Author Archives: ಸಂದೀಪ್ ಕಂಬಿ Sandeep Kambi

ಕನ್ನಡದ ವಿಜ್ಞಾನದ ಬರಹಗಳಲ್ಲಿ ಪದಬಳಕೆಯ ಸಮಸ್ಯೆಗಳು 1 – ಪದಕಾಂಡಗಳು

ವಿಜ್ಞಾನದ ಬರಹಗಳನ್ನು ಕನ್ನಡದಲ್ಲಿ ಓದಿದವರಿಗೆ ಪದಗಳ ತೊಡಕು ಮತ್ತು ಗೊಂದಲಗಳ ಅರಿವಿರುತ್ತದೆ. ಮೊದಲೇ ವಿಜ್ಞಾನದ ವಿಷಯಗಳು ತೊಡಕಿನದ್ದಾಗಿರುವ ಕಾರಣ ಅವನ್ನು ಓದಿ ತಿಳಿಯುವುದು ಸುಲಭದ ಕೆಲಸವೇನೂ ಅಲ್ಲ. ವಿಷಯದ ಆಳಕ್ಕೆ ಇಳಿದಂತೆ ಈ ತೊಡಕು, ಗೊಂದಲಗಳು ಹೆಚ್ಚಾಗುತ್ತಲೇ ಹೋಗುತ್ತವೆ. ಆದ್ದರಿಂದ ತಿಳಿಯಾಗಿ, ನೇರವಾಗಿ, ಗೊಂದಲಗಳಿಲ್ಲದೆ, ಓದುಗರಿಗೆ ಅರ್ಥವಾಗುವಂತೆ, ತಿಳಿಸಬೇಕಾದ ವಿಷಯಗಳನ್ನು ಪದಗಳು ತಿಳಿಸಿದರೆ ವಿಜ್ಞಾನವನ್ನು ಓದಿ … ಓದನ್ನು ಮುಂದುವರೆಸಿ

Posted in ಕನ್ನಡ, ನುಡಿಯರಿಮೆ | ನಿಮ್ಮ ಟಿಪ್ಪಣಿ ಬರೆಯಿರಿ

ನುಡಿಯರಿಮೆಗೆ ಡಾ.ಡಿ.ಎನ್.ಶಂಕರ ಬಟ್ಟರ ಕೊಡುಗೆ

ಕಳೆದ ಭಾನುವಾರ, ಅಂದರೆ ಮೇ 17 2015ರ ಸಂಜೆ ಬೆಂಗಳೂರಿನ ‘ಟೋಟಲ್ ಕನ್ನಡ’ದಲ್ಲಿ ‘ನುಡಿಯರಿಮೆ ವಲಯಕ್ಕೆ ಡಾ. ಡಿ. ಎನ್. ಶಂಕರ ಬಟ್ಟರ ಕೊಡುಗೆಗಳು’ ಎಂಬ ವಿಷಯದ ಬಗ್ಗೆ ನಾನು ಮಾತಾಡಿದೆನು. ನುಡಿಯರಿಮೆ ಎಂದರೇನು ಎಂದು ಸಣ್ಣದಾಗಿ ಪರಿಚಯಿಸಿ, ಶಂಕರ ಬಟ್ಟರು ನಡೆಸಿದ ಅಧ್ಯಯನ, ಸಂಶೋಧನೆ, ಅವರು ಬರೆದ ಹಲವು ಪುಸ್ತಕಗಳು, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ … ಓದನ್ನು ಮುಂದುವರೆಸಿ

Posted in ಕನ್ನಡ | ನಿಮ್ಮ ಟಿಪ್ಪಣಿ ಬರೆಯಿರಿ

ನುಡಿಯರಿಮೆಯ ವಲಯಕ್ಕೆ ಡಾ. ಡಿ. ಎನ್. ಶಂಕರ ಬಟ್ಟರ ಕೊಡುಗೆ – ಒಂದು ಮಾತುಕತೆ

ಕನ್ನಡದ ನಿಜಸ್ವರೂಪವನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಡಾ. ಡಿ. ಎನ್. ಶಂಕರ ಬಟ್ಟರು ಹಲವಾರು ಸಂಶೋಧನೆಗಳನ್ನು ನಡೆಸುತ್ತಾ ಬಂದಿರುವುದು ತಿಳಿದಿರುವ ವಿಚಾರ. ಅವರು ಬರೆದಿರುವ ‘ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ’, ‘ನಿಜಕ್ಕೂ ಹಳೆಗನ್ನಡ ವ್ಯಾಕರಣ ಎಂತಹದು?’, ‘ಕನ್ನಡ ಪದಗಳ ಒಳರಚನೆ’, ‘ಕನ್ನಡ ಬರಹದ ಸೊಲ್ಲರಿಮೆ’ (1-4) ಮುಂತಾದ ಹೊತ್ತಗೆಗಳು ಕನ್ನಡದ ನಿಜಸ್ವರೂಪದ ಬಗ್ಗೆ ಸಾಕಷ್ಟು ಚರ್ಚೆಗಳಿಗೆ ಎಡೆ … ಓದನ್ನು ಮುಂದುವರೆಸಿ

Posted in ಕನ್ನಡ | ನಿಮ್ಮ ಟಿಪ್ಪಣಿ ಬರೆಯಿರಿ

ನಿಜಕ್ಕೂ ಹಳೆಗನ್ನಡ ವ್ಯಾಕರಣ ಎಂತಹದು? – ಹೊತ್ತಗೆ ಪರಿಚಯ

ಶಾಲೆ ಕಾಲೇಜುಗಳಲ್ಲಿ ಕನ್ನಡ ವ್ಯಾಕರಣವನ್ನು ಕಲಿತಾಗ ಕೆಲವು ಬಗೆಹರಿಯದ ಅನುಮಾನಗಳು ಎಲ್ಲರಿಗೂ ಬಂದೇ ಇರುತ್ತವೆ. ಉದಾಹರಣೆಗೆ, ‘ದೆಸೆಯಿಂದ’ ಎಂಬ ಪ್ರತ್ಯಯ ಹೊಂದಿರುವ ಪಂಚಮ ವಿಭಕ್ತಿಯ ಬಗ್ಗೆ ಹೇಳಿಕೊಡಲಾಗುತ್ತದೆ. ಆದರೆ ‘ಇಂದ’ ಪ್ರತ್ಯಯವಿರುವ ಮೂರನೇ ವಿಭಕ್ತಿಗೂ ಈ ಐದನೇ ವಿಭಕ್ತಿಗೂ ಬೇರೆತನವೇನೆಂಬ ಗೊಂದಲಕ್ಕೆ ಒಳಗಾಗದವರಿಲ್ಲ. ಹಾಗೆಯೇ, ಕಾಲಗಳ ಬಗ್ಗೆ ಹೇಳುವಾಗ ‘ಹೋಗುತ್ತಾನೆ’ ಎಂಬುದನ್ನು ವರ್ತಮಾನ ಕಾಲಕ್ಕೆ ಉದಾಹರಣೆಯಾಗಿ … ಓದನ್ನು ಮುಂದುವರೆಸಿ

Posted in ಕನ್ನಡ, ಹೊತ್ತಗೆ ಪರಿಚಯ | ನಿಮ್ಮ ಟಿಪ್ಪಣಿ ಬರೆಯಿರಿ