Category Archives: ಹಿಂದಿ ಹೇರಿಕೆ
ಕರ್ನಾಟಕದ ಬ್ಯಾಂಕುಗಳಲ್ಲಿ ಕನ್ನಡದ ಕತೆ ವ್ಯಥೆ
ಇತ್ತೀಚೆಗೆ ಕರ್ನಾಟಕದ ಬ್ಯಾಂಕುಗಳಲ್ಲಿ ಕನ್ನಡ ಮತ್ತು ಕನ್ನಡಿಗರು ಸಂಪೂರ್ಣವಾಗಿ ಕಡೆಗಣನೆಗೆ ಒಳಗಾಗುತ್ತಿರುವುದು ಹೆಚ್ಚುತ್ತಿದೆ. ಈ ಬಗ್ಗೆ ಸಾಮಾಜಿಕ ತಾಣಗಳ ಮೂಲಕ ನಮ್ಮ ಜನಪ್ರತಿನಿಧಿಗಳ ಗಮನ ಸೆಳೆಯುವ ಕೆಲಸ ಹಲವಾರು ಕನ್ನಡಿಗರು ಮಾಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಸ್ಪಂದಿಸಿದ ಮೈಸೂರು-ಕೊಡಗು ಸಂಸದರಾದ ಪ್ರತಾಪ್ ಸಿಂಹ ಅವರು ಬ್ಯಾಂಕಿನಲ್ಲಿನ ಸಮಸ್ಯೆಗಳ ಬಗ್ಗೆ ಒಂದಿಷ್ಟು ವಿವರವಾದ ಮಾಹಿತಿಯನ್ನು ಕೋರಿದ್ದರು. ಅವರಿಗೆ ಕಳಿಸಲಾದ … ಓದನ್ನು ಮುಂದುವರೆಸಿ
ದೆಹಲಿ ತಲುಪಿದ ಭಾಷಾ ಸಮಾನತೆಯ ಕೂಗು !
ಇಂದು ಫೆಬ್ರವರಿ 21 ವಿಶ್ವ ತಾಯ್ನುಡಿ ದಿನ. 1952ರಲ್ಲಿ ಬೆಂಗಾಲಿಗಳ ಮೇಲೆ ಉರ್ದು ಹೇರಿಕೆಯನ್ನು ವಿರೋಧಿಸಿ, ಬೆಂಗಾಲಿ ಭಾಷೆಗೂ ಪಾಕಿಸ್ತಾನದ ಅಧಿಕೃತ ಭಾಷೆಯ ಸ್ಥಾನಮಾನ ನೀಡುವಂತೆ ಒತ್ತಾಯಿಸಿ, ಅಂದಿನ ಪೂರ್ವ ಪಾಕಿಸ್ತಾನ, ಇಂದಿನ ಬಾಂಗ್ಲಾದೇಶದ ಢಾಕಾ ನಗರದಲ್ಲಿ ಪೋಲಿಸರ ಗುಂಡಿಗೆ ಎದೆಯೊಡ್ಡಿ ಹುತಾತ್ಮರಾದ ಬೆಂಗಾಲಿ ವಿದ್ಯಾರ್ಥಿಗಳ ನೆನಪಿನಲ್ಲಿ ಈ ದಿನ ಆಚರಿಸಲಾಗುತ್ತದೆ. ಅಂದು ಬೆಂಗಾಲಿಗಳ ಪ್ರಾಮಾಣಿಕವೂ, … ಓದನ್ನು ಮುಂದುವರೆಸಿ
ಭಾರತವೆಂದರೆ ಹಿಂದಿ ಮತ್ತು ಸಂಸ್ಕೃತ ಮಾತ್ರವೇ?
ಸಂಸ್ಕೃತ ನುಡಿಯನ್ನು ಕಲಿಯುವಂತೆ ಜಾಗೃತಿ ಮೂಡಿಸಲು ‘ಮನೆ ಮನೆಗೆ ಸಂಸ್ಕೃತ’ ಎಂಬ ರಾಷ್ಟ್ರಮಟ್ಟದ ಅಭಿಯಾನವನ್ನು ಸಂಸ್ಕೃತ ಭಾರತಿ ಹಮ್ಮಿಕೊಂಡಿರುವುದರ ಬಗ್ಗೆ ಕನ್ನಡದ ಪ್ರಮುಖ ಸುದ್ದಿಹಾಳೆಯೊಂದರಲ್ಲಿ ವರದಿಯಾಗಿದೆ ( ಪ್ರ.ವಾ ಆಗಸ್ಟ್ 22 ). ಈ ಅಭಿಯಾನದ ಅಂಗವಾಗಿ ಮನೆ ಮನೆಗೆ ತೆರಳಿ ಸಂಸ್ಕೃತದ ಬಗ್ಗೆ ಕರಪತ್ರವನ್ನು ನೀಡುವ ಮತ್ತು ಸಂಸ್ಕೃತದಲ್ಲಿ ಮಾತಾಡುವಂತೆ ಜನರಲ್ಲಿ ಜಾಗೃತಿ … ಓದನ್ನು ಮುಂದುವರೆಸಿ
ಮೋದಿ ಸರ್ಕಾರಕ್ಕೆ ಒಂದು ವರುಶ – ಒಕ್ಕೂಟ ವ್ಯವಸ್ಥೆಯ ಕಣ್ಣಿನಿಂದ ಒಂದು ವಿಮರ್ಶೆ
ಮೋದಿಯವರ ಸರ್ಕಾರಕ್ಕೆ ಒಂದು ವರುಶ ತುಂಬಿದ್ದು, ಸರ್ಕಾರದ ಸಾಧನೆ, ವೈಫಲ್ಯಗಳ ಬಗ್ಗೆ ಚರ್ಚೆಯಾಗುತ್ತಿದೆ. ಮೋದಿ ಗುಜರಾತಿನ ಮುಖ್ಯಮಂತ್ರಿ ಹುದ್ದೆಯಿಂದ ಪ್ರಧಾನಿ ಹುದ್ದೆಗೇರಿದವರು ಮತ್ತು ಸತತವಾಗಿ ಸಹಕಾರಿ ತತ್ವದ ಒಕ್ಕೂಟ ವ್ಯವಸ್ಥೆ ಬಗ್ಗೆ ಮಾತನಾಡುತ್ತ ಬಂದವರು. ಹೀಗಾಗಿ ಅವರ ಸರ್ಕಾರ “ಒಕ್ಕೂಟ ವ್ಯವಸ್ಥೆ”ಯ ವಿಷಯದಲ್ಲಿ ಏನು ಮಾಡಿದೆ ಅನ್ನುವುದನ್ನು ಗಮನಿಸುತ್ತ ಬಂದಿದ್ದ ನನಗೆ ಕಂಡ ಕೆಲ ಅಂಶಗಳನ್ನು … ಓದನ್ನು ಮುಂದುವರೆಸಿ
ಭಾರತಕ್ಕೂ ಚೀನಾಗೂ ಇರುವ ಸಾಮ್ಯತೆ – ಭಾಷಾ ಹೇರಿಕೆ
ಚೀನಾ ಅಂದ ಕೂಡಲೇ ಮೊದಲು ಕೇಳಿ ಬರುವುದೇನು? ಚೀನಾದಲ್ಲಿ ಒಂದೇ ಭಾಷೆಯಿದ್ದು, ಚೀನಿಯರೆಲ್ಲರೂ ಮ್ಯಾಂಡರೀನ್ ನುಡಿಯುತ್ತಾರೆ ಅನ್ನುವುದಲ್ಲವೇ? ಭಾರತದಲ್ಲಿ ಭಾಷಾ ವೈವಿಧ್ಯತೆ ಇರುವುದೇ ನಮ್ಮ ಸಮಸ್ಯೆ, ಚೀನಿಯರಂತೆ ನಮ್ಮಲ್ಲೂ ಒಂದೇ ನುಡಿ ಇದ್ದಿದ್ದರೆ ಚೆನ್ನಾಗಿರುತ್ತಿತ್ತು ಅನ್ನುವ ಅಭಿಪ್ರಾಯ ಕೆಲವರದ್ದು. ಆದರೆ ಪ್ರಜಾಪ್ರಭುತ್ವವಿಲ್ಲದ, ಹೊರಪ್ರಪಂಚಕ್ಕೆ ಯಾವತ್ತಿಗೂ ಮುಚ್ಚಿಕೊಂಡಿರುವ ಚೀನಾದೊಳಗೆ ಅತ್ಯಂತ ವ್ಯವಸ್ಥಿತವಾಗಿ ಅಲ್ಲಿನ ಹಲವಾರು ಭಾಷೆಗಳನ್ನು ಹಂತ … ಓದನ್ನು ಮುಂದುವರೆಸಿ
ಬ್ಯಾಂಕುಗಳಿಗೆ ಏನು ಮುಖ್ಯವಾಗಬೇಕು? ಜನರ ಅನುಕೂಲವೋ? ಹಿಂದೀ ಹೇರಿಕೆಯೋ?
ಇತ್ತೀಚೆಗೆ ಕರ್ನಾಟಕದಲ್ಲೇ ಹುಟ್ಟಿ ಬೆಳೆದ ಕೇಂದ್ರ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಒಂದರಲ್ಲಿ ಕನ್ನಡಕ್ಕೆ ಒದಗಿರುವ ಸ್ಥಿತಿಯ ಬಗ್ಗೆ ಗೆಳೆಯರೊಬ್ಬರು ತಮ್ಮ ಅನುಭವ ಹಂಚಿಕೊಂಡರು. ಎಲ್ಲೇ ಹೋದರೂ ಕನ್ನಡದಲ್ಲಿ ಗ್ರಾಹಕ ಸೇವೆಗಾಗಿ ಶಾಂತಿಯುತ ಅಸಹಕಾರ ಚಳುವಳಿಗೆ ಇಳಿಯುವ ಅವರು ಕೇಂದ್ರ ಸರ್ಕಾರ ಕಲ್ಪಿಸುವ ಎಲ್ಲ ಗ್ರಾಹಕ ಸೇವೆಗಳಲ್ಲಿ ಬಿಗಡಾಯಿಸುತ್ತಿರುವ ಕನ್ನಡದ ಸ್ಥಿತಿಯ ಬಗ್ಗೆ ತೀವ್ರವಾಗಿ ನೊಂದಿದ್ದರು. ಅವರಿಗಾದ … ಓದನ್ನು ಮುಂದುವರೆಸಿ
ಹಿಂದಿ ಹೇರಿಕೆ ವಿರೋಧಿ ಚಳುವಳಿಗೆ ಐವತ್ತು ವರುಶ – ಬದಲಾಗಲಿ ಭಾಷಾ ನೀತಿ
ನಾಡಿದು ಭಾನುವಾರ ಜನವರಿ 25ಕ್ಕೆ ತಮಿಳುನಾಡಿನಲ್ಲಿ ಹಿಂದಿ ಹೇರಿಕೆಯನ್ನು ವಿರೋಧಿಸಿ ನಡೆದ ಚಳುವಳಿಗೆ ಐವತ್ತು ವರ್ಷಗಳಾಗುತ್ತಿದೆ. ಸ್ವತಂತ್ರ ಭಾರತದ ಇತಿಹಾಸದಲ್ಲಿ ಭಾಷಾ ಸಮಾನತೆಗಾಗಿ ನಡೆದ ಅತಿ ದೊಡ್ಡ ಚಳುವಳಿಯಿದು. ಅನೇಕ ವಿದ್ಯಾರ್ಥಿಗಳು ತಮ್ಮ ಪ್ರಾಣ ಕೊಟ್ಟ ಚಳುವಳಿಯೆಂದು ಇದು ಇತಿಹಾಸದಲ್ಲಿ ದಾಖಲಾಗಿದೆ. ಭಾರತಕ್ಕೊಂದು ಭಾಷೆ ಬೇಕು, ಮತ್ತದು ಹಿಂದಿಯೇ ಆಗಬೇಕು ಅನ್ನುವ ಹಿಂದಿವಾದಿಗಳ ಭಾಷಾಂಧ ನಿಲುವು … ಓದನ್ನು ಮುಂದುವರೆಸಿ
ಎಲ್ಲ ಭಾಷೆಗಳನ್ನು ಕೇಂದ್ರದ ಅಧಿಕೃತ ನುಡಿ ಯಾಕೆ ಮಾಡಬೇಕು? – ಓಲ್ಗಾ ಕೊಸ್ಮಿಡೊ ಹೇಳ್ತಾರೆ ಕೇಳಿ
ಸಂವಿಧಾನದ ಎಂಟನೆಯ ಪರಿಚ್ಛೇದದಲ್ಲಿರುವ ಎಲ್ಲ ಭಾಷೆಗಳನ್ನು ಕೇಂದ್ರ ಸರ್ಕಾರದ ಆಡಳಿತ ನುಡಿಗಳನ್ನಾಗಿಸಿ, ಆಯಾ ರಾಜ್ಯದಲ್ಲಿ ಕೇಂದ್ರ ಸರ್ಕಾರ ಅಲ್ಲಿನ ನುಡಿಗಳಲ್ಲೇ ತನ್ನೆಲ್ಲ ನಾಗರೀಕ ಸೇವೆಗಳನ್ನು ಕೊಡಬೇಕು ಮತ್ತು ಆ ಮೂಲಕ ಸಾಮಾನ್ಯ ಜನರಿಗೆ ಅನುಕೂಲ ಕಲ್ಪಿಸಬೇಕು ಅನ್ನುವುದು ಸ್ವಾತಂತ್ರ್ಯ ಬಂದಾಗಿನಿಂದಲೂ ಇರುವ ಜೀವಂತ ಬೇಡಿಕೆ. ಈ ಬಗ್ಗೆ ಕಳೆದ ವಾರ ರಾಜ್ಯಸಭೆಯಲ್ಲಿ ತಮಿಳುನಾಡಿನ ಕಾಂಗ್ರೆಸ್ ಸದಸ್ಯ … ಓದನ್ನು ಮುಂದುವರೆಸಿ
ಹಿಂದಿ ಕಲಿತು ಸುಸಂಸ್ಕೃತರಾಗಿ : ಇದೆಂತಹ ಹುಚ್ಚು ವಾದ !
ಇತ್ತೀಚೆಗೆ ಮಕ್ಕಳ ದಿನಾಚರಣೆಯ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಕರ್ನಾಟಕದ ರಾಜ್ಯಪಾಲರು ಮಕ್ಕಳು ಹಿಂದಿ ಕಲಿತು ಸುಸಂಸ್ಕೃತರಾಗಬೇಕು ಎಂಬರ್ಥದ ಮಾತುಗಳನ್ನು ಆಡಿದ್ದು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಕರ್ನಾಟಕಕ್ಕೆ ರಾಜ್ಯಪಾಲರಾಗಿ ಇತ್ತೀಚಿನ ದಿನದಲ್ಲಿ ಬಂದ ಪ್ರತಿಯೊಬ್ಬರೂ ಹಿಂದಿ ಪ್ರಚಾರಕ್ಕೆ ಟೊಂಕ ಕಟ್ಟಿ ನಿಂತಂತೆ ಕಾಣುವುದು ಹಳೆಯ ವಿಚಾರ. ಆದರೆ ಇಂತಹ ಹೇಳಿಕೆಯ ಹಿಂದಿರುವ ಮನಸ್ಥಿತಿಯು ಭಾರತದ ಭಾಷಾ ವೈವಿಧ್ಯತೆಯನ್ನು ಹೇಗೆ ನೋಡುತ್ತಿದೆ … ಓದನ್ನು ಮುಂದುವರೆಸಿ
ಹಿಂದಿಯಲ್ಲೇ ಕೊಂಕಣಿ ಬರೆಯಬೇಕೆಂಬ ಬಲವಂತದ “ಸಾಹಿತ್ಯ ಸ್ನಾನ” !
ಕರ್ನಾಟಕದ ಕೊಂಕಣಿ ಭಾಷಿಕರು ಕನ್ನಡ ಲಿಪಿಯಲ್ಲಿ ಬರೆದರೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಇಲ್ಲ ! ಇದೇ ಭಾನುವಾರ ಮಾರ್ಚ್ 16ರಂದು ಮಂಗಳೂರಿನಲ್ಲಿ ಕರ್ನಾಟಕ ಕೊಂಕಣಿ ಸಾಹಿತ್ಯ ಸಮ್ಮೇಳನ ನಡೆಯುತ್ತಿದೆ. ಈ ಸಂದರ್ಭದಲ್ಲಿ ಕರ್ನಾಟಕದ ಕೊಂಕಣಿ ಭಾಷಿಕರು ಎದುರಿಸುತ್ತಿರುವ ಒಂದು ತೊಂದರೆಯ ಬಗ್ಗೆ ಕರ್ನಾಟಕದ ಗಮನ ಸೆಳೆಯಬೇಕಿದೆ. ಕನ್ನಡದ ಮತ್ತು ಕರ್ನಾಟಕದ ಬೆಳವಣಿಗೆಯಲ್ಲಿ ಕೊಂಕಣಿ ಭಾಷಿಕರ … ಓದನ್ನು ಮುಂದುವರೆಸಿ