾವುದೇ … ಓದನ್ನು ಮುಂದುವರೆಸಿ
ಪ್ರತ್ಯೇಕ ರಾಜ್ಯ ಕೇಳುತ್ತೀರಾ? : ಒಮ್ಮೆ ತೆಲುಗರ ಅವಸ್ಥೆ ನೋಡಿ !
ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾಗಬೇಕು ಅನ್ನುವ ಕೂಗು ಈ ಬಾರಿ ಕಾಂಗ್ರೆಸ್ ಶಾಸಕರೊಬ್ಬರಿಂದ ಎದ್ದಿದೆ. ಇಂತಹ ಕೂಗು ಆಗಾಗ ಏಳುವುದರ ಹಿಂದೆ ಉತ್ತರ ಕರ್ನಾಟಕದ ಏಳಿಗೆಗಿಂತಲೂ ಹೆಚ್ಚಾಗಿ ಕರ್ನಾಟಕದ ರಾಜಕೀಯದಲ್ಲಿ ಬೂದಿ ಮುಚ್ಚಿದ ಕೆಂಡದಂತೆ ಒಳಗೊಳಗೆ ಹೊಗೆಯಾಡುತ್ತಿರುವ ಜಾತಿಗಳ ಜಗಳ ಬಹಳ ಮುಖ್ಯವಾದ ಕಾರಣ ಅನ್ನುವುದನ್ನು ಸೂಕ್ಷ್ಮವಾಗಿ ಗಮನಿಸಿದರೆ ಅರಿಯಬಹುದು. ತಕ್ಷಣದ ಅಧಿಕಾರ ಮತ್ತು ರಾಜಕೀಯ … ಓದನ್ನು ಮುಂದುವರೆಸಿ
“ಕನ್ನಡದಲ್ಲೇ ಎಲ್ಲ ಇದೆ” ಎಂದು ಹೇಳುವುದು ಯಾವಾಗ ಸಾಧ್ಯ ಗೊತ್ತಾ?
ಹತ್ತು ವರುಶಗಳ ಹಿಂದಿನ ಮಾತು. ಆಗಷ್ಟೇ ಓದು ಮುಗಿಸಿ ಬೆಂಗಳೂರಿನಲ್ಲಿ ಕೆಲಸವೊಂದನ್ನು ಹಿಡಿದಿದ್ದೆ. ಕಚೇರಿಯಿದ್ದ ಕೋರಮಂಗಲದ ಬೀದಿಗಳಲ್ಲಿ ಓಡಾಡುತ್ತಿದ್ದಾಗ, ಕೆಲವೊಮ್ಮೆ ಒಂದೇ ಒಂದು ಕನ್ನಡ ಪದವೂ ಕಿವಿಗೆ ಬೀಳುತ್ತಿರಲಿಲ್ಲ. ಆಗೆಲ್ಲಾ ನಮ್ಮ ಊರಿನಲ್ಲೇ ತಬ್ಬಲಿಯಾದಂತೆ ಅನಿಸುತ್ತಿತ್ತು. ಬೆಂಗಳೂರಿನಲ್ಲಿ ಹುಟ್ಟುವ ಕೆಲಸಗಳಲ್ಲಿ ಹೆಚ್ಚಿನವು ಕನ್ನಡಿಗರಿಗೆ ಸಿಗದೇ ಇರುತ್ತಿದ್ದುದನ್ನು ನೋಡಿದಾಗ, ಸಾಕಷ್ಟು ಪ್ರಶ್ನೆಗಳು ಏಳುತ್ತಿದ್ದವು. ನಮ್ಮ ಕಚೇರಿಯಲ್ಲಿ ಕೆಲಸ … ಓದನ್ನು ಮುಂದುವರೆಸಿ
ಕನ್ನಡ ಕಡ್ಡಾಯ ಕಾಯ್ದೆಗಳಲ್ಲಿನ ಎರಡು ಕೊರತೆಗಳು
ಒಂದರಿಂದ ಐದನೇ ತರಗತಿಯವರೆಗೆ ಕಡ್ಡಾಯವಾಗಿ ಕನ್ನಡ ಮಾಧ್ಯಮದಲ್ಲಿ ಕಲಿಕೆ ಮತ್ತು ರಾಜ್ಯದ ಪಠ್ಯಕ್ರಮ ಪಾಲಿಸುವ ಎಲ್ಲ ಶಾಲೆಗಳಲ್ಲಿ ಒಂದರಿಂದ ಹತ್ತನೇ ತರಗತಿಯವರೆಗೆ ಕನ್ನಡ ಕಡ್ಡಾಯಗೊಳಿಸುವ ಎರಡು ಮಸೂದೆಗೆ ಕರ್ನಾಟಕದ ವಿಧಾನಸಭೆ ಅವಿರೋಧವಾದ ಒಪ್ಪಿಗೆ ನೀಡಿದೆ. ಪ್ರಗತಿಪರರಿಂದ ಹಿಡಿದು ಸಂಘಪರಿವಾರದವರೆಗೆ ಬೇರೆ ಬೇರೆ ಸಿದ್ಧಾಂತದವರು ಸರ್ಕಾರದ ಈ ನಡೆಯನ್ನು ಸ್ವಾಗತಿಸಿರುವುದು ಒಂದು ಅಪರೂಪದ ಬೆಳವಣಿಗೆಯೇ ಸರಿ. ಕನ್ನಡದ … ಓದನ್ನು ಮುಂದುವರೆಸಿ
ನಿಜಕ್ಕೂ ಹಳೆಗನ್ನಡ ವ್ಯಾಕರಣ ಎಂತಹದು? – ಹೊತ್ತಗೆ ಪರಿಚಯ
ಶಾಲೆ ಕಾಲೇಜುಗಳಲ್ಲಿ ಕನ್ನಡ ವ್ಯಾಕರಣವನ್ನು ಕಲಿತಾಗ ಕೆಲವು ಬಗೆಹರಿಯದ ಅನುಮಾನಗಳು ಎಲ್ಲರಿಗೂ ಬಂದೇ ಇರುತ್ತವೆ. ಉದಾಹರಣೆಗೆ, ‘ದೆಸೆಯಿಂದ’ ಎಂಬ ಪ್ರತ್ಯಯ ಹೊಂದಿರುವ ಪಂಚಮ ವಿಭಕ್ತಿಯ ಬಗ್ಗೆ ಹೇಳಿಕೊಡಲಾಗುತ್ತದೆ. ಆದರೆ ‘ಇಂದ’ ಪ್ರತ್ಯಯವಿರುವ ಮೂರನೇ ವಿಭಕ್ತಿಗೂ ಈ ಐದನೇ ವಿಭಕ್ತಿಗೂ ಬೇರೆತನವೇನೆಂಬ ಗೊಂದಲಕ್ಕೆ ಒಳಗಾಗದವರಿಲ್ಲ. ಹಾಗೆಯೇ, ಕಾಲಗಳ ಬಗ್ಗೆ ಹೇಳುವಾಗ ‘ಹೋಗುತ್ತಾನೆ’ ಎಂಬುದನ್ನು ವರ್ತಮಾನ ಕಾಲಕ್ಕೆ ಉದಾಹರಣೆಯಾಗಿ … ಓದನ್ನು ಮುಂದುವರೆಸಿ
ಪೂರ್ಣ ಚಂದ್ರ ತೇಜಸ್ವಿಯವರೊಳಗಿದ್ದ ಒಬ್ಬ ಕನ್ನಡ ಪರ ರಾಜಕೀಯ ಚಿಂತಕ
ಇಂದಿಗೆ ತೇಜಸ್ವಿ ನಮ್ಮನ್ನಗಲಿ ಎಂಟು ವರುಶವಾಯಿತು. ಇಂದಿನ ಯುವ ಪೀಳಿಗೆಯಲ್ಲಿ ಕನ್ನಡ ಪುಸ್ತಕಗಳನ್ನು ಓದುವ ಹವ್ಯಾಸವೇ ಕಡಿಮೆಯಾಗಿದ್ದರೂ ಓದುತ್ತಿರುವ ಹೆಚ್ಚಿನವರ ಪಟ್ಟಿಯಲ್ಲಿ ತೇಜಸ್ವಿಯವರ ಹೆಸರು ಇರದೇ ಇರಲು ಸಾಧ್ಯವಿಲ್ಲ. ಅಷ್ಟರಮಟ್ಟಿಗೆ ಎರಡು ತಲೆಮಾರಿನ ಕನ್ನಡಿಗರನ್ನು ಆವರಿಸಿರುವ ಬರಹಗಾರ ತೇಜಸ್ವಿ. ಬರೀ ಕತೆ, ಕವನಕ್ಕೆ ಸೀಮಿತವಾಗದೇ ಪರಿಸರ ಚಳುವಳಿ, ಫೋಟೊಗ್ರಾಫಿ, ನಾಟಕ, ಸಿನೆಮಾ, ಕಂಪ್ಯೂಟರ್ಸ್, ಜಾಗತೀಕರಣ, ಎಕನಾಮಿಕ್ಸ್ … ಓದನ್ನು ಮುಂದುವರೆಸಿ
ಕನ್ನಡದಲ್ಲಿ ವಿಶ್ವಕಪ್ ಕ್ರಿಕೆಟ್ ಕಾಮೆಂಟರಿ ಸಾಧ್ಯವಾಗಿದ್ದು ಹೇಗೆ?
ಕಳೆದ ವಾರ ಮುಗಿದ ಕ್ರಿಕೆಟ್ ವಿಶ್ವ ಕಪ್ ಪಂದ್ಯಾವಳಿ ಎರಡು ಕಾರಣಕ್ಕೆ ಕರ್ನಾಟಕಕ್ಕೆ ವಿಶೇಷವಾಗಿತ್ತು. ಮೊದಲನೆಯದ್ದು, ಹಲವು ವಿಶ್ವ ಕಪ್ ನಂತರ, ಮೊದಲ ಬಾರಿಗೆ, ಭಾರತ ತಂಡದಲ್ಲಿ ಕರ್ನಾಟಕದ ಯಾವ ಆಟಗಾರು ಸ್ಥಾನ ಪಡೆಯಲಿಲ್ಲ. ಸ್ಟುವರ್ಟ್ ಬಿನ್ನಿ ಆಯ್ಕೆಯಾದರೂ ಯಾವ ಪಂದ್ಯವನ್ನೂ ಆಡಲಿಲ್ಲ. ಕಳೆದ ಎರಡು ವರ್ಷದಿಂದ ರಣಜಿ, ಇರಾನಿ, ದುಲೀಪ್ ಟ್ರೋಫಿ ಪಂದ್ಯಾವಳಿಗಳನ್ನು ಸತತವಾಗಿ … ಓದನ್ನು ಮುಂದುವರೆಸಿ