Category Archives: ಒಕ್ಕೂಟ ವ್ಯವಸ್ಥೆ

ಈ ಬಾರಿಯ ಕಾವೇರಿ ವಿವಾದ ಕನ್ನಡಿಗರಿಗೆ ಕೊಡುತ್ತಿರುವ ಸಂದೇಶವೇನು?

ಕಾವೇರಿ ವಿವಾದ – ಕನ್ನಡಿಗರಿಗೆ ಕೊಡುತ್ತಿರುವ ಸಂದೇಶ ತಮಿಳುನಾಡಿನ ಜೊತೆಗಿನ ಕರ್ನಾಟಕದ ಕಾವೇರಿ ವಿವಾದ ನೂರು ವರುಶಗಳಿಗೂ ಮಿಗಿಲಾದದ್ದು. ಸ್ವಾತಂತ್ರ್ಯಕ್ಕೆ ಮುಂಚೆ ಬ್ರಿಟಿಷರ ಪ್ರಭಾವದಿಂದಲೂ, ಸ್ವಾತಂತ್ರ್ಯ ನಂತರ ದೆಹಲಿಯಲ್ಲಿ ತಮಿಳುನಾಡಿನ ಪ್ರಾದೇಶಿಕ ಪಕ್ಷಗಳಿಗಿದ್ದ ಪ್ರಭಾವದಿಂದಲೂ ನಿರಂತರವಾಗಿ ತಮಿಳುನಾಡು ತನ್ನನ್ನು ತಾನು ಶೋಷಿತರಂತೆಯೂ, ಕರ್ನಾಟಕವನ್ನು ಶೋಷಿಸುವವರಂತೆಯೂ ಬಿಂಬಿಸುತ್ತ ಕಾವೇರಿ ನೀರಿನ ಮೇಲೆ ಹಕ್ಕು ಸಾಧಿಸಿ, ಕರ್ನಾಟಕಕ್ಕೆ ಅನ್ಯಾಯ … ಓದನ್ನು ಮುಂದುವರೆಸಿ

Posted in ಒಕ್ಕೂಟ ವ್ಯವಸ್ಥೆ, ಕನ್ನಡತನ, ಕರ್ನಾಟಕ | ನಿಮ್ಮ ಟಿಪ್ಪಣಿ ಬರೆಯಿರಿ

ಜಿಎಸ್ಟಿ ಕುರಿತ ಹೊಗಳಿಕೆಗಳ ಮಹಾಪೂರದಲ್ಲಿ ಕೊಚ್ಚಿ ಹೋಯಿತೇ ರಾಜ್ಯಗಳ ಹಿತಾಸಕ್ತಿ?

ಕಳೆದ ಹದಿನೈದು ವರ್ಷಗಳಿಂದ ರಾಜ್ಯಗಳು ಮತ್ತು ಕೇಂದ್ರ ಸರ್ಕಾರದ ನಡುವೆ ನಿರಂತರ ಹಗ್ಗಜಗ್ಗಾಟಕ್ಕೆ ಕಾರಣವಾಗಿದ್ದ ಸರಕು ಮತ್ತು ಸೇವಾ ತೆರಿಗೆ ಕಾಯ್ದೆ(ಜಿ.ಎಸ್.ಟಿ)ಗೆ ಕಳೆದ ವಾರ ರಾಜ್ಯಸಭೆಯಲ್ಲಿ ಒಪ್ಪಿಗೆ ದೊರೆತಿದೆ. 1991ರಲ್ಲಿ ಅಂದಿನ ಪ್ರಧಾನಿ ಪಿ.ವಿ.ನರಸಿಂಹರಾವ್ ಅವರ ಮುಂದಾಳತ್ವದಲ್ಲಿ ಶುರುವಾದ ಆರ್ಥಿಕ ಸುಧಾರಣೆಯ ಪ್ರಕ್ರಿಯೆ ಈಗ ಇನ್ನೊಂದು ಹಂತ ತಲುಪಿದ್ದು, ಜಿ.ಎಸ್.ಟಿ ದೇಶದ ಜಿಡಿಪಿ ಬೆಳವಣಿಗೆಯನ್ನು ಒಂದರಿಂದ … ಓದನ್ನು ಮುಂದುವರೆಸಿ

Posted in ಒಕ್ಕೂಟ ವ್ಯವಸ್ಥೆ, ಕರ್ನಾಟಕ, GST | ನಿಮ್ಮ ಟಿಪ್ಪಣಿ ಬರೆಯಿರಿ

ಬಲಿಷ್ಟ ರಾಜ್ಯಗಳಿಂದಲೇ ಭಾರತದ ಏಳಿಗೆ – ಮೋದಿಯವರಿಗೆ ರಾಜ್ಯಗಳ ಪಾಠ

ಕಳೆದ ವಾರ ದೆಹಲಿಯಲ್ಲಿ ನಡೆದ ಅಂತರ್ ರಾಜ್ಯ ಸಮಿತಿ ಸಭೆ ಭಾರತದ ಒಕ್ಕೂಟ ವ್ಯವಸ್ಥೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಒಂದು ಮಹತ್ವದ ಸಭೆಯಾಗಿತ್ತು. ಪ್ರಧಾನಿ ಮೋದಿಯವರ ಅಧ್ಯಕ್ಷತೆಯಲ್ಲಿ ಕರೆಯಲಾಗಿದ್ದ ಈ ಸಭೆಯಲ್ಲಿ ಬಹುತೇಕ ರಾಜ್ಯಗಳ ಮುಖ್ಯಮಂತ್ರಿಗಳು ಇಲ್ಲವೇ ಹಿರಿಯ ಸಚಿವರು ಪಾಲ್ಗೊಂಡಿದ್ದರು. ಹತ್ತು ವರ್ಷಗಳ ದೊಡ್ಡ ಅಂತರದ ನಂತರ ಏರ್ಪಾಡಾಗಿದ್ದ ಈ ಸಭೆಯಲ್ಲಿ ಒಕ್ಕೂಟದ ಬೇರೆ ಬೇರೆ … ಓದನ್ನು ಮುಂದುವರೆಸಿ

Posted in ಒಕ್ಕೂಟ ವ್ಯವಸ್ಥೆ, ISC | ನಿಮ್ಮ ಟಿಪ್ಪಣಿ ಬರೆಯಿರಿ

ದೆಹಲಿ ತಲುಪಿದ ಭಾಷಾ ಸಮಾನತೆಯ ಕೂಗು !

ಇಂದು ಫೆಬ್ರವರಿ 21 ವಿಶ್ವ ತಾಯ್ನುಡಿ ದಿನ. 1952ರಲ್ಲಿ ಬೆಂಗಾಲಿಗಳ ಮೇಲೆ ಉರ್ದು ಹೇರಿಕೆಯನ್ನು ವಿರೋಧಿಸಿ, ಬೆಂಗಾಲಿ ಭಾಷೆಗೂ ಪಾಕಿಸ್ತಾನದ ಅಧಿಕೃತ ಭಾಷೆಯ ಸ್ಥಾನಮಾನ ನೀಡುವಂತೆ ಒತ್ತಾಯಿಸಿ, ಅಂದಿನ ಪೂರ್ವ ಪಾಕಿಸ್ತಾನ, ಇಂದಿನ ಬಾಂಗ್ಲಾದೇಶದ ಢಾಕಾ ನಗರದಲ್ಲಿ ಪೋಲಿಸರ ಗುಂಡಿಗೆ ಎದೆಯೊಡ್ಡಿ ಹುತಾತ್ಮರಾದ ಬೆಂಗಾಲಿ ವಿದ್ಯಾರ್ಥಿಗಳ ನೆನಪಿನಲ್ಲಿ ಈ ದಿನ ಆಚರಿಸಲಾಗುತ್ತದೆ. ಅಂದು ಬೆಂಗಾಲಿಗಳ ಪ್ರಾಮಾಣಿಕವೂ, … ಓದನ್ನು ಮುಂದುವರೆಸಿ

Posted in ಒಕ್ಕೂಟ ವ್ಯವಸ್ಥೆ, ಕನ್ನಡ, ಹಿಂದಿ ಹೇರಿಕೆ | 1 ಟಿಪ್ಪಣಿ

ಚೆನ್ನೈ ನೆರೆ ಹಾಗೂ ದೆಹಲಿ ಮಾಧ್ಯಮಗಳ ನಿದ್ದೆ

ಚೆನ್ನೈ ನಗರ ಕಳೆದ ನೂರು ವರುಶಗಳಲ್ಲೇ ಕಾಣದಷ್ಟು ದೊಡ್ಡ ಪ್ರಮಾಣದ ನೆರೆಗೆ ಸಿಲುಕಿ ಸಾಮಾನ್ಯ ಜನರ ಜೀವನ ಏರುಪೇರಾಗಿರುವುದನ್ನು ಕಾಣುತ್ತಿದ್ದೇವೆ. ಚೆನ್ನೈ ಒಂದೇ ಅಲ್ಲದೇ ತಮಿಳುನಾಡಿನ ಕರಾವಳಿ ಮತ್ತು ದಕ್ಷಿಣ ಆಂಧ್ರಪ್ರದೇಶದಲ್ಲೂ ಇದೇ ಸ್ಥಿತಿ ಇದೆ. ತೀವ್ರ ಕಷ್ಟಕ್ಕೆ ತಮಿಳರು ಮತ್ತು ತೆಲುಗರು ಸಿಲುಕಿರುವ ಈ ಹೊತ್ತಿನಲ್ಲಿ ಭಾರತದ ಇಂಗ್ಲಿಷ್ ಮಾಧ್ಯಮಗಳು ಇದಕ್ಕೆ ಹೇಗೆ ಸ್ಪಂದಿಸುತ್ತಿವೆ … ಓದನ್ನು ಮುಂದುವರೆಸಿ

Posted in ಒಕ್ಕೂಟ ವ್ಯವಸ್ಥೆ, ದಕ್ಷಿಣ ಭಾರತ | ನಿಮ್ಮ ಟಿಪ್ಪಣಿ ಬರೆಯಿರಿ

ಈಗಿರುವ ಸ್ವರೂಪದಲ್ಲಿ ಭಾರತ ಸ್ವಚ್ಛವಾಗುವುದಿಲ್ಲ. ಯಾಕೆ ಅಂತೀರಾ?

ಕಳೆದ ವರ್ಷ ಗಾಂಧಿಜಿಯವರ ಹುಟ್ಟು ಹಬ್ಬದ ದಿನ ಬಹಳ ಸದ್ದುಗದ್ದಲದೊಂದಿಗೆ ಜಾರಿಯಾದ ಪ್ರಧಾನಿ ಮೋದಿಯವರ ಕನಸಿನ ಯೋಜನೆ ಸ್ವಚ್ಛ ಭಾರತ ಅಭಿಯಾನ. ಶುರುವಾದ ಮೊದಲ ಕೆಲ ತಿಂಗಳು ಜನಪ್ರಿಯ ನಟರು, ಪ್ರಭಾವಿಗಳು ಈ ಯೋಜನೆಯ ರಾಯಭಾರಿಗಳಾಗಿ ಪೊರಕೆ ಹಿಡಿದು ನಿಂತಾಗ ಈ ಯೋಜನೆಯ ಬಗ್ಗೆ ಒಂದಿಷ್ಟು ಸುದ್ದಿಯಾಯಿತು. ಯೋಜನೆ ಜಾರಿಯಾದ ಕಳೆದ ಒಂದು ವರ್ಷದ ಅವಧಿಯಲ್ಲಿ … ಓದನ್ನು ಮುಂದುವರೆಸಿ

Posted in ಒಕ್ಕೂಟ ವ್ಯವಸ್ಥೆ, ಕರ್ನಾಟಕ | 2 ಟಿಪ್ಪಣಿಗಳು

ಭಾರತವೆಂದರೆ ಹಿಂದಿ ಮತ್ತು ಸಂಸ್ಕೃತ ಮಾತ್ರವೇ?

   ಸಂಸ್ಕೃತ ನುಡಿಯನ್ನು ಕಲಿಯುವಂತೆ ಜಾಗೃತಿ ಮೂಡಿಸಲು ‘ಮನೆ ಮನೆಗೆ ಸಂಸ್ಕೃತ’ ಎಂಬ ರಾಷ್ಟ್ರಮಟ್ಟದ ಅಭಿಯಾನವನ್ನು ಸಂಸ್ಕೃತ ಭಾರತಿ ಹಮ್ಮಿಕೊಂಡಿರುವುದರ ಬಗ್ಗೆ ಕನ್ನಡದ ಪ್ರಮುಖ ಸುದ್ದಿಹಾಳೆಯೊಂದರಲ್ಲಿ ವರದಿಯಾಗಿದೆ ( ಪ್ರ.ವಾ ಆಗಸ್ಟ್ 22 ). ಈ ಅಭಿಯಾನದ ಅಂಗವಾಗಿ ಮನೆ ಮನೆಗೆ ತೆರಳಿ ಸಂಸ್ಕೃತದ ಬಗ್ಗೆ ಕರಪತ್ರವನ್ನು ನೀಡುವ ಮತ್ತು ಸಂಸ್ಕೃತದಲ್ಲಿ ಮಾತಾಡುವಂತೆ ಜನರಲ್ಲಿ ಜಾಗೃತಿ … ಓದನ್ನು ಮುಂದುವರೆಸಿ

Posted in ಒಕ್ಕೂಟ ವ್ಯವಸ್ಥೆ, ಕನ್ನಡ, ಕಲಿಕೆ, ನುಡಿ, ಹಿಂದಿ ಹೇರಿಕೆ | ನಿಮ್ಮ ಟಿಪ್ಪಣಿ ಬರೆಯಿರಿ

ನಮಗೇನು ಬೇಕು? Self rule or dependent rule?

ಸಹಕಾರಿ ತತ್ವದ ಒಕ್ಕೂಟ ವ್ಯವಸ್ಥೆ ಅನ್ನುವ ಪದಗಳು ಮೋದಿ ಸರ್ಕಾರ ಬಂದಾಗಿನಿಂದ ಹೆಚ್ಚೆಚ್ಚು ಚಾಲನೆಯಲ್ಲಿವೆ. 14ನೇ ಹಣಕಾಸು ಆಯೋಗದ ವರದಿಯನ್ನು ಜಾರಿಗೊಳಿಸುವ ಮೂಲಕ ಕೇಂದ್ರದಿಂದ ರಾಜ್ಯಕ್ಕೆ ವರ್ಗಾವಣೆಯಾಗುವ ತೆರಿಗೆ ಹಣದ ಪ್ರಮಾಣವನ್ನು 32ರಿಂದ 42 ಪ್ರತಿಶತಕ್ಕೆ ಏರಿಸಲಾಗಿರುವುದು ಮೋದಿ ಸರ್ಕಾರ ರಾಜ್ಯಗಳ ಪರ ಕೈಗೊಂಡ ದೊಡ್ಡ ನಿರ್ಧಾರವೆಂದೇ ಬಿಂಬಿತವಾಗಿದೆ. ಆದರೆ ಇದರ ಬೆನ್ನಲ್ಲೇ ಹಲವಾರು ವಿಷಯಗಳಲ್ಲಿ … ಓದನ್ನು ಮುಂದುವರೆಸಿ

Posted in ಒಕ್ಕೂಟ ವ್ಯವಸ್ಥೆ | ನಿಮ್ಮ ಟಿಪ್ಪಣಿ ಬರೆಯಿರಿ

ಮೋದಿ ಸರ್ಕಾರಕ್ಕೆ ಒಂದು ವರುಶ – ಒಕ್ಕೂಟ ವ್ಯವಸ್ಥೆಯ ಕಣ್ಣಿನಿಂದ ಒಂದು ವಿಮರ್ಶೆ

ಮೋದಿಯವರ ಸರ್ಕಾರಕ್ಕೆ ಒಂದು ವರುಶ ತುಂಬಿದ್ದು, ಸರ್ಕಾರದ ಸಾಧನೆ, ವೈಫಲ್ಯಗಳ ಬಗ್ಗೆ ಚರ್ಚೆಯಾಗುತ್ತಿದೆ. ಮೋದಿ ಗುಜರಾತಿನ ಮುಖ್ಯಮಂತ್ರಿ ಹುದ್ದೆಯಿಂದ ಪ್ರಧಾನಿ ಹುದ್ದೆಗೇರಿದವರು ಮತ್ತು ಸತತವಾಗಿ ಸಹಕಾರಿ ತತ್ವದ ಒಕ್ಕೂಟ ವ್ಯವಸ್ಥೆ ಬಗ್ಗೆ ಮಾತನಾಡುತ್ತ ಬಂದವರು. ಹೀಗಾಗಿ ಅವರ ಸರ್ಕಾರ “ಒಕ್ಕೂಟ ವ್ಯವಸ್ಥೆ”ಯ ವಿಷಯದಲ್ಲಿ ಏನು ಮಾಡಿದೆ ಅನ್ನುವುದನ್ನು ಗಮನಿಸುತ್ತ ಬಂದಿದ್ದ ನನಗೆ ಕಂಡ ಕೆಲ ಅಂಶಗಳನ್ನು … ಓದನ್ನು ಮುಂದುವರೆಸಿ

Posted in ಒಕ್ಕೂಟ ವ್ಯವಸ್ಥೆ, ಹಿಂದಿ ಹೇರಿಕೆ | ನಿಮ್ಮ ಟಿಪ್ಪಣಿ ಬರೆಯಿರಿ

ಪೂರ್ಣ ಚಂದ್ರ ತೇಜಸ್ವಿಯವರೊಳಗಿದ್ದ ಒಬ್ಬ ಕನ್ನಡ ಪರ ರಾಜಕೀಯ ಚಿಂತಕ

ಇಂದಿಗೆ ತೇಜಸ್ವಿ ನಮ್ಮನ್ನಗಲಿ ಎಂಟು ವರುಶವಾಯಿತು.  ಇಂದಿನ ಯುವ ಪೀಳಿಗೆಯಲ್ಲಿ ಕನ್ನಡ ಪುಸ್ತಕಗಳನ್ನು ಓದುವ ಹವ್ಯಾಸವೇ ಕಡಿಮೆಯಾಗಿದ್ದರೂ ಓದುತ್ತಿರುವ ಹೆಚ್ಚಿನವರ ಪಟ್ಟಿಯಲ್ಲಿ ತೇಜಸ್ವಿಯವರ ಹೆಸರು ಇರದೇ ಇರಲು ಸಾಧ್ಯವಿಲ್ಲ. ಅಷ್ಟರಮಟ್ಟಿಗೆ ಎರಡು ತಲೆಮಾರಿನ ಕನ್ನಡಿಗರನ್ನು ಆವರಿಸಿರುವ ಬರಹಗಾರ ತೇಜಸ್ವಿ. ಬರೀ ಕತೆ, ಕವನಕ್ಕೆ ಸೀಮಿತವಾಗದೇ ಪರಿಸರ ಚಳುವಳಿ, ಫೋಟೊಗ್ರಾಫಿ, ನಾಟಕ, ಸಿನೆಮಾ, ಕಂಪ್ಯೂಟರ್ಸ್, ಜಾಗತೀಕರಣ, ಎಕನಾಮಿಕ್ಸ್ … ಓದನ್ನು ಮುಂದುವರೆಸಿ

Posted in ಒಕ್ಕೂಟ ವ್ಯವಸ್ಥೆ, ಕನ್ನಡ | ನಿಮ್ಮ ಟಿಪ್ಪಣಿ ಬರೆಯಿರಿ