Author Archives: ವಸಂತ ಶೆಟ್ಟಿ Vasant Shetty
ಈ ಬಾರಿಯ ಕಾವೇರಿ ವಿವಾದ ಕನ್ನಡಿಗರಿಗೆ ಕೊಡುತ್ತಿರುವ ಸಂದೇಶವೇನು?
ಕಾವೇರಿ ವಿವಾದ – ಕನ್ನಡಿಗರಿಗೆ ಕೊಡುತ್ತಿರುವ ಸಂದೇಶ ತಮಿಳುನಾಡಿನ ಜೊತೆಗಿನ ಕರ್ನಾಟಕದ ಕಾವೇರಿ ವಿವಾದ ನೂರು ವರುಶಗಳಿಗೂ ಮಿಗಿಲಾದದ್ದು. ಸ್ವಾತಂತ್ರ್ಯಕ್ಕೆ ಮುಂಚೆ ಬ್ರಿಟಿಷರ ಪ್ರಭಾವದಿಂದಲೂ, ಸ್ವಾತಂತ್ರ್ಯ ನಂತರ ದೆಹಲಿಯಲ್ಲಿ ತಮಿಳುನಾಡಿನ ಪ್ರಾದೇಶಿಕ ಪಕ್ಷಗಳಿಗಿದ್ದ ಪ್ರಭಾವದಿಂದಲೂ ನಿರಂತರವಾಗಿ ತಮಿಳುನಾಡು ತನ್ನನ್ನು ತಾನು ಶೋಷಿತರಂತೆಯೂ, ಕರ್ನಾಟಕವನ್ನು ಶೋಷಿಸುವವರಂತೆಯೂ ಬಿಂಬಿಸುತ್ತ ಕಾವೇರಿ ನೀರಿನ ಮೇಲೆ ಹಕ್ಕು ಸಾಧಿಸಿ, ಕರ್ನಾಟಕಕ್ಕೆ ಅನ್ಯಾಯ … ಓದನ್ನು ಮುಂದುವರೆಸಿ
ಜಿಎಸ್ಟಿ ಕುರಿತ ಹೊಗಳಿಕೆಗಳ ಮಹಾಪೂರದಲ್ಲಿ ಕೊಚ್ಚಿ ಹೋಯಿತೇ ರಾಜ್ಯಗಳ ಹಿತಾಸಕ್ತಿ?
ಕಳೆದ ಹದಿನೈದು ವರ್ಷಗಳಿಂದ ರಾಜ್ಯಗಳು ಮತ್ತು ಕೇಂದ್ರ ಸರ್ಕಾರದ ನಡುವೆ ನಿರಂತರ ಹಗ್ಗಜಗ್ಗಾಟಕ್ಕೆ ಕಾರಣವಾಗಿದ್ದ ಸರಕು ಮತ್ತು ಸೇವಾ ತೆರಿಗೆ ಕಾಯ್ದೆ(ಜಿ.ಎಸ್.ಟಿ)ಗೆ ಕಳೆದ ವಾರ ರಾಜ್ಯಸಭೆಯಲ್ಲಿ ಒಪ್ಪಿಗೆ ದೊರೆತಿದೆ. 1991ರಲ್ಲಿ ಅಂದಿನ ಪ್ರಧಾನಿ ಪಿ.ವಿ.ನರಸಿಂಹರಾವ್ ಅವರ ಮುಂದಾಳತ್ವದಲ್ಲಿ ಶುರುವಾದ ಆರ್ಥಿಕ ಸುಧಾರಣೆಯ ಪ್ರಕ್ರಿಯೆ ಈಗ ಇನ್ನೊಂದು ಹಂತ ತಲುಪಿದ್ದು, ಜಿ.ಎಸ್.ಟಿ ದೇಶದ ಜಿಡಿಪಿ ಬೆಳವಣಿಗೆಯನ್ನು ಒಂದರಿಂದ … ಓದನ್ನು ಮುಂದುವರೆಸಿ
ಕರ್ನಾಟಕದ ಬ್ಯಾಂಕುಗಳಲ್ಲಿ ಕನ್ನಡದ ಕತೆ ವ್ಯಥೆ
ಇತ್ತೀಚೆಗೆ ಕರ್ನಾಟಕದ ಬ್ಯಾಂಕುಗಳಲ್ಲಿ ಕನ್ನಡ ಮತ್ತು ಕನ್ನಡಿಗರು ಸಂಪೂರ್ಣವಾಗಿ ಕಡೆಗಣನೆಗೆ ಒಳಗಾಗುತ್ತಿರುವುದು ಹೆಚ್ಚುತ್ತಿದೆ. ಈ ಬಗ್ಗೆ ಸಾಮಾಜಿಕ ತಾಣಗಳ ಮೂಲಕ ನಮ್ಮ ಜನಪ್ರತಿನಿಧಿಗಳ ಗಮನ ಸೆಳೆಯುವ ಕೆಲಸ ಹಲವಾರು ಕನ್ನಡಿಗರು ಮಾಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಸ್ಪಂದಿಸಿದ ಮೈಸೂರು-ಕೊಡಗು ಸಂಸದರಾದ ಪ್ರತಾಪ್ ಸಿಂಹ ಅವರು ಬ್ಯಾಂಕಿನಲ್ಲಿನ ಸಮಸ್ಯೆಗಳ ಬಗ್ಗೆ ಒಂದಿಷ್ಟು ವಿವರವಾದ ಮಾಹಿತಿಯನ್ನು ಕೋರಿದ್ದರು. ಅವರಿಗೆ ಕಳಿಸಲಾದ … ಓದನ್ನು ಮುಂದುವರೆಸಿ
ಬಲಿಷ್ಟ ರಾಜ್ಯಗಳಿಂದಲೇ ಭಾರತದ ಏಳಿಗೆ – ಮೋದಿಯವರಿಗೆ ರಾಜ್ಯಗಳ ಪಾಠ
ಕಳೆದ ವಾರ ದೆಹಲಿಯಲ್ಲಿ ನಡೆದ ಅಂತರ್ ರಾಜ್ಯ ಸಮಿತಿ ಸಭೆ ಭಾರತದ ಒಕ್ಕೂಟ ವ್ಯವಸ್ಥೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಒಂದು ಮಹತ್ವದ ಸಭೆಯಾಗಿತ್ತು. ಪ್ರಧಾನಿ ಮೋದಿಯವರ ಅಧ್ಯಕ್ಷತೆಯಲ್ಲಿ ಕರೆಯಲಾಗಿದ್ದ ಈ ಸಭೆಯಲ್ಲಿ ಬಹುತೇಕ ರಾಜ್ಯಗಳ ಮುಖ್ಯಮಂತ್ರಿಗಳು ಇಲ್ಲವೇ ಹಿರಿಯ ಸಚಿವರು ಪಾಲ್ಗೊಂಡಿದ್ದರು. ಹತ್ತು ವರ್ಷಗಳ ದೊಡ್ಡ ಅಂತರದ ನಂತರ ಏರ್ಪಾಡಾಗಿದ್ದ ಈ ಸಭೆಯಲ್ಲಿ ಒಕ್ಕೂಟದ ಬೇರೆ ಬೇರೆ … ಓದನ್ನು ಮುಂದುವರೆಸಿ
ದೆಹಲಿ ತಲುಪಿದ ಭಾಷಾ ಸಮಾನತೆಯ ಕೂಗು !
ಇಂದು ಫೆಬ್ರವರಿ 21 ವಿಶ್ವ ತಾಯ್ನುಡಿ ದಿನ. 1952ರಲ್ಲಿ ಬೆಂಗಾಲಿಗಳ ಮೇಲೆ ಉರ್ದು ಹೇರಿಕೆಯನ್ನು ವಿರೋಧಿಸಿ, ಬೆಂಗಾಲಿ ಭಾಷೆಗೂ ಪಾಕಿಸ್ತಾನದ ಅಧಿಕೃತ ಭಾಷೆಯ ಸ್ಥಾನಮಾನ ನೀಡುವಂತೆ ಒತ್ತಾಯಿಸಿ, ಅಂದಿನ ಪೂರ್ವ ಪಾಕಿಸ್ತಾನ, ಇಂದಿನ ಬಾಂಗ್ಲಾದೇಶದ ಢಾಕಾ ನಗರದಲ್ಲಿ ಪೋಲಿಸರ ಗುಂಡಿಗೆ ಎದೆಯೊಡ್ಡಿ ಹುತಾತ್ಮರಾದ ಬೆಂಗಾಲಿ ವಿದ್ಯಾರ್ಥಿಗಳ ನೆನಪಿನಲ್ಲಿ ಈ ದಿನ ಆಚರಿಸಲಾಗುತ್ತದೆ. ಅಂದು ಬೆಂಗಾಲಿಗಳ ಪ್ರಾಮಾಣಿಕವೂ, … ಓದನ್ನು ಮುಂದುವರೆಸಿ
ಇನ್ವೆಸ್ಟ್ ಕರ್ನಾಟಕ ಮತ್ತು ಕನ್ನಡಿಗರ ಹಿತ
ಇನ್ವೆಸ್ಟ್ ಕರ್ನಾಟಕ ಅನ್ನುವ ಹೆಸರಿನಲ್ಲಿ ಕರ್ನಾಟಕಕ್ಕೆ ಬಂಡವಾಳ ಹೂಡಿಕೆದಾರರನ್ನು ಸೆಳೆಯುವ ಪ್ರಯತ್ನ ಕರ್ನಾಟಕ ಸರ್ಕಾರ ಅತ್ಯಂತ ಪರಿಶ್ರಮದಿಂದ ಮಾಡುತ್ತಿದೆ. ಮೂರು ದಿನಗಳ ಕಾಲ ನಡೆಯುವ ಈ ಸಮಾವೇಶಕ್ಕೆ ಪ್ರಪಂಚದ ಹಲವು ದೇಶಗಳಿಂದ, ಹೊರ ರಾಜ್ಯಗಳಿಂದ ಹೂಡಿಕೆದಾರರನ್ನು ಸೆಳೆಯಲು ಬೃಹತ್ ಕೈಗಾರಿಕಾ ಸಚಿವ ಆರ್.ವಿ.ದೇಶಪಾಂಡೆಯವರು ಹಲವು ತಿಂಗಳುಗಳಿಂದ ಕೆಲಸ ಮಾಡುತ್ತಿರುವುದು ಎಲ್ಲರೂ ಬಲ್ಲರು. ಇವರ ಪ್ರಯತ್ನಕ್ಕೆ ಮುಖ್ಯಮಂತ್ರಿ … ಓದನ್ನು ಮುಂದುವರೆಸಿ
“ಕನ್ನಡ ಜಗತ್ತು” ಪುಸ್ತಕದ ಬಗ್ಗೆ ವೈ.ಎಸ್.ವಿ ದತ್ತಾ ಅವರ ಅನಿಸಿಕೆಗಳು
ಡಿಸೆಂಬರ್ 12, ಶನಿವಾರ ಬನವಾಸಿ ಬಳಗ ಪ್ರಕಾಶನದಿಂದ ನನ್ನ “ಕನ್ನಡ ಜಗತ್ತು” ಪುಸ್ತಕ ಬಿಡುಗಡೆಯಾಯಿತು. ಈ ಕಾರ್ಯಕ್ರಮದ ಅತಿಥಿಗಳಲ್ಲಿ ಒಬ್ಬರಾಗಿದ್ದ ಶಾಸಕರು, ಜಾತ್ಯಾತೀತ ಜನತಾದಳದ ಹಿರಿಯ ನಾಯಕರು ಆದ ವೈ.ಎಸ್.ವಿ ದತ್ತಾ ಅವರು ಕಾರಣಾಂತರಗಳಿಂದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗದ ಕಾರಣ ಪುಸ್ತಕದ ಬಗೆಗಿನ ತಮ್ಮ ಅನಿಸಿಕೆಯನ್ನು ಪತ್ರದ ಮೂಲಕ ಬರೆದು ಕಳಿಸಿದ್ದರು. ಆ ಪತ್ರದಲ್ಲಿ ಕರ್ನಾಟಕದ, … ಓದನ್ನು ಮುಂದುವರೆಸಿ
ಚೆನ್ನೈ ನೆರೆ ಹಾಗೂ ದೆಹಲಿ ಮಾಧ್ಯಮಗಳ ನಿದ್ದೆ
ಚೆನ್ನೈ ನಗರ ಕಳೆದ ನೂರು ವರುಶಗಳಲ್ಲೇ ಕಾಣದಷ್ಟು ದೊಡ್ಡ ಪ್ರಮಾಣದ ನೆರೆಗೆ ಸಿಲುಕಿ ಸಾಮಾನ್ಯ ಜನರ ಜೀವನ ಏರುಪೇರಾಗಿರುವುದನ್ನು ಕಾಣುತ್ತಿದ್ದೇವೆ. ಚೆನ್ನೈ ಒಂದೇ ಅಲ್ಲದೇ ತಮಿಳುನಾಡಿನ ಕರಾವಳಿ ಮತ್ತು ದಕ್ಷಿಣ ಆಂಧ್ರಪ್ರದೇಶದಲ್ಲೂ ಇದೇ ಸ್ಥಿತಿ ಇದೆ. ತೀವ್ರ ಕಷ್ಟಕ್ಕೆ ತಮಿಳರು ಮತ್ತು ತೆಲುಗರು ಸಿಲುಕಿರುವ ಈ ಹೊತ್ತಿನಲ್ಲಿ ಭಾರತದ ಇಂಗ್ಲಿಷ್ ಮಾಧ್ಯಮಗಳು ಇದಕ್ಕೆ ಹೇಗೆ ಸ್ಪಂದಿಸುತ್ತಿವೆ … ಓದನ್ನು ಮುಂದುವರೆಸಿ
ಈಗಿರುವ ಸ್ವರೂಪದಲ್ಲಿ ಭಾರತ ಸ್ವಚ್ಛವಾಗುವುದಿಲ್ಲ. ಯಾಕೆ ಅಂತೀರಾ?
ಕಳೆದ ವರ್ಷ ಗಾಂಧಿಜಿಯವರ ಹುಟ್ಟು ಹಬ್ಬದ ದಿನ ಬಹಳ ಸದ್ದುಗದ್ದಲದೊಂದಿಗೆ ಜಾರಿಯಾದ ಪ್ರಧಾನಿ ಮೋದಿಯವರ ಕನಸಿನ ಯೋಜನೆ ಸ್ವಚ್ಛ ಭಾರತ ಅಭಿಯಾನ. ಶುರುವಾದ ಮೊದಲ ಕೆಲ ತಿಂಗಳು ಜನಪ್ರಿಯ ನಟರು, ಪ್ರಭಾವಿಗಳು ಈ ಯೋಜನೆಯ ರಾಯಭಾರಿಗಳಾಗಿ ಪೊರಕೆ ಹಿಡಿದು ನಿಂತಾಗ ಈ ಯೋಜನೆಯ ಬಗ್ಗೆ ಒಂದಿಷ್ಟು ಸುದ್ದಿಯಾಯಿತು. ಯೋಜನೆ ಜಾರಿಯಾದ ಕಳೆದ ಒಂದು ವರ್ಷದ ಅವಧಿಯಲ್ಲಿ … ಓದನ್ನು ಮುಂದುವರೆಸಿ
ಕನ್ನಡದ ಸ್ಥಿತಿಗತಿ – ಹತಾಶೆಯ ನಡುವೆಯೂ ಹೊಸ ಭರವಸೆ
ಕರ್ನಾಟಕ ಒಂದಾದ ದಿನ ಮತ್ತೆ ಬಂದಿದೆ. ಇಡೀ ನವೆಂಬರ್ ತಿಂಗಳು ರಾಜ್ಯೋತ್ಸವದ ಅಬ್ಬರದ ನಡುವೆ ಕನ್ನಡದ ದುಸ್ಥಿತಿಯ ಬಗ್ಗೆ ಆತಂಕದ ಚರ್ಚೆಗಳೂ ಏರ್ಪಡುತ್ತವೆ. ಈ ಎಲ್ಲ ಚಿಂತೆಗಳ ನಡುವೆಯೇ ಕಳೆದ ಹತ್ತು ವರ್ಷಗಳಲ್ಲಿ ಕನ್ನಡದ ಬೇರು ಬಲವಾಗುತ್ತಿರುವ ಬಗ್ಗೆ ಹಲವು ಧನಾತ್ಮಕ ಬದಲಾವಣೆಗಳನ್ನು ಗಮನಿಸಬಹುದು. ಅವು ಕನ್ನಡದ ಬಗೆಗಿನ ನಮ್ಮ ಆತಂಕಗಳನ್ನು ಸಾಕಷ್ಟು ಕಡಿಮೆ ಮಾಡುವಂತದ್ದು. … ಓದನ್ನು ಮುಂದುವರೆಸಿ