Category Archives: ಕನ್ನಡ

ಕರ್ನಾಟಕದ ಬ್ಯಾಂಕುಗಳಲ್ಲಿ ಕನ್ನಡದ ಕತೆ ವ್ಯಥೆ

ಇತ್ತೀಚೆಗೆ ಕರ್ನಾಟಕದ ಬ್ಯಾಂಕುಗಳಲ್ಲಿ ಕನ್ನಡ ಮತ್ತು ಕನ್ನಡಿಗರು ಸಂಪೂರ್ಣವಾಗಿ ಕಡೆಗಣನೆಗೆ ಒಳಗಾಗುತ್ತಿರುವುದು ಹೆಚ್ಚುತ್ತಿದೆ. ಈ ಬಗ್ಗೆ ಸಾಮಾಜಿಕ ತಾಣಗಳ ಮೂಲಕ ನಮ್ಮ ಜನಪ್ರತಿನಿಧಿಗಳ ಗಮನ ಸೆಳೆಯುವ ಕೆಲಸ ಹಲವಾರು ಕನ್ನಡಿಗರು ಮಾಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಸ್ಪಂದಿಸಿದ ಮೈಸೂರು-ಕೊಡಗು ಸಂಸದರಾದ ಪ್ರತಾಪ್ ಸಿಂಹ ಅವರು ಬ್ಯಾಂಕಿನಲ್ಲಿನ ಸಮಸ್ಯೆಗಳ ಬಗ್ಗೆ ಒಂದಿಷ್ಟು ವಿವರವಾದ ಮಾಹಿತಿಯನ್ನು ಕೋರಿದ್ದರು. ಅವರಿಗೆ ಕಳಿಸಲಾದ … ಓದನ್ನು ಮುಂದುವರೆಸಿ

Posted in ಕನ್ನಡ, ಕರ್ನಾಟಕ, ಹಿಂದಿ ಹೇರಿಕೆ | 1 ಟಿಪ್ಪಣಿ

ದೆಹಲಿ ತಲುಪಿದ ಭಾಷಾ ಸಮಾನತೆಯ ಕೂಗು !

ಇಂದು ಫೆಬ್ರವರಿ 21 ವಿಶ್ವ ತಾಯ್ನುಡಿ ದಿನ. 1952ರಲ್ಲಿ ಬೆಂಗಾಲಿಗಳ ಮೇಲೆ ಉರ್ದು ಹೇರಿಕೆಯನ್ನು ವಿರೋಧಿಸಿ, ಬೆಂಗಾಲಿ ಭಾಷೆಗೂ ಪಾಕಿಸ್ತಾನದ ಅಧಿಕೃತ ಭಾಷೆಯ ಸ್ಥಾನಮಾನ ನೀಡುವಂತೆ ಒತ್ತಾಯಿಸಿ, ಅಂದಿನ ಪೂರ್ವ ಪಾಕಿಸ್ತಾನ, ಇಂದಿನ ಬಾಂಗ್ಲಾದೇಶದ ಢಾಕಾ ನಗರದಲ್ಲಿ ಪೋಲಿಸರ ಗುಂಡಿಗೆ ಎದೆಯೊಡ್ಡಿ ಹುತಾತ್ಮರಾದ ಬೆಂಗಾಲಿ ವಿದ್ಯಾರ್ಥಿಗಳ ನೆನಪಿನಲ್ಲಿ ಈ ದಿನ ಆಚರಿಸಲಾಗುತ್ತದೆ. ಅಂದು ಬೆಂಗಾಲಿಗಳ ಪ್ರಾಮಾಣಿಕವೂ, … ಓದನ್ನು ಮುಂದುವರೆಸಿ

Posted in ಒಕ್ಕೂಟ ವ್ಯವಸ್ಥೆ, ಕನ್ನಡ, ಹಿಂದಿ ಹೇರಿಕೆ | 1 ಟಿಪ್ಪಣಿ

“ಕನ್ನಡ ಜಗತ್ತು” ಪುಸ್ತಕದ ಬಗ್ಗೆ ವೈ.ಎಸ್.ವಿ ದತ್ತಾ ಅವರ ಅನಿಸಿಕೆಗಳು

ಡಿಸೆಂಬರ್ 12, ಶನಿವಾರ ಬನವಾಸಿ ಬಳಗ ಪ್ರಕಾಶನದಿಂದ ನನ್ನ “ಕನ್ನಡ ಜಗತ್ತು” ಪುಸ್ತಕ ಬಿಡುಗಡೆಯಾಯಿತು. ಈ ಕಾರ್ಯಕ್ರಮದ ಅತಿಥಿಗಳಲ್ಲಿ ಒಬ್ಬರಾಗಿದ್ದ ಶಾಸಕರು, ಜಾತ್ಯಾತೀತ ಜನತಾದಳದ ಹಿರಿಯ ನಾಯಕರು ಆದ ವೈ.ಎಸ್.ವಿ ದತ್ತಾ ಅವರು ಕಾರಣಾಂತರಗಳಿಂದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗದ ಕಾರಣ ಪುಸ್ತಕದ ಬಗೆಗಿನ ತಮ್ಮ ಅನಿಸಿಕೆಯನ್ನು ಪತ್ರದ ಮೂಲಕ ಬರೆದು ಕಳಿಸಿದ್ದರು. ಆ ಪತ್ರದಲ್ಲಿ ಕರ್ನಾಟಕದ, … ಓದನ್ನು ಮುಂದುವರೆಸಿ

Posted in ಕನ್ನಡ, ಕನ್ನಡತನ, ಕರ್ನಾಟಕ | ನಿಮ್ಮ ಟಿಪ್ಪಣಿ ಬರೆಯಿರಿ

ಕನ್ನಡದ ಸ್ಥಿತಿಗತಿ – ಹತಾಶೆಯ ನಡುವೆಯೂ ಹೊಸ ಭರವಸೆ

ಕರ್ನಾಟಕ ಒಂದಾದ ದಿನ ಮತ್ತೆ ಬಂದಿದೆ. ಇಡೀ ನವೆಂಬರ್ ತಿಂಗಳು ರಾಜ್ಯೋತ್ಸವದ ಅಬ್ಬರದ ನಡುವೆ ಕನ್ನಡದ ದುಸ್ಥಿತಿಯ ಬಗ್ಗೆ ಆತಂಕದ ಚರ್ಚೆಗಳೂ ಏರ್ಪಡುತ್ತವೆ. ಈ ಎಲ್ಲ ಚಿಂತೆಗಳ ನಡುವೆಯೇ ಕಳೆದ ಹತ್ತು ವರ್ಷಗಳಲ್ಲಿ ಕನ್ನಡದ ಬೇರು ಬಲವಾಗುತ್ತಿರುವ ಬಗ್ಗೆ ಹಲವು ಧನಾತ್ಮಕ ಬದಲಾವಣೆಗಳನ್ನು ಗಮನಿಸಬಹುದು. ಅವು ಕನ್ನಡದ ಬಗೆಗಿನ ನಮ್ಮ ಆತಂಕಗಳನ್ನು ಸಾಕಷ್ಟು ಕಡಿಮೆ ಮಾಡುವಂತದ್ದು. … ಓದನ್ನು ಮುಂದುವರೆಸಿ

Posted in ಕನ್ನಡ, ಕರ್ನಾಟಕ | ನಿಮ್ಮ ಟಿಪ್ಪಣಿ ಬರೆಯಿರಿ

ಭಾರತವೆಂದರೆ ಹಿಂದಿ ಮತ್ತು ಸಂಸ್ಕೃತ ಮಾತ್ರವೇ?

   ಸಂಸ್ಕೃತ ನುಡಿಯನ್ನು ಕಲಿಯುವಂತೆ ಜಾಗೃತಿ ಮೂಡಿಸಲು ‘ಮನೆ ಮನೆಗೆ ಸಂಸ್ಕೃತ’ ಎಂಬ ರಾಷ್ಟ್ರಮಟ್ಟದ ಅಭಿಯಾನವನ್ನು ಸಂಸ್ಕೃತ ಭಾರತಿ ಹಮ್ಮಿಕೊಂಡಿರುವುದರ ಬಗ್ಗೆ ಕನ್ನಡದ ಪ್ರಮುಖ ಸುದ್ದಿಹಾಳೆಯೊಂದರಲ್ಲಿ ವರದಿಯಾಗಿದೆ ( ಪ್ರ.ವಾ ಆಗಸ್ಟ್ 22 ). ಈ ಅಭಿಯಾನದ ಅಂಗವಾಗಿ ಮನೆ ಮನೆಗೆ ತೆರಳಿ ಸಂಸ್ಕೃತದ ಬಗ್ಗೆ ಕರಪತ್ರವನ್ನು ನೀಡುವ ಮತ್ತು ಸಂಸ್ಕೃತದಲ್ಲಿ ಮಾತಾಡುವಂತೆ ಜನರಲ್ಲಿ ಜಾಗೃತಿ … ಓದನ್ನು ಮುಂದುವರೆಸಿ

Posted in ಒಕ್ಕೂಟ ವ್ಯವಸ್ಥೆ, ಕನ್ನಡ, ಕಲಿಕೆ, ನುಡಿ, ಹಿಂದಿ ಹೇರಿಕೆ | ನಿಮ್ಮ ಟಿಪ್ಪಣಿ ಬರೆಯಿರಿ

ಚಳಿಗಾಲದ ಅಧಿವೇಶನ ಮತ್ತು ಉತ್ತರ ಕರ್ನಾಟಕದ ಸಮಸ್ಯೆಗಳ ಮೂಲ

ಬೆಳಗಾವಿ ಮತ್ತು ಬೆಂಗಳೂರಿನಲ್ಲಿ ವಿಧಾನಸಭೆಯ ಚಳಿಗಾಲದ ಅಧಿವೇಶನ ಜರುಗಿದೆ. ಕಬ್ಬಿನ ಬೆಳೆಗಾರರ ಸಮಸ್ಯೆ, ಲೋಕಾಯುಕ್ತರ ಭ್ರಷ್ಟಾಚಾರದ ಪ್ರಕರಣ, ರೈತರ ಆತ್ಮಹತ್ಯೆಯಂತಹ ವಿಷಯಗಳು ಅಧಿವೇಶನದಲ್ಲಿ ಹೆಚ್ಚಿನ ಚರ್ಚೆಗೊಳಗಾದವು. ಜೊತೆಯಲ್ಲೇ, ಶಾಸಕ ನಡಹಳ್ಳಿಯವರು ಉತ್ತರ ಕರ್ನಾಟಕ ಪ್ರತ್ಯೇಕತೆ ಹೋರಾಟದ ಪರ ದನಿ ಎತ್ತಿದ್ದ ಹೊತ್ತಿನಲ್ಲೇ ನಡೆದ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆಗಳ ಬಗೆಗಿನ ಚರ್ಚೆ ಹೇಗಿತ್ತು, ಚರ್ಚೆಗಳಲ್ಲಿ ಏನಾಯಿತು … ಓದನ್ನು ಮುಂದುವರೆಸಿ

Posted in ಕನ್ನಡ, ಕರ್ನಾಟಕ | ನಿಮ್ಮ ಟಿಪ್ಪಣಿ ಬರೆಯಿರಿ

ಕನ್ನಡ ಲಿಪಿ ಮಾರ್ಪಡಿಸುವ ಚರ್ಚೆಗೆ ಇದು ಸರಿಯಾದ ಹೊತ್ತು

ಪ್ರಜಾವಾಣಿಯಲ್ಲಿ ಇತ್ತೀಚಿಗೆ ಕನ್ನಡದಲ್ಲಿನ ಮಹಾಪ್ರಾಣಗಳ ಬಳಕೆ ಬಗ್ಗೆ ಹೆಚ್ಚು ಚರ್ಚೆ ನಡೆಯುತ್ತಿದೆ. ಅದನ್ನು ಹುಟ್ಟು ಹಾಕಿದ್ದು ನಾಗೇಶ್ ಹೆಗಡೆಯವರು. ಜುಲೈ 7 ರ ಪ್ರಜಾವಾಣಿಯಲ್ಲಿ ನಾಗೇಶ್ ಹೆಗಡೆಯವರು ಬರೆದಿರುವ ಓಲೆಯೊಂದು ಮೂಡಿಬಂದಿತ್ತು. ಕನ್ನಡ ಮಾದ್ಯಮ ಪಠ್ಯಪುಸ್ತಕಗಳಲ್ಲಿ ಉಂಟಾಗಿರುವ ಕಾಗುಣಿತ ತಪ್ಪುಗಳ ಬಗ್ಗೆ ಆ ಓಲೆಯಲ್ಲಿ ಹೇಳಲಾಗಿತ್ತು. ಆ ಓಲೆಯನ್ನು ಕೆಳಗೆ ನೋಡಬಹುದು. ಜುಲೈ 7 ವಾಚಕರ ವಾಣಿಯಲ್ಲಿ ಬಂದ ನಾಗೇಶ್ ಹೆಗಡೆಯವರ ಓಲೆ ಅವರ ಓಲೆಯಲ್ಲಿ ಹೆಸರಿಸಿದ ತಪ್ಪುಗಳೆಲ್ಲವೂ ಮಹಾಪ್ರಾಣಗಳ … ಓದನ್ನು ಮುಂದುವರೆಸಿ

Posted in ಕನ್ನಡ, ನುಡಿ | ನಿಮ್ಮ ಟಿಪ್ಪಣಿ ಬರೆಯಿರಿ

ನಡಹಳ್ಳಿ ಪಾದಯಾತ್ರೆ – ದಕ್ಷಿಣ ಕರ್ನಾಟಕ ಅನ್ನುವ ಇಲ್ಲದ ಶತ್ರುವನ್ನು ಹುಟ್ಟು ಹಾಕುವ ಯತ್ನ

ಉತ್ತರ ಕರ್ನಾಟಕವನ್ನು ಪ್ರತ್ಯೇಕ ರಾಜ್ಯ ಮಾಡಿ, ಅದರ ಮೊದಲ ಮುಖ್ಯಮಂತ್ರಿಯಾಗಬೇಕು ಅನ್ನುವ ಕನಸು ಹೊತ್ತಂತೆ ಕಾಣುತ್ತಿರುವ ನಡಹಳ್ಳಿಯವರು ಇತ್ತೀಚೆಗೆ ವಿಜಯಪುರದಿಂದ ರಾಯಚೂರಿನವರೆಗೆ ಪಾದಯಾತ್ರೆಯೊಂದನ್ನು ಹಮ್ಮಿಕೊಂಡಿದ್ದರು. ಈ ಪಾದಯಾತ್ರೆಯ ಗುರಿ ನಂಜುಂಡಪ್ಪ ವರದಿಯ ಅನುಷ್ಟಾನಕ್ಕೆ ಒತ್ತಾಯ ತರುವುದು ಎಂದು ಹೇಳಲಾಗಿದ್ದರೂ ಪ್ರತ್ಯೇಕ ಉತ್ತರ ಕರ್ನಾಟಕದ ಬಾವುಟ, ನಕ್ಷೆ ಸಿದ್ದಪಡಿಸಿಕೊಂಡು ಹಾದಿಯುದ್ದಕ್ಕೂ ದಕ್ಷಿಣ ಕರ್ನಾಟಕವನ್ನು ದೂರುತ್ತ ಸಾಗಿದ ರೀತಿ … ಓದನ್ನು ಮುಂದುವರೆಸಿ

Posted in ಕನ್ನಡ, ಕರ್ನಾಟಕ | ನಿಮ್ಮ ಟಿಪ್ಪಣಿ ಬರೆಯಿರಿ

ಬಾಹುಬಲಿಗೆ ರಂಗೀತರಂಗ ಬಲಿ ಮತ್ತು ಡಬ್ಬಿಂಗ್ ನಿಷೇಧ

ಬಾಹುಬಲಿ ಅನ್ನುವ ತೆಲುಗು ಸಿನೆಮಾ ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಭಾಷೆಯಲ್ಲಿ ಕರ್ನಾಟಕದ ಇನ್ನೂರು ಚಿತ್ರಮಂದಿರಗಳಲ್ಲಿ ನಾಳೆ ಬಿಡುಗಡೆಯಾಗುತ್ತಿದೆ. ಇತ್ತೀಚಿನ ದಿನಗಳಲ್ಲೇ ಕನ್ನಡದಲ್ಲಿ ಬಂದ ಅತ್ಯುತ್ತಮ ಚಿತ್ರ ಅನ್ನುವ ಹೆಸರು ಗಳಿಸಿದ್ದ ರಂಗೀತರಂಗ ಚಿತ್ರ ಬಾಹುಬಲಿಯ ಹಣಬಲದ ಮುಂದೆ ಸ್ಪರ್ಧಿಸಲಾಗದೇ ಅರ್ಧದಷ್ಟು ಚಿತ್ರಮಂದಿರಗಳಿಂದ ಹೊರ ನಡೆಯುತ್ತಿದೆ. ಅನೂಪ್ ಭಂಡಾರಿಯಂತಹ ಯುವ, ಪ್ರತಿಭಾವಂತ ಕನ್ನಡಿಗನನ್ನು ಕನ್ನಡ … ಓದನ್ನು ಮುಂದುವರೆಸಿ

Posted in ಕನ್ನಡ, ಡಬ್ಬಿಂಗ್ | ನಿಮ್ಮ ಟಿಪ್ಪಣಿ ಬರೆಯಿರಿ

ಕನ್ನಡದ ವಿಜ್ಞಾನದ ಬರಹಗಳಲ್ಲಿ ಪದಬಳಕೆಯ ಸಮಸ್ಯೆಗಳು 1 – ಪದಕಾಂಡಗಳು

ವಿಜ್ಞಾನದ ಬರಹಗಳನ್ನು ಕನ್ನಡದಲ್ಲಿ ಓದಿದವರಿಗೆ ಪದಗಳ ತೊಡಕು ಮತ್ತು ಗೊಂದಲಗಳ ಅರಿವಿರುತ್ತದೆ. ಮೊದಲೇ ವಿಜ್ಞಾನದ ವಿಷಯಗಳು ತೊಡಕಿನದ್ದಾಗಿರುವ ಕಾರಣ ಅವನ್ನು ಓದಿ ತಿಳಿಯುವುದು ಸುಲಭದ ಕೆಲಸವೇನೂ ಅಲ್ಲ. ವಿಷಯದ ಆಳಕ್ಕೆ ಇಳಿದಂತೆ ಈ ತೊಡಕು, ಗೊಂದಲಗಳು ಹೆಚ್ಚಾಗುತ್ತಲೇ ಹೋಗುತ್ತವೆ. ಆದ್ದರಿಂದ ತಿಳಿಯಾಗಿ, ನೇರವಾಗಿ, ಗೊಂದಲಗಳಿಲ್ಲದೆ, ಓದುಗರಿಗೆ ಅರ್ಥವಾಗುವಂತೆ, ತಿಳಿಸಬೇಕಾದ ವಿಷಯಗಳನ್ನು ಪದಗಳು ತಿಳಿಸಿದರೆ ವಿಜ್ಞಾನವನ್ನು ಓದಿ … ಓದನ್ನು ಮುಂದುವರೆಸಿ

Posted in ಕನ್ನಡ, ನುಡಿಯರಿಮೆ | ನಿಮ್ಮ ಟಿಪ್ಪಣಿ ಬರೆಯಿರಿ