Monthly Archives: ಮೇ 2015
ಭಾರತದಲ್ಲಿ ದೊಡ್ಡ ರಾಜ್ಯಗಳೇಕಿರಬೇಕು ?
ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾಗಿಸಲು ಟೊಂಕ ಕಟ್ಟಿ ನಿಂತಿರುವ ನಡಹಳ್ಳಿಯವರು ಇದಕ್ಕಾಗಿ ಮೂವತ್ತಕ್ಕೂ ಹೆಚ್ಚು ಸಂಘಸಂಸ್ಥೆಗಳನ್ನು ಸ್ಥಾಪಿಸುವ ಮಾತನ್ನಾಡಿರುವುದು ಮಾಧ್ಯಮಗಳಲ್ಲಿ ವರದಿಯಾಗಿದೆ. ಏಳಿಗೆಯಲ್ಲಿನ ಕೊರತೆಗಳಿಗೆ ಪ್ರತ್ಯೇಕ ರಾಜ್ಯವೇ ಪರಿಹಾರ ಅನ್ನುವ ಅತೀ ಸರಳೀಕರಿಸಿದ ವಾದವೊಂದನ್ನು ಹೊತ್ತು ಹೊರಟಿರುವ ಅವರು ಅತ್ಯಂತ ಮಹತ್ವಾಕಾಂಕ್ಷಿ ಅನ್ನುವುದು ಅವರ ರಾಜಕೀಯ ಜೀವನ ಮತ್ತು ಬಿಜಾಪುರ ಜಿಲ್ಲೆಯ ರಾಜಕೀಯವನ್ನು ಹತ್ತಿರದಿಂದ ಕಂಡವರು … ಓದನ್ನು ಮುಂದುವರೆಸಿ
ಮೋದಿ ಸರ್ಕಾರಕ್ಕೆ ಒಂದು ವರುಶ – ಒಕ್ಕೂಟ ವ್ಯವಸ್ಥೆಯ ಕಣ್ಣಿನಿಂದ ಒಂದು ವಿಮರ್ಶೆ
ಮೋದಿಯವರ ಸರ್ಕಾರಕ್ಕೆ ಒಂದು ವರುಶ ತುಂಬಿದ್ದು, ಸರ್ಕಾರದ ಸಾಧನೆ, ವೈಫಲ್ಯಗಳ ಬಗ್ಗೆ ಚರ್ಚೆಯಾಗುತ್ತಿದೆ. ಮೋದಿ ಗುಜರಾತಿನ ಮುಖ್ಯಮಂತ್ರಿ ಹುದ್ದೆಯಿಂದ ಪ್ರಧಾನಿ ಹುದ್ದೆಗೇರಿದವರು ಮತ್ತು ಸತತವಾಗಿ ಸಹಕಾರಿ ತತ್ವದ ಒಕ್ಕೂಟ ವ್ಯವಸ್ಥೆ ಬಗ್ಗೆ ಮಾತನಾಡುತ್ತ ಬಂದವರು. ಹೀಗಾಗಿ ಅವರ ಸರ್ಕಾರ “ಒಕ್ಕೂಟ ವ್ಯವಸ್ಥೆ”ಯ ವಿಷಯದಲ್ಲಿ ಏನು ಮಾಡಿದೆ ಅನ್ನುವುದನ್ನು ಗಮನಿಸುತ್ತ ಬಂದಿದ್ದ ನನಗೆ ಕಂಡ ಕೆಲ ಅಂಶಗಳನ್ನು … ಓದನ್ನು ಮುಂದುವರೆಸಿ
ನುಡಿಯರಿಮೆಗೆ ಡಾ.ಡಿ.ಎನ್.ಶಂಕರ ಬಟ್ಟರ ಕೊಡುಗೆ
ಕಳೆದ ಭಾನುವಾರ, ಅಂದರೆ ಮೇ 17 2015ರ ಸಂಜೆ ಬೆಂಗಳೂರಿನ ‘ಟೋಟಲ್ ಕನ್ನಡ’ದಲ್ಲಿ ‘ನುಡಿಯರಿಮೆ ವಲಯಕ್ಕೆ ಡಾ. ಡಿ. ಎನ್. ಶಂಕರ ಬಟ್ಟರ ಕೊಡುಗೆಗಳು’ ಎಂಬ ವಿಷಯದ ಬಗ್ಗೆ ನಾನು ಮಾತಾಡಿದೆನು. ನುಡಿಯರಿಮೆ ಎಂದರೇನು ಎಂದು ಸಣ್ಣದಾಗಿ ಪರಿಚಯಿಸಿ, ಶಂಕರ ಬಟ್ಟರು ನಡೆಸಿದ ಅಧ್ಯಯನ, ಸಂಶೋಧನೆ, ಅವರು ಬರೆದ ಹಲವು ಪುಸ್ತಕಗಳು, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ … ಓದನ್ನು ಮುಂದುವರೆಸಿ
ಜಾಗ, ಕರೆಂಟ್ ಕೊಟ್ಟ ಕೂಡಲೇ ಐಟಿ ಬಂದು ಬಿಡುತ್ತಾ?
ನಡಹಳ್ಳಿ ಸಾಹೇಬ್ರು ಉತ್ತರ ಕರ್ನಾಟಕದ ಏಳಿಗೆಗೆ ಹಾಕಿರುವ ಪ್ಲಾನ್ ಏನು ಅಂತ ಮೊನ್ನೆ ಒಂದು ಸಂದರ್ಶನದ ವಿಡಿಯೋ ನೋಡಿದೆ. ಅವರ ಪ್ರಕಾರ ಹುಬ್ಬಳ್ಳಿಯಲ್ಲಿ ಐಟಿ ಪಾರ್ಕಿಗೆ ಅಂತ ಸರ್ಕಾರದ ಬಳಿ 500 ಎಕ್ರೆ ಜಾಗ ಇದೆಯಂತೆ, ಬೆಳಗಾವಿಯಲ್ಲಿ 300 ಎಕ್ರೆ ಜಾಗ ಇದೆ. ಕಾರವಾರದಲ್ಲೂ ಸರ್ಕಾರದ ಜಾಗವಿದೆಯಂತೆ. ಇದೆಲ್ಲವನ್ನು ಐಟಿ ಕಂಪನಿಗಳಿಗೆ ಫ್ರಿ ಆಗಿ ಕೊಟ್ಟು. … ಓದನ್ನು ಮುಂದುವರೆಸಿ
ತಮಿಳರು, ಬೆಂಗಾಲಿಗಳ ತರ ಕನ್ನಡಿಗರಿಗೇಕೆ ಸ್ಟಿರಿಯೋಟೈಪ್ ಇಲ್ಲ?
“ಭಾಷೆ ವಿಷಯಕ್ಕೆ ಬಂದರೆ ಅವನೊಳ್ಳೆ ತಮಿಳರ ತರ ಆಡ್ತಾನೆ.”, “ ಮಲ್ಲುಗಳು (ಮಲೆಯಾಳಿಗಳು) ಬಿಡಿ, ಚಂದ್ರಲೋಕದಲ್ಲಿ ಬಿಟ್ರೂ ಕಿರಾಣಿ ಅಂಗಡಿ, ಇಲ್ಲ ಚಹದಂಗಡಿ ಶುರು ಮಾಡಿ ಬಿಡ್ತಾರೆ.”, “ಗುಜ್ಜುಗಳ (ಗುಜರಾತಿಗಳು) ರಕ್ತದಲ್ಲೇ ವ್ಯಾಪಾರ ಬರೆದಿದೆ”, “ಬೊಂಗ್ (ಬೆಂಗಾಲಿ) ಗಳು ಸಕತ್ ಕನ್ನಿಂಗ್ ಆಗಿರ್ತಾರೆ ಬಿಡಮ್ಮ”, “ಈ ಗುಲ್ಟಿಗಳು (ತೆಲುಗರು) ಸಿನ್ಮಾ ಅಂದ್ರೆ ಸಾಯ್ತಾರಪ್ಪ” ಈ ರೀತಿ … ಓದನ್ನು ಮುಂದುವರೆಸಿ
ವೈಜ್ಞಾನಿಕ ಪ್ರಗತಿ – ಧರ್ಮ ಮತ್ತು ಭಾಷೆ
ಭಾರತ ಯಾಕೆ ವೈಜ್ಞಾನಿಕ ಪ್ರಗತಿಯಲ್ಲಿ ಹಿಂದೆ ಬಿದ್ದಿದೆ? ಒಂದು ನಾಡಿನ ವೈಜ್ಞಾನಿಕ ಸಂಶೋಧನೆಯ ಸಾಮರ್ಥ್ಯಕ್ಕೂ ಧಾರ್ಮಿಕತೆಗೂ ಯಾವುದಾದರೂ ನೆಂಟಿದೆಯೇ? – ಇಂತಹದೊಂದು ಪ್ರಶ್ನೆ ಎತ್ತಿಕೊಂಡು ಹೊರಟ ಇಟಲಿಯ ಡೇವಿಡ್ ಟಿಚ್ಚಿ, ಅಂಡ್ರಿಯಾ ವಿಂಡಿನಿ ಮತ್ತು ಅಮೇರಿಕದ ರೋಲಂಡ್ ಬೆನಬೋ ಅನ್ನುವ ಮೂವರು ಎಕನಾಮಿಸ್ಟ್ ಗಳು ಒಂದು ಸಂಶೋಧನಾ ವರದಿಯನ್ನು ಹೊರ ತಂದಿರುವ ಬಗ್ಗೆ ಇತ್ತೀಚೆಗೆ ವಾಲ್ … ಓದನ್ನು ಮುಂದುವರೆಸಿ
ನುಡಿಯರಿಮೆಯ ವಲಯಕ್ಕೆ ಡಾ. ಡಿ. ಎನ್. ಶಂಕರ ಬಟ್ಟರ ಕೊಡುಗೆ – ಒಂದು ಮಾತುಕತೆ
ಕನ್ನಡದ ನಿಜಸ್ವರೂಪವನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಡಾ. ಡಿ. ಎನ್. ಶಂಕರ ಬಟ್ಟರು ಹಲವಾರು ಸಂಶೋಧನೆಗಳನ್ನು ನಡೆಸುತ್ತಾ ಬಂದಿರುವುದು ತಿಳಿದಿರುವ ವಿಚಾರ. ಅವರು ಬರೆದಿರುವ ‘ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ’, ‘ನಿಜಕ್ಕೂ ಹಳೆಗನ್ನಡ ವ್ಯಾಕರಣ ಎಂತಹದು?’, ‘ಕನ್ನಡ ಪದಗಳ ಒಳರಚನೆ’, ‘ಕನ್ನಡ ಬರಹದ ಸೊಲ್ಲರಿಮೆ’ (1-4) ಮುಂತಾದ ಹೊತ್ತಗೆಗಳು ಕನ್ನಡದ ನಿಜಸ್ವರೂಪದ ಬಗ್ಗೆ ಸಾಕಷ್ಟು ಚರ್ಚೆಗಳಿಗೆ ಎಡೆ … ಓದನ್ನು ಮುಂದುವರೆಸಿ
21ನೇ ಶತಮಾನದ ಕನ್ನಡ ಚಳುವಳಿ ಯಾವುದು ಗೊತ್ತೇ?
ಇತ್ತೀಚೆಗೆ ನಡೆದ ಬೆಂಗಳೂರು ನಗರ ಕನ್ನಡ ಸಾಹಿತ್ಯ ಸಮ್ಮೇಳನದ ನೆನಪಿನಲ್ಲಿ ಹೊರ ಬಂದಿರುವ ಸ್ಮರಣ ಸಂಚಿಕೆಯೊಂದಕ್ಕೆ ಕನ್ನಡದಲ್ಲಿ ಗ್ರಾಹಕ ಚಳುವಳಿ ಯಾಕೆ ಮುಖ್ಯ ಮತ್ತು ಮುಂದಿನ ದಿನಗಳಲ್ಲಿ ಅದು ಹೇಗೆ ಕನ್ನಡಕ್ಕೆ ಬಲ ತುಂಬುವಲ್ಲಿ ಅತ್ಯಂತ ಮಹತ್ವದ ಪಾತ್ರ ವಹಿಸಲಿದೆ ಅನ್ನುವ ಬಗ್ಗೆ ಮುನ್ನೋಟ ಬ್ಲಾಗಿನ ಸಂಪಾದಕರಾದ ವಸಂತ ಶೆಟ್ಟಿ ಅವರೊಂದು ವಿಶೇಷ ಅಂಕಣ ಬರೆದಿದ್ದರು. ಅದನ್ನು … ಓದನ್ನು ಮುಂದುವರೆಸಿ
ಭಾರತಕ್ಕೂ ಚೀನಾಗೂ ಇರುವ ಸಾಮ್ಯತೆ – ಭಾಷಾ ಹೇರಿಕೆ
ಚೀನಾ ಅಂದ ಕೂಡಲೇ ಮೊದಲು ಕೇಳಿ ಬರುವುದೇನು? ಚೀನಾದಲ್ಲಿ ಒಂದೇ ಭಾಷೆಯಿದ್ದು, ಚೀನಿಯರೆಲ್ಲರೂ ಮ್ಯಾಂಡರೀನ್ ನುಡಿಯುತ್ತಾರೆ ಅನ್ನುವುದಲ್ಲವೇ? ಭಾರತದಲ್ಲಿ ಭಾಷಾ ವೈವಿಧ್ಯತೆ ಇರುವುದೇ ನಮ್ಮ ಸಮಸ್ಯೆ, ಚೀನಿಯರಂತೆ ನಮ್ಮಲ್ಲೂ ಒಂದೇ ನುಡಿ ಇದ್ದಿದ್ದರೆ ಚೆನ್ನಾಗಿರುತ್ತಿತ್ತು ಅನ್ನುವ ಅಭಿಪ್ರಾಯ ಕೆಲವರದ್ದು. ಆದರೆ ಪ್ರಜಾಪ್ರಭುತ್ವವಿಲ್ಲದ, ಹೊರಪ್ರಪಂಚಕ್ಕೆ ಯಾವತ್ತಿಗೂ ಮುಚ್ಚಿಕೊಂಡಿರುವ ಚೀನಾದೊಳಗೆ ಅತ್ಯಂತ ವ್ಯವಸ್ಥಿತವಾಗಿ ಅಲ್ಲಿನ ಹಲವಾರು ಭಾಷೆಗಳನ್ನು ಹಂತ … ಓದನ್ನು ಮುಂದುವರೆಸಿ
ಬ್ಯಾಂಕುಗಳಿಗೆ ಏನು ಮುಖ್ಯವಾಗಬೇಕು? ಜನರ ಅನುಕೂಲವೋ? ಹಿಂದೀ ಹೇರಿಕೆಯೋ?
ಇತ್ತೀಚೆಗೆ ಕರ್ನಾಟಕದಲ್ಲೇ ಹುಟ್ಟಿ ಬೆಳೆದ ಕೇಂದ್ರ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಒಂದರಲ್ಲಿ ಕನ್ನಡಕ್ಕೆ ಒದಗಿರುವ ಸ್ಥಿತಿಯ ಬಗ್ಗೆ ಗೆಳೆಯರೊಬ್ಬರು ತಮ್ಮ ಅನುಭವ ಹಂಚಿಕೊಂಡರು. ಎಲ್ಲೇ ಹೋದರೂ ಕನ್ನಡದಲ್ಲಿ ಗ್ರಾಹಕ ಸೇವೆಗಾಗಿ ಶಾಂತಿಯುತ ಅಸಹಕಾರ ಚಳುವಳಿಗೆ ಇಳಿಯುವ ಅವರು ಕೇಂದ್ರ ಸರ್ಕಾರ ಕಲ್ಪಿಸುವ ಎಲ್ಲ ಗ್ರಾಹಕ ಸೇವೆಗಳಲ್ಲಿ ಬಿಗಡಾಯಿಸುತ್ತಿರುವ ಕನ್ನಡದ ಸ್ಥಿತಿಯ ಬಗ್ಗೆ ತೀವ್ರವಾಗಿ ನೊಂದಿದ್ದರು. ಅವರಿಗಾದ … ಓದನ್ನು ಮುಂದುವರೆಸಿ