Category Archives: ಕನ್ನಡತನ
ಈ ಬಾರಿಯ ಕಾವೇರಿ ವಿವಾದ ಕನ್ನಡಿಗರಿಗೆ ಕೊಡುತ್ತಿರುವ ಸಂದೇಶವೇನು?
ಕಾವೇರಿ ವಿವಾದ – ಕನ್ನಡಿಗರಿಗೆ ಕೊಡುತ್ತಿರುವ ಸಂದೇಶ ತಮಿಳುನಾಡಿನ ಜೊತೆಗಿನ ಕರ್ನಾಟಕದ ಕಾವೇರಿ ವಿವಾದ ನೂರು ವರುಶಗಳಿಗೂ ಮಿಗಿಲಾದದ್ದು. ಸ್ವಾತಂತ್ರ್ಯಕ್ಕೆ ಮುಂಚೆ ಬ್ರಿಟಿಷರ ಪ್ರಭಾವದಿಂದಲೂ, ಸ್ವಾತಂತ್ರ್ಯ ನಂತರ ದೆಹಲಿಯಲ್ಲಿ ತಮಿಳುನಾಡಿನ ಪ್ರಾದೇಶಿಕ ಪಕ್ಷಗಳಿಗಿದ್ದ ಪ್ರಭಾವದಿಂದಲೂ ನಿರಂತರವಾಗಿ ತಮಿಳುನಾಡು ತನ್ನನ್ನು ತಾನು ಶೋಷಿತರಂತೆಯೂ, ಕರ್ನಾಟಕವನ್ನು ಶೋಷಿಸುವವರಂತೆಯೂ ಬಿಂಬಿಸುತ್ತ ಕಾವೇರಿ ನೀರಿನ ಮೇಲೆ ಹಕ್ಕು ಸಾಧಿಸಿ, ಕರ್ನಾಟಕಕ್ಕೆ ಅನ್ಯಾಯ … ಓದನ್ನು ಮುಂದುವರೆಸಿ
“ಕನ್ನಡ ಜಗತ್ತು” ಪುಸ್ತಕದ ಬಗ್ಗೆ ವೈ.ಎಸ್.ವಿ ದತ್ತಾ ಅವರ ಅನಿಸಿಕೆಗಳು
ಡಿಸೆಂಬರ್ 12, ಶನಿವಾರ ಬನವಾಸಿ ಬಳಗ ಪ್ರಕಾಶನದಿಂದ ನನ್ನ “ಕನ್ನಡ ಜಗತ್ತು” ಪುಸ್ತಕ ಬಿಡುಗಡೆಯಾಯಿತು. ಈ ಕಾರ್ಯಕ್ರಮದ ಅತಿಥಿಗಳಲ್ಲಿ ಒಬ್ಬರಾಗಿದ್ದ ಶಾಸಕರು, ಜಾತ್ಯಾತೀತ ಜನತಾದಳದ ಹಿರಿಯ ನಾಯಕರು ಆದ ವೈ.ಎಸ್.ವಿ ದತ್ತಾ ಅವರು ಕಾರಣಾಂತರಗಳಿಂದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗದ ಕಾರಣ ಪುಸ್ತಕದ ಬಗೆಗಿನ ತಮ್ಮ ಅನಿಸಿಕೆಯನ್ನು ಪತ್ರದ ಮೂಲಕ ಬರೆದು ಕಳಿಸಿದ್ದರು. ಆ ಪತ್ರದಲ್ಲಿ ಕರ್ನಾಟಕದ, … ಓದನ್ನು ಮುಂದುವರೆಸಿ
ತಮಿಳರು, ಬೆಂಗಾಲಿಗಳ ತರ ಕನ್ನಡಿಗರಿಗೇಕೆ ಸ್ಟಿರಿಯೋಟೈಪ್ ಇಲ್ಲ?
“ಭಾಷೆ ವಿಷಯಕ್ಕೆ ಬಂದರೆ ಅವನೊಳ್ಳೆ ತಮಿಳರ ತರ ಆಡ್ತಾನೆ.”, “ ಮಲ್ಲುಗಳು (ಮಲೆಯಾಳಿಗಳು) ಬಿಡಿ, ಚಂದ್ರಲೋಕದಲ್ಲಿ ಬಿಟ್ರೂ ಕಿರಾಣಿ ಅಂಗಡಿ, ಇಲ್ಲ ಚಹದಂಗಡಿ ಶುರು ಮಾಡಿ ಬಿಡ್ತಾರೆ.”, “ಗುಜ್ಜುಗಳ (ಗುಜರಾತಿಗಳು) ರಕ್ತದಲ್ಲೇ ವ್ಯಾಪಾರ ಬರೆದಿದೆ”, “ಬೊಂಗ್ (ಬೆಂಗಾಲಿ) ಗಳು ಸಕತ್ ಕನ್ನಿಂಗ್ ಆಗಿರ್ತಾರೆ ಬಿಡಮ್ಮ”, “ಈ ಗುಲ್ಟಿಗಳು (ತೆಲುಗರು) ಸಿನ್ಮಾ ಅಂದ್ರೆ ಸಾಯ್ತಾರಪ್ಪ” ಈ ರೀತಿ … ಓದನ್ನು ಮುಂದುವರೆಸಿ
ಬದುಕುಳಿಯುತ್ತಿರುವ ಮೊಹಾವಿ ನುಡಿ ಕನ್ನಡಕ್ಕೆ ಹೇಳುತ್ತಿರುವ ಪಾಠವೇನು ಗೊತ್ತೇ?
ಅಮೇರಿಕದ ಇವತ್ತಿನ ನುಡಿ ಇಂಗ್ಲಿಷ್ ಆಗಿರಬಹುದು, ಆದರೆ ಅಲ್ಲಿನ ಮೂಲನಿವಾಸಿಗಳ ನುಡಿ ಇಂಗ್ಲಿಷ್ ಅಲ್ಲ. ಕಾಡು ಮೇಡಿನಲ್ಲಿದ್ದ ಬುಡಕಟ್ಟಿನ ಮೂಲ ನಿವಾಸಿಗಳು ಇಷ್ಟ ಪಟ್ಟೋ, ಒತ್ತಾಯದಿಂದಲೋ ಕಾಡು ತೊರೆದು ನಾಡು ಸೇರುತ್ತ ಅವರ ನುಡಿಗಳು ಹಂತ ಹಂತವಾಗಿ ಕಣ್ಮರೆಯಾಗುವ ಪ್ರಸಂಗ ಅಮೇರಿಕದಲ್ಲೂ ನಡೆಯುತ್ತಿದೆ. ಒಂದು ನುಡಿಯ ಸಾವಿನೊಂದಿಗೆ ಸಾವಿರಾರು ವರ್ಷಗಳ ಅವಧಿಯಲ್ಲಿ ಆ ನುಡಿಯಲ್ಲಿ ಹುಟ್ಟಿಕೊಂಡಿದ್ದ … ಓದನ್ನು ಮುಂದುವರೆಸಿ
ಪಂಜಾಬಿ ರ‍್ಯಾಪ್ ಸಂಗೀತದ ಗೆಲುವಿನಿಂದ ಕನ್ನಡಿಗರು ಕಲಿಯಬೇಕಾದದ್ದೇನು?
ಸಂಗೀತ, ಹಾಡು ಮತ್ತು ಕುಣಿತ ಮನುಷ್ಯನ ಜೀವನದಲ್ಲಿ ಬೇರ್ಪಡಿಸಲಾಗದ ಕೊಂಡಿಗಳಾಗಿವೆ. ಪ್ರತಿ ಭಾಷಿಕ ಜನಾಂಗವೂ ತನ್ನದೇ ಆದ ರೀತಿಯಲ್ಲಿ ಇದನ್ನು ಕಟ್ಟಿಕೊಂಡಿದೆ. ಒಂದು ಭಾಷಿಕರ ಇತಿಹಾಸ ತಿಳಿಯುವಾಗ ಅವರಲ್ಲಿದ್ದ ಈ ಸಾಂಸ್ಕೃತಿಕ ಪ್ರಕಾರಗಳ ಬಗ್ಗೆ ತಿಳಿಯದೇ ಹೋದರೆ ಆ ತಿಳುವಳಿಕೆ ಅಪೂರ್ಣವಾಗಿಯೇ ಉಳಿಯುವುದು. ಭಾರತದಂತಹ ಬೆರಗಾಗುವಷ್ಟು ವೈವಿಧ್ಯತೆ ಇರುವ ಒಕ್ಕೂಟದಲ್ಲಿ ಪ್ರತಿ ಭಾಷಿಕರಲ್ಲೂ ತಮ್ಮದೇ ಆದ … ಓದನ್ನು ಮುಂದುವರೆಸಿ